LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ತಾಲ್ಲೂಕು ಕುಂದು ಕೊರತೆ ಸಭೆ

ಮೊಳಕಾಲ್ಮುರು : ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಉಪವಿಭಾಗ ಅಧಿಕಾರಿಗಳಾದ ಕಾಂತರಾಜರವರ ಅಧ್ಯಕ್ಷತೆಯಲ್ಲಿ ರೈತರ ಹಾಗೂ ಜನರ ಕುಂದು ಕೊರತೆ ಸಭೆಯನ್ನು ತಾಲ್ಲೂಕು ಆಡಳಿತವತಿಯಿಂದ ಆಯೋಜನೆ ಮಾಡಲಾಗಿತ್ತು.

ಸಭೆಯಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪಧಾಧಿಕಾರಿಗಳು ಭಾಗವಹಿಸಿದ್ದು,  ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರೆಡ್ಡಿ ಹಾಗೂ ಜಿಲ್ಲಾ ಅಧ್ಯಕ್ಷ ಟಿ ರವಿಕುಮಾರ್ ಮಾತನಾಡಿ, ನಾವುಗಳು ಈಗಾಗಲೇ ಸಾಕಷ್ಟು ಬಾರಿ ನಿಮ್ಮ ಜೊತೆಯಲ್ಲಿ ಸಭೆಗಳನ್ನು ಮಾಡಿದ್ದೇವೆ ಅದರೆ ಸಮಸ್ಯೆಗಳಿಗೆ ಉತ್ತರ ಮಾತ್ರ ಸಿಕ್ಕಿಲ್ಲ. ಬದಲಿಗೆ ಸಮಸ್ಯೆಗಳು ಜಾಸ್ತಿ ಆಗಿದೆ. ಉದಾಹರಣೆಗೆ ಮೊಳಕಾಲ್ಮುರು ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳ ಪಡುವ ಸಂತೇ ಸಮಸ್ಯೆ ಸುಮಾರು ವರ್ಷಗಳು ಕಳೆದರೂ ಬಗೆ ಹರಿದಿಲ್ಲ. ಇಂತಹ ಸಮಸ್ಯೆಗಳು ಸಾಕಷ್ಟು ಪರಿಷ್ಕಾರ ಮಾತ್ರ ಸಿಕ್ಕಿಲ್ಲ ಬದಲಿಗೆ ನೀವುಗಳು ಇಂದು ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತೀರಾ ಎಂದು ಬೇಸರ ವ್ಯಕ್ತಪಡಿಸಿದ ಸಭೆಯನ್ನು ಬಹಿಷ್ಕಾರ ಹಾಕಿ ಸಭೆಯಿಂದ ಹೊರ ನಡೆದರು.

ಸಭೆಯಲ್ಲಿ ಜಿಂಕಲ ಬಸವರಾಜ್ ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿ ಆಡಳಿತ ಅಧಿಕಾರಿಗಳ ಆಡಳಿತವಿದೆ. ಆದರೆ ರಾಂಪುರ ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿಯಾಗಿ ತಹಸೀಲ್ದಾರ್ ಟಿ ಜಗದೀಶ್ ರವರನ್ನು ನೇಮಕ ಮಾಡಿದ್ದೀರಿ. ಅವರು ಎರಡು ತಿಂಗಳುಗಳ ಕಾಲ ರಜೆ ಹಾಕಿದ್ದಾರೆ ಹಾಗಾಗಿ ರಾಂಪುರ ಗ್ರಾಮ ಪಂಚಾಯತಿಯಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಪ್ರಶ್ನೆ ಹಾಕುದರು, ಹಾಗೂ ಪೌತಿ ಬದಲಾವಣೆಯಲ್ಲಿ ತಾಂತ್ರಿಕ ದೋಷವೆಂದು ವರ್ಷಗಳು ಉರುಳಿದರು ಖಾತೆ ಬದಲಾವಣೆ ಆಗಿಲ್ಲ ಇದಕ್ಕೆ ಯಾರು ಹೊಣೆ ಎಂದು ಉಪ ವಿಭಾಗ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ರಾಂಪುರ ಗ್ರಾಮದ ಮುಖಂಡರಾದ ಡಿ ಸಿ ನಾಗರಾಜ್ ಮಾತನಾಡಿ ಇಂದು ರಾಂಪುರ ಹಾಗೂ ತಾಲ್ಲೂಕಿನ ರಸ ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಕೊರತೆ ಎದ್ದು ಕಾಣುತ್ತಿದೆ. ಕೆಲವೊಂದು ಅಂಗಡಿಗಳಲ್ಲಿ ರೇಟ್ ಬದಲಾವಣೆ ಇದೆ, ಇದರಿಂದ ರೈತರಿಗೆ ನಷ್ಟವಾಗುತ್ತದೆ ಎಂದು ತಿಳಿಸಿದರು.

ಇವರ ಪ್ರಶ್ನೆಗೆ  ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಮಂಜುನಾಥ್ ಮಾತನಾಡಿ ಇರಾನ್ ಇರಾಕ್ ಇಶ್ರಲ್ ಅಮೇರಿಕಾ ಮಧ್ಯ ಯುದ್ಧ ನಡೆಯುದರಿಂದ ಕಚ್ಚ ಸಾಮಾನು ತರುವವಲ್ಲಿ ವೆಚ್ಚ ಜಾಸ್ತಿ ಆಗುತ್ತಿದೆ. ನಾವುಗಳು ರಾಸಾಯನಿಕ ಗೊಬ್ಬರದ ಬದಲಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಳ್ಳಬೇಕು. ಅಂದರೆ ಸಾವಯವ ಕೃಷಿ ಗೊಬ್ಬರ , ಜೈವಿಕ ಗೊಬ್ಬರ, ಹೆಂಡೆ ಗೊಬ್ಬರ ಸಂಪ್ರದಾಕ ಗೊಬ್ಬರ ಹೆರೆಹುಳು ಗೊಬ್ಬರ ಬಳಸಿದರೆ ಒಳ್ಳೆಯದು ಇಲ್ಲವಾದಲ್ಲಿ ನಮ್ಮ ಭೂಮಿ ನಿರ್ಜಿವಿಯಾಗುತ್ತದೆ. ಇದರಿಂದ ನಾವುಗಳು ರೋಗಗ್ರಾಸ್ತ ರಾಗುತ್ತೇವೆ. ನಮಗೆ ಎಷ್ಟು ಸಾಧ್ಯವೋ ಅಷ್ಟು ರಾಸಾಯನಿಕ ವಸ್ತುಗಳಿಂದ ದೂರವಿರ ಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷರು ಭಕ್ತ ಪ್ರಹ್ಲಾದ್ ಮಾತನಾಡಿ  ಬೆಳೆ ವಿಮೆ ನೀಡುವಲ್ಲಿ 7ವರ್ಷಗಳ ಬೆಲೆಯಲ್ಲಿ 5ವರ್ಷ ಸಾರಾಸರಿ ಇಳುವರಿ ನೀತಿಯನ್ನು ಕೇಂದ್ರ ರಾಜ್ಯ ಸರ್ಕಾರಗಳು ಅನುಸರಿಸುತ್ತಿದ್ದು ಇದರಿಂದ ನಮ್ಮ ತಾಲ್ಲೂಕಿಗೆ 10 ವರ್ಷಗಳಲ್ಲಿ ಕಡಿಮೆ ಕಳೆ ಆಗುತ್ತಿದ್ದು, ಇದರ ಪರಿಣಾಮ ನಮ್ಮ ತಾಲ್ಲೂಕಿಗೆ ವಿಮೆ ನೀಡುವಲ್ಲಿ ಅನ್ಯಾಯವಾಗುತ್ತಿದೆ. ಆದುದರಿಂದ ಇದನ್ನು ರಾಜ್ಯ ಮಟ್ಟದಲ್ಲಿ ಸರಿ ಪಡಿಸಬೇಕು ಎಂದು ಮನವಿ ನೀಡಿದರು.

 

 ಸಭೆಯಲ್ಲಿ ಕಾಂತ್ ರಾಜ್ ಉಪ ವಿಭಾಗ ಆಧಿಕಾರಿ ಉಮೇಶ್ ಜಿಲ್ಲಾ ಉಪ ಕೃಷಿ ನಿರ್ದೇಶಕರು, ಮಂಜುನಾಥ್ ತಾಲ್ಲೂಕು ಕೃಷಿ ನಿರ್ದೇಶಕರು ಬೆಸ್ಕಾಂ ಇಲಾಖೆ ರಾಜಣ್ಣ, ರೇಷ್ಮೆ ಇಲಾಖೆ ಮಹೇಶ್,  ಮಹಾಂತೇಶ್ ಉಪ ತಹಸೀಲ್ದಾರ್, ನಂದೀಶ್ ತಾಲ್ಲೂಕು ಪಂಚಾಯತಿ, ಮಂಜುನಾಥ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು , ರವಿಕುಮಾರ್ ಟಿ ಜಿಲ್ಲಾ ಅಧ್ಯಕ್ಷರು ರೈತ ಸಂಘ, ಬಸವರೆಡ್ಡಿ ರಾಜ್ಯ ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ, ರವಿಕುಮಾರ್ ಗೊಬ್ಬರ ವಿತರಕರ ಸಂಘದ ಅಧ್ಯಕ್ಷರು, ರಾಜಣ್ಣ ಬೆಸ್ಕಾಂ ಅಧಿಕಾರಿ, ಫೀರೋಜ್ ಖಾನ್, ಪಪ ಮುಖ್ಯ ಆಧಿಕಾರಿ, ನಾಗರಾಜ್ ರಾಂಪುರ ಇನ್ನಿತರರು ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ