ಬೆಂಗಳೂರು : ಮಾಜಿ ಸೈನಿಕರ ಸಂಘ ಹಾಗೂ ದಾನಿಗಳ ನೆರವಿನಿಂದ ಎಂ.ಬಿ.ಬಿ.ಎಸ್ ಅಧ್ಯಯನ ಮಾಡುತ್ತಿರುವ ಇಬ್ಬರು ಬಡ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಯಿತು.
ಚಂದ್ರ ಲೇಔಟ್ ನ ಎಕೆಎಂಎಸ್ಎಸ್ ಸೈನಿಕ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ ಎನ್.ಕೆ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಮಾಜಿ ಸಂಸದೆ ಡಾ. ತೇಜಸ್ವಿನಿ ಗೌಡ, ಬೆಂ.ವಿ.ವಿ. ಮಾಜಿ ಕುಲಪತಿ ಎಂ.ಎನ್. ಪ್ರಭುದೇವ ಹಾಗೂ ಸಂಘದ ಜಿ. ಎಂ ಜಯಣ್ಣ, ಸೋಮಣ್ಣಕೆ.ಪಿ. ಕೃಷ್ಣೇಗೌಡ, ವೇಣು.ಸಿ. ಹಾಗೂ ಎಲ್ಲಾ ಜಿಲ್ಲಾಘಟಕಗಳ ಅಧ್ಯಕ್ಷರುಗಳು, ತಾಲೂಕು ಘಟಕಗಳ ಅಧ್ಯಕ್ಷರ ಸಮ್ಮುಖದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ 85%ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಮಾಜಿ ಸೈನಿಕರ ಮಕ್ಕಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಾಗೂ ಪ್ರಿಯ ಕೃಷ್ಣ ಫೌಂಡೇಶನ್ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯದರ್ಶಿ ಲಕ್ಷ್ಮೀಶ, ಉಪಾಧ್ಯಕ್ಷ ಪ್ರಕಾಶ, ಖಜಾಂಚಿ ಲಕ್ಷ್ಮಣ್ ಹಾಗೂ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.