ಬಳ್ಳಾರಿ: ಮಹಾನಗರ ಪಾಲಿಕೆ 35ನೇ ವಾರ್ಡಿನಲ್ಲಿ ಆಯುಕ್ತರಾದ ಮಂಜುನಾಥ ಅವರು ಭೇಟಿ ನೀಡಿ ವಿದ್ಯಾನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ನಾಗರಿಕ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಆಲಿಸಿದರು.
ಆಯುಕ್ತರೊಂದಿಗೆ ಪಾಲಿಕೆಯ ಮಾಜಿ ಮೇಯರ್ ರಾಜೇಶ್ವರಿ ಸುಬ್ಬಾರಾಯುಡು, ೩೫ನೇ ವಾರ್ಡಿನ ಸದಸ್ಯರಾದ ವಿ.ಶ್ರೀನಿವಾಸುಲು(ಮಿಂಚು), ಕಾರ್ಯಪಾಲಕ ಅಭಿಯಂತರ ಮಹೇಶ್, ಅಧಿಕಾರಿಗಳಾದ ವೀರೇಶ್, ಪ್ರಕಾಶ್, ಭಾನು, ಕಿರಣ್, ರಾಜಪ್ಪ, ಧುರೀಣರಾದ ಕುಬೇರ, ಲಕ್ಷ್ಮಿನಾರಾಯಣ, ವೆಂಕಟೇಶ್, ಗಾದಿ, ಮಾರುತಿ, ವೀರೇಶ, ಶಾಮ, ಮಂಜು ಇನ್ನಿತರರು ಇದ್ದರು.