LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ತಹಶೀಲ್ದಾರ್ ಶೃತಿ ಎಂ.

ಮರಿಯಮ್ಮನಹಳ್ಳಿ : ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಎಸ್ ಎಲ್ ಆರ್ ಮೆಟಾಲಿಕ್ಸ್ ಲಿ. ಕಂಪನಿ ಸಿ.ಎಸ್.ಆರ್. ವಿದ್ಯಾರ್ಥಿಮಿತ್ರ ಯೋಜನೆಯಲ್ಲಿ 2024-25 ನೇ ಸಾಲಿನಲ್ಲಿ ಸುಮಾರು 18ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 2 ನೂತನ ಶಾಲಾ ಕೊಠಡಿಗಳನ್ನು ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡರ್  ಉದ್ಘಾಟನೆ  ಮಾಡಿದರು.

ನಂತರ ಎಸ್.ಎಲ್.ಆರ್. ಕಂಪನಿಯ ಸಿ.ಎಫ್.ಓ. ಶಿವದತ್ತ ರವರು ಮಾತನಾಡಿ, ಕಂಪನಿಯು ಸಿ.ಎಸ್.ಆರ್. ಅನುದಾನದಲ್ಲಿ ಹಲವಾರು ಸೌಲಭ್ಯಗಳನ್ನು ಕೊಡಲು ಸದಾ ಸಿದ್ದವಿರುತ್ತದೆ ಅವುಗಳನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಂಡು ಅವುಗಳನ್ನು ಕಾಪಾಡಿಕೊಂಡು ಹೋಗುವುದು ನಿಮ್ಮೆಲ್ಲರ ಜವಾಬ್ದಾರಿಯಾಗುತ್ತದೆ ಎಂದು ಹೇಳಿದರು.



ನಂತರ ಸಿಎಸ್ಆರ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಪ್ರಾಸ್ಥಾವಿಕವಾಗಿ ಮಾತನಾಡಿ, ಸಿಎಸ್ಆರ್  ಅನುದಾನವನ್ನು ಆರೋಗ್ಯ ಮಿತ್ರ, ರೈತ, ವಿದ್ಯಾರ್ಥಿ, ಆರೋಗ್ಯಮಿತ್ರ ಮತ್ತು ಸಾಮಾಜಿಕ  ಮಿತ್ರ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಸಮಾಜದ ಅಭಿವೃದ್ಧಿಗಾಗಿ ಅದನ್ನು ವಿನಯೋಗಿಸಲಾಗುವುದು, ಸಿ.ಎಸ್.ಆರ್ ಅನುದಾನದಲ್ಲಿ ವಿದ್ಯಾರ್ಥಿ ಮಿತ್ರ ಯೋಜನೆಯಿಂದ ನೂತನ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಂಡು, ಉಪಯೋಗಿಸುತ್ತಾ ಅವುಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡು ಹೋಗಬೇಕೆಂದು ಹೇಳಿದರು.

 

ಎಸ್.ಡಿ.ಎಂ.ಸಿ. ಹಾಗೂ ಶಿಕ್ಷಣ ಇಲಾಖೆಯಿಂದ ಕೊಠಡಿ ನಿರ್ಮಿಸಿ ಕೊಟ್ಟಿರುವ ಎಸ್‌.ಎಲ್‌.ಆರ್. ಕಂಪನಿಯ ಮುಖ್ಯಸ್ಥರಿಗೆ ಹಾಗೂ ಗುತ್ತಿಗೆದಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.



ಈ ಸಂಧರ್ಭದಲ್ಲಿ ಉಪ ತಹಸಿಲ್ದಾರ್  ಶ್ರೀಧರ ಹುರುಕಡ್ಲಿ, ನಾಡಕಚೇರಿ ಅಧಿಕಾರಿಗಳಾದ ನಾಗೇಶ,   ಎಸ್.ಡಿ.ಎಂ.ಸಿ ಉಪಾಧ್ಯಕ್ಷಿಣಿ ಎಲ್. ಜಾನಕಿ, ಪಪಟ್ಟಣ ಪಂಚಾಯಿತಿ ಸದಸ್ಯ ಮರಡಿ ಸುರೇಶ, ಎಮ್ ರಾಜು ಶಿಕ್ಷಣ ಸಂಯೋಜಕರು, ವಿನಕರಿಬಸಪ್ಪ, ಸಿ.ಆರ್‌.ಪಿ, ಎಸ್.ಎಲ್.ಆರ್ ಕಂಪನಿಯ ಮುಖ್ಯಸ್ಥರಾದ ಶಿವದತ್ತ ಸಿಎಫ್ಓ, ಸಿ ಎಸ್ ಆರ್ ವಿಭಾಗದ ಮಲ್ಲಿಕಾರ್ಜುನ, ಮಾರುತಿ ಗೋಷಿ, ಶಿವಕುಮಾರ್, ಗಾಳೆಪ್ಪ, ವಾಲಾಪುರ ರಾಜ, ಶಿವು, ಅಂಜಿನಿ, ಮುಖ್ಯ ಶಿಕ್ಷಕರಾದ ಸಿ ವೆಂಕಟೇಶ್, ಸಿ ರಂಗಪ್ಪ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಹಲಗಿ ನಾಗರಾಜ, ಗುತ್ತಿಗೆದಾರರಾದ ಅಯ್ಯನಹಳ್ಳಿ ಅಂಬರೀಶ ಸ್ಥಳೀಯರಾದ ಎಂ ವಿರೂಪಾಕ್ಷ,  ಎಂ ಮಂಜುನಾಥ, ಸೋಮನಾಥ ಇತರರಿದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST