https://youtu.be/9C1TjwRye1k
ಬೆಳೆ ಹಾನಿ ಹಿನ್ನಲೆ ತಾಲೂಕಿನ ಮುಷ್ಟುಗಟ್ಟೆ, ಗೆಣಿಕೆಹಾಳ್, ಬಾದನಹಟ್ಟಿ ಗ್ರಾಮದ ರೈತರ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿದರು.

ಜಿಲ್ಲೆಯಲ್ಲಿ ಸಿರುಗುಪ್ಪ, ಕುರುಗೋಡಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲಿನ ಮಳೆಯಿಂದ ಭತ್ತದ ತೆನೆಯ ಬಹುಪಾಲು ಕಾಳು ನೆಲದ ಪಾಲಾಗಿದೆ. ಇನ್ನು ಕೆಲವೆಡೆ ನೆಲಕಚ್ಚಿದೆ. ಈ ಬಗ್ಗೆ ರೈತರಿಂದ ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆ. ಶೇ.33 ಕ್ಕಿಂತ ಅಧಿಕವಾಗಿ ಹಾನಿಯಾದ ಪ್ರತಿಯೊಬ್ಬರಿಗೂ ಶೀಘ್ರ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ನರಸಪ್ಪ, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಕೃಷಿ ಅಧಿಕಾರಿ ದೇವರಾಜ್, ಆರ್ ಐ ಸುರೇಶ್, ವಿ ಎ ಕೊಟ್ರೇಶ್, ಗಣೇಶ್ ಇದ್ದರು.