ನಗರದ ಬಾಲ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು ನಾವು ಈ ಹಿಂದೆ ಆರೋಗ್ಯ ಮತ್ತು ದೈಹಿಕ ದೃಢತೆಗಾಗಿ ಸ್ಟೀಲ್ ಸಿಟಿ ರನ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೆವೆ. ಕಳೆದ ಮೂರು ವರ್ಷದಿಂದ ಸ್ಟೀಲ್ ಸಿಟಿ ರನ್ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸುವುದರಿಂದ ಇದನ್ನು ಸಾರ್ವಜನಿಕ ಗೊಳಿಸುವ ಉದ್ದೇಶದಿಂದ 3 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ದೂರದ ಓಟ ಹಮ್ಮಿಕೊಳ್ಳಲಾಗಿದೆ. ಸಂಗನಕಲ್ಲು ರಸ್ತೆಯ ವಿಜಡಮ್ ಶಾಲೆಯಿಂದ ಆರಂಭವಾಗಿದೆ. ವಿಜಯ್ ಶಾಲಿ 5.25 ಲಕ್ಷದ ಬಹುಮಾನ ಮತ್ತು ಟ್ರೋಪಿ ವಿತರಣೆ ಮಾಡಲಾಗುತ್ತದೆ ಎಂದರು. ನಾಲ್ಕು ಮತ್ತು 5ನೇ ಬಹುಮಾನ ಬಳ್ಳಾರಿ ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಆರೋಗ್ಯ ಮತ್ತು ಫಿಟ್ನೆಸ್ ಗಾಗಿ ಎಲ್ಲರೂ ಈ ಓಟದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ನೊಂದಣಿ ಶುಲ್ಕ 10 ಕಿ.ಮೀ ಗೆ 500 ರೂ, ಐದು ಕಿಲೋಮೀಟರ್ ಗೆ 400 ರೂ, ಮೂರು ಕಿಲೋಮೀಟರ್ ಸ್ಪರ್ಧೆಗೆ 350 ರೂ. ನಿಗದಿಗೊಳಿಸಲಾಗಿದೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಒಂದು ಟೀ ಶರ್ಟ್, ಮುಂಜಾನೆಯ ಉಪಹಾರ ಮತ್ತು ಓಟದ ಮಧ್ಯದಲ್ಲಿ ಹೆಲ್ತ್ ಚೆಕ್ ಅಪ್ ಕ್ಯಾಂಪ್ ಗಳನ್ನು ಸಹ ಅಳವಡಿಸಲಾಗುವುದು. ನಗರದ ಸಾರ್ವಜನಿಕರು ಈ ಸ್ಟೀಲ್ ಸಿಟಿ ರನ್ ಓಟದ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯವಂತರಾಗಿರಿ ಎಂದು ಅವರು ಸಾರ್ವಜನಿಕರಿಗೆ ತಿಳಿಸಿದರು.
ಈ ಸ್ಪರ್ಧೆಯಲ್ಲಿ ದೇಶದ 14 ರಾಜ್ಯಗಳ 4000 ಅಧಿಕ ಜನ ಪಾಲ್ಗೊಳ್ಳುವ ನೀರಿಕ್ಷೆ ಇದೆ. 1000 ಜನ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಇದು ಹೆಮ್ಮೆಯ ವಿಷಯ, ಅತ್ಯಂತ ಮುಖ್ಯವಾಗಿ ಈ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಅಥ್ಲೆಟ್ ನಗರದ ವಿ.ಸುದೀಷ ರೆಡ್ಡಿ ಉದ್ಘಾಟಿಸುವರು. ಈ ಕಾರ್ಯಕ್ರಮವನ್ನು ಜೆಎಸ್ಡಬ್ಲ್ಯೂ ಸೇರಿದಂತೆ ವಿವಿಧ ಸಂಸ್ಥೆಗಳು ಪ್ರಾಯೋಜಕತ್ವವನ್ನು ಹೊಂದಿವೆ. ಆಸಕ್ತರು ಅದೇ ದಿನ ಕೂಡ ನೋಂದಣಿಯನ್ನು ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಈ ಪತಿಕಾಗೋಷ್ಠಿಯಲ್ಲಿ ಪ್ರಶಾಂತ್, ರವಿಶಂಕರ್, ವಿನೋದ್ ಜೈನ್, ಡಾಕ್ಟರ್ ಶಶಿಧರ್, ಡಾಕ್ಟರ್ ಸುಂದರ್, ಗಿರೀಶ್ ಕುಮಾರ್ ಗೌಡ ಹಾಜರಿದ್ದರು.