LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ನೆಲದಲ್ಲಿ ತೆಲುಗು ಸ್ವಾಗತ ದ್ವಾರ

ಸಿರುಗುಪ್ಪ:  ತಾಲ್ಲೂಕಿನ ಇಬ್ರಾಹಿಂಪುರದಲ್ಲಿ ಕಳೆದ ಎರಡು ದಿನಗಳಿಂದ ಆಂಧ್ರದ ಕರ್ನೂಲ್ ಜಿಲ್ಲೆ ಕೌತಾಳ ಮಂಡಲದ ಉರುಕುಂದ ದೇವಸ್ಥಾನದ ಆಡಳಿತ ಮಂಡಳಿಯು 25.07.2025 ರಿಂದ 23.08.2025ರವರಗೆ ಉರುಕುಂದದಲ್ಲಿ ಜರುಗಲಿರುವ ಶ್ರಾವಣ ಮಾಸ ಉತ್ಸವದ ಪ್ರಯುಕ್ತ  ನಿರ್ಮಿಸಿರುವ ತಾತ್ಕಾಲಿಕ ಸ್ವಾಗತದ ದ್ವಾರದ ಬೋರ್ಡ್ ಮೇಲೆ  ಶ್ರಾವಣಮಾಸ ಉತ್ಸವಮುಲು ಎಂದು ಕನ್ನಡವನ್ನು ಕಡೆಗಣಿಸ ಇಡೀ ಬೋರ್ಡ್ ತುಂಬಾ ತೆಲುಗಿನ ಅಕ್ಷರದಿಂದ ಬರೆಯಲಾಗಿದೆ. 



ಇದಲ್ಲದೇ ಇದನ್ನು ನಗರಸಭೆಯ ಗಮನಕ್ಕೆ ತರದೇ, ಪರವಾನಗಿ ಇಲ್ಲದೇ ಇಲ್ಲಿ ಹಾಕಿದವರು ಯಾರು? ಅಥವಾ ಪರವಾನಗಿ ನೀಡುವಾಗ ಇದ್ಯಾವುದನ್ನು ನೋಡಿಲ್ಲವೆ, ನೋಡಿಯೂ ನೋಡದಂತಿರುವ ಅಧಿಕಾರಗಳ ನಡೆಯಿಂದ ಅನಾಧಿಕೃತವಾಗಿ  ಈ ದ್ವಾರವನ್ನು ಇಲ್ಲಿ ಸ್ಥಾಪಿಸಲಾದೆಯೇ? ಈಗಾಗಲೇ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಎಲ್ಲ ಕಡೆ ಬಳಸಬೇಕೆಂಬ ಹೈಕೋರ್ಟ್ ಆದೇಶವಿದ್ದಾಗಲೂ ಈ ಅಸಡ್ಡೆಯ ನಡೆ ಕನ್ನಡ ಪ್ರೇಮಿಗಳನ್ನು ಕೆರಳುವಂತೆ ಮಾಡಿದೆ. ಹಾಗಾಗಿ ಕೂಡಲೇ ನಗರಸಭೆ ಪದಾಧಿಕಾರಿಗಳು ಎಚ್ಚೆತ್ತು ಸ್ವಾಗತ ದ್ವಾರವನ್ನು ಪರಿಷ್ಕರಿಸಬೇಕು ಅಥವಾ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ ಎಂದು ಕನ್ನಡ ಪ್ರೇಮಿ ಸಂಘ ಮತ್ತು ಕಾರಂತ ರಂಗಲೋಕ ಸಂಸ್ಥೆಯ ಕಾರ್ಯದರ್ಶಿ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ತಿಳಿಸಿದ್ದಾರೆ.
ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು, ನಗರಸಭೆ ವ್ಯಾಪ್ತಿಗೆ ಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತೆವೆ. ಇಲ್ಲವೆ ಕನ್ನಡಪರ ಕೆಲಸವಾಗಿರುವುದರಿಂದ ಸಂಬಂಧಪಟ್ಟ ಗ್ರಾ.ಪಂ ಪಿಡಿಓ ಗೆ ತಿಳಿಸುತ್ತೇವೆ.

 - ಗಂಗಾಧರ, ಪೌರಾಯುಕ್ತರು, ನಗರಸಭೆ, ಸಿರುಗುಪ್ಪ.



 
ಕನ್ನಡ ನಾಡು, ನುಡಿಯ ವಿಚಾರ ಬಂದಾಗ ಎಲ್ಲರೂ ಇರುವ ಎಲ್ಲಾ ಮೇರೆಗಳನ್ನು ಮೀರಿ ಕನ್ನಡ ಕಡೆಗಣಿಸುವವರ ವಿರುದ್ಧ ಧ್ವನಿ ಎತ್ತಬೇಕು. ಇಲ್ಲವಾದರೆ ಕನ್ನಡ ಉಳಿಯಲು, ಉಳಿಸಲು ಸಾಧ್ಯವಿಲ್ಲ.

-ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ಕಾರ್ಯದರ್ಶಿ, ಕಾರಂತ ರಂಗಲೋಕ (ರಿ), ಭೈರಗಾಮದಿನ್ನೆ.


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST