LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸೂಪರ್ ಸೀಡ್ ಮಾಡಿ : ಸಿ ಇಬ್ರಾಹಿಂ

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿಧ ವಿಧವಾದ ಸಮಸ್ಯೆಗಳಿವೆ. ಆದರೂ ಪಾಲಿಕೆಯಲ್ಲಿ ಕಳೆದೊಂದು ವರ್ಷದಿಂದ ಸಾಮಾನ್ಯ ಸಭೆಯೇ ನಡೆದಿಲ್ಲ. ಕರ್ತವ್ಯ ಮರೆತ ಈ ಪಾಲಿಕೆಯನ್ನು ಸರ್ಕಾರ ಈ ಕೂಡಲೇ ಸೂಪರ್ ಸೀಡ್ ಮಾಡಬೇಕು ಎಂದು ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ , ಹಾಲಿ ಪಾಲಿಕೆ ಸದಸ್ಯ ಸಿ.ಇಬ್ರಾಹಿಂ ಬಾಬು ಆಗ್ರಹಿಸಿದ್ದಾರೆ.

ಈ ಕುರಿತು ವಿಶ್ವನುಡಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಯಾವುದೇ ಪಾಲಿಕೆ ಸತತವಾಗಿ ೬ ತಿಂಗಳ ಮಟ್ಟಿಗೆ ಸಾಮಾನ್ಯ ಸಭೆ ನಡೆಸದೇ ಹೋದರೆ, ಅಂತಹ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ-೧೯೭೬ರ ಕಾಯ್ದೆ ಆಡಿ ಸರ್ಕಾರಕ್ಕೆ ಅಧಿಕಾರವಿದೆ. ಜನರ ಹಿತ ಮರೆತಿ ರುವ ಪಾಲಿಕೆಯ ಆಡಳಿತವನ್ನು ಸರ್ಕಾರ ಸೂಪರ್ ಸೀಡ್ ಮಾಡಿ, ಹೊಸ ಆಡಳಿತ ಬರಲು ಅವಕಾಶ ಮಾಡಿಕೊಡಬೇಕು ಎಂದರು.



೨೦೨೫-೨೬ರ ಬಜೆಟ್ ಮಂಡನೆ ವೇಳೆ ನಡೆದ ಸಾಮಾನ್ಯ ಸಭೆಯೇ ಕೊನೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಸಾಮಾನ್ಯ ಸಭೆಗಳು ಪಾಲಿಕೆಯಲ್ಲಿ ನಡೆದಿಲ್ಲ. ಹೀಗಾಗಿ ಇದು ಕೇವಲ ಅಧಿಕಾರಿಗಳ ಆಡಳಿತವಿರುವ ಪಾಲಿಕೆಯೋ ಅಥವಾ ಚುನಾಯಿತ ಜನಪ್ರತಿನಿಧಿಗಳು ಇದ್ದಾರೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ. ಸಾಮಾನ್ಯ ಸಭೆ ನಡೆಸದೇ, ನಗರದ ಸಮಸ್ಯೆಗಳ ಕುರಿತು ಚರ್ಚೆ ಮಾಡದೇ, ಪಾಲಿಕೆಯನ್ನು ಹೀಗೆ ನಡೆಸಿದರೆ ಚುನಾಯಿತ ಕಾರ್ಪೋರೇಟ ರ್‌ಗಳು ತಮ್ಮ ವಾರ್ಡ್‌ಗಳ ನಾಗರಿಕರಿಗೆ ಏನು ಉತ್ತರ ನೀಡಬೇಕು ಎಂಬುದೇ ತಿಳಿಯದಾಗಿದೆ ಎಂದು ನಿಸ್ಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

ಜನರಿಗೆ ಅನುಕೂಲವಾಗಲಿ ಎಂದೇ ಸ್ಥಳೀಯ ಸಂಸ್ಥೆಗಳ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಬಳ್ಳಾರಿಯಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದೆ. ಚುನಾಯಿತ ಪ್ರತಿನಿಧಿಗಳಿದ್ದು, ಜನರ ಸಮಸ್ಯೆ ಚರ್ಚಿಸಲು ಒಂದು ಕಡೆ ಸಭೆ ಸೇರಿಸಲೂ ಆಗದ ಈ ಪರಿಸ್ಥಿತಿಯು ಜನ ವಿರೋಧಿ. ಅಷ್ಟೇ ಅಲ್ಲ, ಇದು ಪ್ರಜಾಪ್ರಭುತ್ವದ ಕಗ್ಗೊಲೆಯೂ ಹೌದು. ಪಾಲಿಕೆ ಮೇಯರ್ ಗಾದೆಪ್ಪನವರು ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಹೋಗಿ ಬರುವ ಮೇಯರ್ ಆಗಿದ್ದಾರೆ. ಅವರು ಏಕೆ ಸಭೆಗಳನ್ನು ಆಯೋಜನೆ ಮಾಡುತ್ತಿಲ್ಲ ಎಂದು ತಿಳಿಯದಾಗಿದೆ ಎಂದರಲ್ಲದೆ, ಬಳ್ಳಾರಿ ಮಹಾನಗರ ಪಾಲಿಕೆ ಜನರ ಬಗ್ಗೆ ಇಷ್ಟು ನಿರ್ಲಕ್ಷ್ಯ ತಾಳಲು, ಬಳ್ಳಾರಿ ನಗರ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

[caption id="attachment_28438" align="alignnone" width="1863"] CamScanner 02-02-2026 12.18[/caption]

ಬಳ್ಳಾರಿ ನಗರ ಪಾಲಿಕೆಯ ಈಗಿನ ಸ್ಥಿತಿಯನ್ನು ಗಮನಿಸುತ್ತಿದ್ದರೆ ’ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಬಸವಣ್ಣನರವರ ವಚನವೊಂದು ನೆನಪಾಗುತ್ತಿದೆ. ಬಳ್ಳಾರಿ ಮಹಾನಗರ ಪಾಲಿಕೆಯ ಕಾರ್ಯವೈಖರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಂದಿದ್ದೇ ಬಳ್ಳಾರಿಯ ಕಾರಣಕ್ಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ನಗರಾಭಿವೃದ್ಧಿ ಸಚಿವರಿಗೆ ಇಲ್ಲಿನ ಪಾಲಿಕೆ ಮತ್ತು ಆಡಳಿತದ ರೀತಿ ತಿಳಿಯದೇ ಇರುವುದು ವ್ಯಂಗ್ಯವೇ ಸರಿ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಥಳೀಯ ಆಡಳಿತಕ್ಕೆ ಚಾಟಿ ಬೀಸಿ ಸರಿದಾರಿಗೆ ತರಬೇಕು. ಇಲ್ಲವೇ ಸೂಪರ್ ಸೀಡ್ ಮಾಡಿ ಹೊಸ ಆಡಳಿತ ಬರುವಂತೆ ಮಾಡಬೇಕು ಎಂದು ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ , ಹಾಲಿ ಪಾಲಿಕೆ ಸದಸ್ಯ ಸಿ.ಇಬ್ರಾಹೀಂ ಬಾಬು ಒತ್ತಾಯ ಮಾಡಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ