LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ದಿಮೆದಾರಿಕೆಯ ಗುರಿ ಹೊಂದಿರಿ: ಕುಲಪತಿ ಪ್ರೊ. ಎಂ ಮುನಿರಾಜು ಅಭಿಪ್ರಾಯ

ಬಳ್ಳಾರಿ :                ದೇಶದಲ್ಲಿ ಹಲವಾರು ಸಣ್ಣ ಉದ್ದಿಮೆಗಳು ಮಧ್ಯಮ ವರ್ಗದವರಿಂದ ಆರಂಭವಾಗಿ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ದಿಮೆದಾರರಾಗುವ ಕನಸನ್ನು ಹೊಂದಬೇಕು ಎಂದು ವಿವಿಯ ಕುಲಪತಿಗಳಾದ ಪ್ರೊ. ಎಂ ಮುನಿರಾಜು ಮಾತನಾಡಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ವಿಶ್ವವಿದ್ಯಾಲಯ ಹಾಗೂ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬಳ್ಳಾರಿ ಜಿಲ್ಲಾ ಕೈಗಾರಿಕಾ ಕೇಂದ್ರಗಳು ಜಂಟಿಯಾಗಿ ಆಯೋಜಿಸಲಾದ ಆರ್‌ಎಎಂಪಿ ಯೋಜನೆಯಡಿಯಲ್ಲಿ ರಫ್ತು ಉತ್ತೇಜನ ಕಾರ್ಯಾಗಾರ’ವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಶೀಲತೆಯನ್ನು ಬೆಳೆಸುವ, ಆರ್ಥಿಕ ಬೆಳವಣಿಗೆ ಹೊಂದಲು ಜಿಲ್ಲೆಯಲ್ಲಿ ಹಲವಾರು ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳಿ ಎಂದು ಎಂದು ಹೇಳಿದರು.

ಬಳ್ಳಾರಿಯ ಎಕ್ಸಪೋರ್ಟ್ ಉದ್ದಿಮೆದಾರ ಕೃಷ್ಣ ಸ್ಟೋನ್ ಕ್ರಷರ್ ಪ್ರೈ. ಲಿ. ಮ್ಯಾನೇಜಿಂಗ್ ಡೈರೇಕ್ಟರ್ ರಮೇಶ್ ಗೋಪಾಲ್ ಮಾತನಾಡಿ, ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಉದ್ದಿಮಗಳಿಗೆ ಹಲವಾರು ಅವಕಾಶಗಳಿವೆ. ವಿದ್ಯಾರ್ಥಿಗಳು ಅವಕಾಶಗಳನ್ನು ಉಪಯೋಗಿಸಿಕೊಂಡು ರಫ್ತು ಉದ್ದಿಮೆದಾರಿಕೆಯನ್ನು ಹೊಂದಲು ಮುಂದಾಗಬೇಕು. ರಫ್ತು ಉತ್ತೇಜನ ಕುರಿತು ಅನುಭವಗಳ ಮಾಹಿತಿಯನ್ನು  ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.



ರಫ್ತು ಉತ್ತೇಜನ ಕಾರ್ಯಾಗಾರದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸೋಮಶೇಖರ್.ಬಿ., ವಿವಿಯ ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕರಾದ ಪ್ರೊ. ಗೌರಿ ಮಾಣಿಕ್ ಮಾನಸ, ಪ್ರಮಾಣೀಕೃತ ರಾಷ್ಟಿçÃಯ ತರಬೇತುದಾರರ ಮತ್ತು ಮಕ್ಕಳ ಸಲಹೆಗಾರ ಜೆಎಫ್‌ಎಂ ಮಂಜುನಾಥ್ ಬಳ್ಳುಳಿ, ಇಡಿಪಿ ಸಂಯೋಜಕರಾದ ಪ್ರೊ.ಸುನಿಲ್ ಹಾಗೂ ಸಿಡಾಕ್‌ನ ತರಬೇತಿ ಅಧಿಕಾರಿ ವಿನೋದ್ ಕುಮಾರ್ ಭಾಗವಹಿಸಿದ್ದರು.

ರಫ್ತು ಉತ್ತೇಜನ ಕಾರ್ಯಾಗಾರದಲ್ಲಿ ಸುಮಾರು 100ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST