LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಸುಕೋ ಬ್ಯಾಂಕ್ ನಲ್ಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ

ಬಳ್ಳಾರಿ: ಗ್ರಾಹಕರು ಹಾಗೂ ಬ್ಯಾಂಕಿನ ನಡುವೆ ಉತ್ತಮ ಸಂಬಂಧ ಬೆಳೆಯಲಿ ಎಂಬ ಉದ್ದೇಶದಿಂದ ಪ್ರತ ವರ್ಷದಂತೆ ಈ ವರ್ಷವೂ ಬ್ಯಾಂಕಿನಿಂದ ದಿನದರ್ಶಿಕೆ ಬಿಡುಗಡೆ ಮಾಡಲಾಗಿದೆ ಎಂದು ಸುಕೋ ಬ್ಯಾಂಕ್‌ನ ನಿರ್ದೇಶಕಿ ಶ್ವೇತಾ ಮಸ್ಕಿ ಅವರು ತಿಳಿಸಿದರು.

ನಗರದ ಪಟೇಲ್‌ನಗರದಲ್ಲಿನ ಸುಕೋ ಬ್ಯಾಂಕ್ ಕಚೇರಿಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.



ಈಗಿನ ಯುವ ಪೀಳಿಗೆಯು ಮೊಬೈಲ್‌ನಲ್ಲಿಯೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಿರುವುದು ಬ್ಯಾಂಕಿಗೂ ಯುವ ಪೀಳಿಗೆಯ ನಡುವಿನ ಸಂಬಂಧ ಬೆಳೆಯುತ್ತಿಲ್ಲ. ಈ ನಿಟ್ಟಿನಲ್ಲಿ ಯುವಕ ಯುವತಿಯರು ಆಗಾಗ್ಗೆ ಬ್ಯಾಂಕ್‌ಗೆ ಬರುತ್ತಿರಬೇಕು. ತಮಗೆ ಬೇಕಾದ ಅವಶ್ಯ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎಂದು ಕೋರಿದರಲ್ಲದೆ, ಹೊಸ ವರ್ಷದಲ್ಲಿ ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಬ್ಯಾಂಕ್‌ನ ಕ್ಲಸ್ಟರ್ ಮ್ಯಾನೇಜರ್ ಸುನೀಲ್ ಅವರು ಮಾತನಾಡಿ, ಬ್ಯಾಂಕ್‌ಗೆ ಗ್ರಾಹಕರೇ ಮುಖ್ಯ. ಈ ನಿಟ್ಟಿನಲ್ಲಿ ಬ್ಯಾಂಕ್ ಸಿಬ್ಬಂದಿಯು ಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಳ್ಳಬೇಕು. ಅವರಿಗೆ ಬೇಕಾದ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ಒದಗಿಸಬೇಕು ಎಂದರಲ್ಲದೆ ಗ್ರಾಹಕರ ವಿಶ್ವಾಸ ಹಾಗೂ ಸಮಾಜಮುಖಿ ಸೇವೆಗಳ ಕುರಿತು ವಿವರಿಸಿದರು.



ಇದೇ ವೇಳೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಬ್ಯಾಂಕ್‌ನ ಗ್ರಾಹಕಾರದ ಟಿ ಭರತ್, ಸೂರ್ಯ ನಾರಾಯಣ, ವಿಜಯಲಕ್ಷ್ಮೀ ಮತ್ತಿತರರು, ಇತರೆ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಜನ ಇರುವುದರಿಂದ ಸರಿಯಾಗಿ ಪ್ರತಿಕ್ರಿಯೆಯೂ ಕೂಡ ದೊರೆಯುವುದಿಲ್ಲ. ಆದರೆ ಸುಕೋ ಬ್ಯಾಂಕಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯೆ ನೀಡುವುದರ ಜೊತೆಗೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಡುತ್ತಾರೆ. ಬ್ಯಾಂಕಿಗೆ ಗ್ರಾಹಕನೇ ರಾಜ ಎಂಬಂತೆ ನೋಡಿಕೊಳ್ಳುವುದು ತುಂಬಾ ಸಂತೋಷವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕಿ ಅರವಿ ಚೆನ್ನಮ್ಮ, ವ್ಯವಸ್ಥಾಪಕರಾದ ಸಂಗೀತ, ಕ್ರೆಡಿಟ್ ಆಫೀಸರ್ ಬಿ.ರಾಮುಡು, ಸಿಬ್ಬಂದಿಯಾದ ಆರ್.ವೈ.ಶೈಲಜಾ, ಜಿ.ಚೈತನ್ಯ, ಸುಧಾ ಎಂ. ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ