LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಪಿಎಲ್ ಕಾರ್ಡ್ ರದ್ದು ಗೊಳಿಸುತ್ತಿರುವುದು ಖಂಡನೀಯ

ತಿಪಟೂರು : ತಾಲೂಕಿನಲ್ಲಿ ಸುಮಾರು 52,000 ಬಿಪಿಎಲ್ ಕಾರ್ಡುಗಳಿದ್ದು ಇದರ ಮೂಲಕ ಕಡುಬಡವರು  ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಗಳೇ ಆಧಾರವಾಗಿದ್ದು ಸರ್ಕಾರ ಇದೀಗ ಹಲವಾರು ಮಾನದಂಡಗಳನ್ನು ಹಾಕುವುದರ ಮೂಲಕ ಬಡವರ ಮೇಲೆ ಗದಾ ಪ್ರಹಾರವನ್ನು ನಡೆಸುತ್ತಿದೆ ಎಂದು ತಿಪಟೂರು ಜೆಡಿಎಸ್ ನಾಯಕ ಕೆ ಟಿ ಶಾಂತ್ ಕುಮಾರ್ ಆರೋಪಿಸಿದರು.

 

ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಸರ್ಕಾರ ಇದೇ ರೀತಿ ಬಡವರ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವ ಹಂತಕ್ಕೆ ಹೋದಲ್ಲಿ ತಾಲೂಕಿನಾದಂತ್ಯ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಡುಗಳು ರದ್ದಾಗುವ ಭೀತಿ ಇದೆ. ಈ ರೀತಿಯಾದಲ್ಲಿ ತಾಲೂಕಿನಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಇದೆ ವೇಳೆ ಅವರು ಸರ್ಕಾರಕ್ಕೆ ಎಚ್ಚರಿಸಿದರು.



ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯೂ ಇಂತಿಷ್ಟು ಮಾನದಂಡಗಳನ್ನು ಹೊಂದಿರಬೇಕು ಎಂಬ ಆದೇಶಗಳನ್ನು ಇದೀಗ ಬಡವರ ಮೇಲೆ ಏರುತ್ತಿದ್ದು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ವಾರ್ಷಿಕ ವರಮಾನಕ್ಕಿಂತ ಹೆಚ್ಚಿನ ಆದಾಯವಿರುವ ಕುಟುಂಬಗಳ ಮೇಲೆ ಬಿಪಿಎಲ್ ರದ್ದು ತೂಗುಗ ತ್ತಿ ನೇತಾಡುತ್ತಿದ್ದು ಈಗಾಗಲೇ ತಾಲೂಕಿನ ಹಲವಾರು ಪಂಚಾಯಿತಿಗಳ ಮೂಲಕ ಕಾರ್ಡ್ ದಾರರಿಗೆ ನೋಟಿಸ್ ನೀಡಲಾಗಿದೆ.

ಇಂದಿನ ಜೀವನದಲ್ಲಿ ಒಬ್ಬ ಕಡು ಬಡವ ರೈತ ಕೂಲಿ ಕಾರ್ಮಿಕ ದಿನಗೂಲಿ ನೌಕರ ಹಾಗೂ ಗಾರ್ಮೆಂಟ್ಸ್ ಕಾರ್ಮಿಕರಿಗೆ ವಾರ್ಷಿಕ ಎರಡು ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿರುವುದು ಸರ್ವೇಸಾಮಾನ್ಯವಾಗಿದ್ದು ಅದರಲ್ಲಿ ಉಳಿತಾಯ ಎಷ್ಟು ಮಾಡುತ್ತಿದ್ದಾರೆ ಎಂಬುದು ಸರ್ಕಾರ ಲೆಕ್ಕ ಹಾಕಬೇಕು ಕೇವಲ ಯಾವುದೋ ಒಂದು lಮಾನದಂಡದ ಆಧಾರದ ಮೇಲೆ ಕಾಡುಗಳನ್ನು ರದ್ದುಗೊಳಿಸುತ್ತಿರುವುದು ಅಕ್ಷಮ್ಯ. ಇಂದು ಬಿಪಿಎಲ್ ಕಾರ್ಡ್ ಗಳು ಹೆಚ್ಚಿನದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಬಳಸುತ್ತಿದ್ದು ಸರ್ಕಾರ ಇಂತಹ ಕಾಡುಗಳನ್ನು ರದ್ದುಗೊಳಿಸಿದ್ದೆ ಆದಲ್ಲಿ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಬೇಕಾದರೆ ಸರ್ಕಾರವೇ ಗ್ಯಾರಂಟಿ ಯನ್ನು ರದ್ದುಗೊಳಿಸಿ ಆದರೆ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಬೇಡಿ ಎಂದು ಇದೇ ವೇಳೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.



ತಾಲೂಕಿನಲ್ಲಿ ಈಗಾಗಲೇ ಹಲವಾರು ಸರ್ಕಾರಿ ನೌಕರರು ಬಳಿಯೂ ಬಿಪಿಎಲ್ ಕಾರ್ಡುಗಳಿದ್ದು ಸರ್ಕಾರ ಮೇಲ್ನೋಟಕ್ಕೆ ಜನರ ಕಣ್ಣುರಿಸುವ ತಂತ್ರ ಎಂಬಂತೆ ಸರ್ಕಾರಿ ನೌಕರರನ್ನು ಬಿಟ್ಟು ಬಡ ಜನರ ಹೊಟ್ಟೆಯ ಮೇಲೆ ಕಲ್ಲು ಹೊಡೆಯುತ್ತಿದೆ ಎಂಬುದಾಗಿ ನೇರವಾಗಿ ಸರ್ಕಾರಕ್ಕೆ ಚಾಟಿ ಬೀಸಿದರು .

 

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ ಮುಖಂಡರಾದ ಸುದರ್ಶನ್, ಕುಮಾರ್, ಹರೀಶ್ ಮೊದಲಾದವರು ಹಾಜರಿದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST