LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬಲ್ಡೋಟಾ ಹೋರಾಟಕ್ಕೆ ಸಾಥ್

ಜಂಟಿ ಕ್ರಿಯಾ ವೇದಿಕೆ ಸಭೆಯಲ್ಲಿ ಶಾಸಕ ಸಂಸದರ ಭರವಸೆ

ಕೊಪ್ಪಳ: ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ‌ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮೂಲಕ  ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಬಲ್ಡೋಟಾ ಹೋರಾಟಕ್ಕೆ ಸಾಥ್ ನೀಡುವದಾಗಿ ಭರವಸೆ ನೀಡಿದರು.

ಈ ವೇಳೆ ಹೋರಾಟಗಾರರು ಮತ್ತು ಪತ್ರಕರ್ತರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಜನಜಾನುವಾರುಗಳಿಗೆ ಬಸಾಪುರ ಕೆರೆ ಬಳಸಲು ಬಿಡುವದಕ್ಕೆ ಮಾರ್ಗೋಪಾಯ ಹುಡುಕಲು ತಿಳಿಸಿದರು.

ಕಾರ್ಖಾನೆ ಅವರು ಮಾಡಿದ ದೂರುಗಳಿಗೆ ಪ್ರತಿಯಾಗಿ ಹೋರಾಟಗಾರರು ಮತ್ತು ರೈತರು ಕೊಟ್ಟ ದೂರನ್ನು ಸಹ ಪರಿಗಣಿಸಬೇಕು ಹಾಗೂ ಹೋರಾಟಗಾರರ ಮೇಲಿನ ಸುಳ್ಳು ದೂರುಗಳಿಗೆ "ಬಿ" ರಿಪೋರ್ಟ್ ಹಾಕುವಂತೆ ಮಾತನಾಡುವದಾಗಿ ಸಭೆಯಲ್ಲಿ ಹೇಳಿದರು. ಅಲ್ಲದೇ ಮುಖ್ಯ ಮಂತ್ರಿಗಳ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿದ್ದು, ಅಲ್ಲಿಯೇ ಸಿಎಂ ಅವರು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರು, ಮೊನ್ನೆ ಹೊಸಪೇಟೆ ಗೆ ಬಂದಾಗಲೂ ಕಾರ್ಖಾನೆ ಅತ್ಯಂತ ಊರಿನ ಸಮೀಪ ಇರುವ ಸಮಸ್ಯೆ ಸಹ ತೋರಿಸಿ ವಿವರಿಸಲಾಗಿದೆ. ಸರಕಾರ ಜನರ ವಿರುದ್ಧ ಆಲೋಚನೆ ಮಾಡುವದಿಲ್ಲ ಎಂದೂ ಹೇಳಿದರು.



ಸಂಸದ ಕೆ. ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ಜನರ ಪರವಾಗಿ ಕೆಲಸ ಮಾಡಲು ತಾವು ಹೋರಾಟದ ಭಾಗವಾಗುವದಾಗಿ ಹೇಳಿದ ಅವರು, ಸಚಿವರು ಸಹ ಕಾರ್ಖಾನೆ ಬಾಧಿತರ ಸ್ಥಳಕ್ಕೆ ಆಗಮಿಸುವರು. ಕಾರ್ಖಾನೆ ಸಿಬ್ಬಂದಿ ಕುರಿಗಾಯಿ, ಧನಗಾಯಿಗಳ ಮೇಲೆ ಮಾಡಿದ ಹಲ್ಲೆ ದೌರ್ಜನ್ಯ ತಪ್ಪು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಸ್ವಲ್ಪ ಸಮಯಾವಕಾಶ ಕೊಡಿ ಸಮಸ್ಯೆ ಇತ್ಯರ್ಥಪಡಿಸುತ್ತೇವೆ ಎಂದರು. ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ ತುರ್ತಾಗಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು ಅದರಲ್ಲಿ ಬಳ್ದೋಟ ಕಾರ್ಖಾನೆ ವಿಸ್ತೀರ್ಣ ಸಂಪೂರ್ಣವಾಗಿ ಹಿಂಪಡೆಯುವುದು ತುರ್ತಾಗಿ ಬಸಾಪುರ ಕೆರೆಯನ್ನು ಜನಜಾನುವಾರುಗಳಿಗೆ ಮುಕ್ತವಾಗಿ ಇಡುವುದು ಕಂಪನಿ ಮಾಡಿರುವ ಸುಳ್ಳುಗಳನ್ನು ಹಿಂಪಡೆಯುವುದು ಹಾಗೂ ಕಂಪನಿ ಸಿಬ್ಬಂದಿ ಹಲ್ಲೆ ಮಾಡಿದ ದೇವಪ್ಪ ಹಾಲಳ್ಳಿ ಅವರಿಗೆ ನೆರವು ನೀಡುವುದು ಸೇರಿದಂತೆ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ನೀಡಬೇಕು ಎಂದು ಒತ್ತಾಯಿಸಎಂದು.

 

ಈ ಸಂದರ್ಭದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಹೋರಾಟ ಸಮಿತಿ ಪ್ರಮುಖರಾದ ಡಿ. ಎಚ್. ಪೂಜಾರ್, ಕೆ.ಬಿ. ಗೋನಾಳ್, ರಾಜು ಬಾಕಳೆ, ಮಂಜುನಾಥ ಜಿ. ಗೊಂಡಬಾಳ, ನಜೀರ್ ಸಾಬ್ ಮೂಲಿಮನಿ, ಮಹಾಂತೇಶ್ ಕೊತಬಾಳ, ಮುದುಕಪ್ಪ ಹೊಸಮನಿ, ರಮೇಶ್ ತುಪ್ಪದ್, ಡಾ. ಮಂಜುನಾಥ್ ಸಜ್ಜನ್, ಭೀಮಸೇನ್ ಕಲ್ಕೇರಿ, ಕರಿಯಪ್ಪ ಗುಡಿಮನಿ, ಕಾಶಪ್ಪ ಚಲುವಾದಿ ಸೇರಿ ಅನೇಕರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ