LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಹುಟ್ಟಿನಿಂದಲೇ 3 ಕಿಡ್ನಿ ಹೊಂದಿದ್ದ ವ್ಯಕ್ತಿಗೆ ಮೆಡಿಕವರ್ನಲ್ಲಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಹುಟ್ಟಿನಿಂದಲೇ 3 ಕಿಡ್ನಿ ಹೊಂದಿರುವುದನ್ನು ತಿಳಿಯದೇ ಇದ್ದ ವ್ಯಕ್ತಿ, ಕಳೆದ ಎರಡು ವರ್ಷಗಳಿಂದ ಹೊಟ್ಟೆಯ ಎಡಭಾಗದ ನೋವು ಹಾಗೂ ಪದೇಪದೇ ಮೂತ್ರ ಸೋಂಕಿನಿAದ ಬಳಲುತ್ತಿದ್ದರು. ವೈಟ್‌ಫೀಲ್ಡ್ನ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ 3ನೇ ಕಿಡ್ನಿಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.

 

ನೋವಿನ ಮೂಲ ತಿಳಿಯಲು ಸ್ಕ್ಯಾನಿಂಗ್ ಮಾಡಿದಾಗ ಎಡಭಾಗದಲ್ಲಿ ಎರಡು ಕಿಡ್ನಿಗಳು ಇರುವ ಅಪರೂಪದ ಸ್ಥಿತಿ ಪತ್ತೆಯಾಯಿತು. ಎಡ ಕಿಡ್ನಿಯು ಎರಡು ಭಾಗಗಳಾಗಿ ವಿಭಜನೆಯಾಗಿದ್ದು, ಮೇಲಿನ ಭಾಗವು ಮೂತ್ರನಾಳದಿಂದ ಮುಚ್ಚಿಕೊಂಡಿದ್ದರಿಂದ ಸಂಪೂರ್ಣ ಹಾಳಾಗಿ 10 ಸೆಂ.ಮೀ ಗಾತ್ರಕ್ಕೆ ಉಬ್ಬಿ ಬಲೂನಿನಂತೆ ಬದಲಾಗಿತ್ತು. ಇದರಿಂದ ತೀವ್ರ ನೋವು ಹಾಗೂ ಮೂತ್ರ ಸೋಂಕುಗಳು ಉಂಟಾಗುತ್ತಿದವು.

 

ರೋಬೋಟಿಕ್ ಯೂರಾಲಜಿಸ್ಟ್ ಡಾ. ಪ್ರಮೋದ್ ಎಸ್, ಅವರ ನೇತೃತ್ವದಲ್ಲಿ ವೈದ್ಯರ ತಂಡವು ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಹಾಳಾದ ಮೇಲಿನ ಭಾಗವನ್ನು ತೆಗೆದುಹಾಕಿದರು. ಶಸ್ತ್ರಚಿಕಿತ್ಸೆಯ ವೇಳೆ ಕೆಳಗಿನ ಆರೋಗ್ಯಕರ ಕಿಡ್ನಿಯ ರಕ್ತನಾಳಗಳನ್ನು ಸುರಕ್ಷಿತಗೊಳಿಸಿ, ಮೇಲಿನ ಭಾಗವನ್ನು ಯಶಸ್ವಿಯಾಗಿ ತೆಗೆಯಲಾಯಿತು.

 

ರೋಗಿ ಶಸ್ತ್ರಚಿಕಿತ್ಸೆಯನ್ನು ಸುಗಮವಾಗಿ ಸಹಿಸಿಕೊಂಡಿದ್ದು, ಶಸ್ತ್ರೋತ್ತರ ಚೇತರಿಕೆಯೂ ಉತ್ತಮವಾಗಿದ್ದು ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಡಾ. ಪ್ರಮೋದ್ ಎಸ್ ತಿಳಿಸಿದ್ದಾರೆ. ಇದು ಅಪರೂಪ ಹಾಗೂ ಸವಾಲಿನ ಪ್ರಕರಣವಾಗಿತ್ತು. ರೋಬೋಟಿಕ್ ತಂತ್ರಜ್ಞಾನದಿಂದ ನಿಖರವಾಗಿ ಶಸ್ತ್ರಚಿಕಿತ್ಸೆ ಮಾಡಿ ಆರೋಗ್ಯಕರ ಕಿಡ್ನಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇದೀಗ ರೋಗಿಗೆ ಪದೇ ಪದೇ ಮೂತ್ರ ಸೋಂಕು ಹಾಗೂ ತೀವ್ರ ನೋವು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ