LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಸ್ವರ್ಣಾರ್ಪಣಂ ಸಾಂಸ್ಕೃತಿ ಕಾರ್ಯಕ್ರಮ : ಆಭರಣ ಪ್ರದರ್ಶನ

ಒಂದೇ ದಿನ ಸಾವಿರ ಮಂದಿಯಿಂದ ಚಿನ್ನ ಖರೀದಿ: ಮೂಲಿಯಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಾಧನೆ

ಬೆಂಗಳೂರು : ಚಿನ್ನದ ದರ ಏರಿಕೆ ನಡುವೆಯೂ ಬೆಂಗಳೂರಿನಲ್ಲಿ  ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಮಂದಿ ಚಿನ್ನ ಖರೀದಿ ಮಾಡಿ ಮೂಲಿಯಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್  ವಿಶ್ವದಾಖಲೆ ನಿರ್ಮಿಸಿದ್ದು, ಇದರ ಸ್ಮರಣಾರ್ಥ ಡಿಕನ್ಸ್‌ ಸನ್‌ ರಸ್ತೆಯ ಮಣಿಪಾಲ್‌ ಸೆಂಟರ್‌ ನಲ್ಲಿ ಡಿ.7 ರ ಭಾನುವಾರ ಬೆಂಗಳೂರು ಮುಳಿಯಾ ದೃಷ್ಟಿ ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಸ್ವರ್ಣಾರ್ಪಣಂ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಶಕ್ತಿಯ ನವಮಣಿ, ಪಾರಂಪರೆ, ಕಲೆ ಹಾಗೂ ಮಹಿಳಾ ದೈವೀ ಶಕ್ತಿಯನ್ನು ಆಚರಿಸುವ ವಿಷಯಾಧಾರಿತ ಆಭರಣ ಪ್ರದರ್ಶನ ಸಹ ಏರ್ಪಡಿಸಲಾಗಿದೆ.



ಕೌಶಲ್ಯ ಮತ್ತು ಕಲಾ ಸಂವೇದನೆಯ ಈ ಪ್ರಕಾಶಮಾನ ಸಂಗಮದ ಕಾರ್ಯಕ್ರಮದಲ್ಲಿ ಕರುಣೆ, ಶಕ್ತಿ ಮತ್ತು ನಿತ್ಯ ಸೌಂದರ್ಯದ ಚಿಹ್ನೆಯಾದ ದೇವಿ ದುರ್ಗೆಯ ನವ ರೂಪಗಳಿಗೆ ಗೌರವ ನಮನ ಸಲ್ಲಿಸುವ  “ಸ್ವರ್ಣಾರ್ಪಣಂ – ಶಕ್ತಿಯ ನವಮಣಿ” ಕಾರ್ಯಕ್ರಮವನ್ನು ಅನಾವರಣಗೊಳಿಸಲಾಗುತ್ತಿದೆ.

ಸಂಜೆ 5.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಡಾ. ಅನುರಾಧ ವಿಕ್ರಾಂತ್ ಹಾಗೂ ದೃಷ್ಟಿ ಡ್ಯಾನ್ಸ್ ಎನ್ಸೆಂಬರ್ ತಂಡ ಈ ವಿನೂತನ ಕಾರ್ಯಕ್ರಮವನ್ನು ಪ್ರಸ್ತುಪಡಿಸುತ್ತಿದೆ.  ಪ್ರತಿ ಪ್ರದರ್ಶನದ ಬಳಿಕ “ಸ್ವರ್ಣ ನಡಿಗೆ” — ಪರಂಪರೆಯ ಆಭರಣ ರ್ಯಾಂಪ್ ಪ್ರದರ್ಶನ ನಡೆಯಲಿದೆ. ನವ ರತ್ನ ಸಂಗ್ರಹದ — ಮಾಣಿಕ್ಯ, ಮುಕ್ತಿ, ಮರಕತ, ಹವಳ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ, ವೈಢೂರ್ಯ ಮತ್ತಿತರೆ ಆಭರಣಗಳ ವಿನೂತನ ವಿನ್ಯಾಸಗಳನ್ನು ಪ್ರದರ್ಶಿಸಲಾಗುತ್ತಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ