LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅರಿವು ಅಗತ್ಯ

ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ' ವಿದ್ಯಾರ್ಥಿ ಪತ್ರಿಕೆ' ಬಿಡುಗಡೆ ಮಾಡಿದ ಕುಲಪತಿ ಪ್ರೊ.ಎಂ.ಮುನಿರಾಜು

ಹೊಸಪೇಟೆ :  ವಿದ್ಯಾರ್ಥಿಗಳು ತಂತ್ರಜ್ಞಾನವನ್ನು‌ ಸದ್ಭಳಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದ್ದಾರೆ.

ನಗರದ ಶ್ರೀಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ವ ಸಮಿತಿಗಳ ಸಮಾರೋಪ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ' ವಿದ್ಯಾರ್ಥಿ ಪತ್ರಿಕೆ' ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಂದೇ ಕೋರ್ಸ್ ಗೆ ಸೀಮಿತವಾಗದೇ ತಂತ್ರಜ್ಞಾನ ಇರುವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು.  ಸರ್ಕಾರಿ ನೌಕರಿಯನ್ನು ನೆಚ್ಚಿಕೊಳ್ಳದೇ ಸ್ವಾವಲಂಬಿಗಳಬೇಕು. ತಾಂತ್ರಿಕತೆ ಎಷ್ಟು ಮುಂದುವರಿದಿದೆ. ಅಷ್ಟೇ ವ್ಯಾಪಾರ ಮುಂದುವರಿದಿದೆ. ಎಲ್ಲಾ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ನಮ್ಮ ವಿಶ್ವವಿದ್ಯಾಲಯದಲ್ಲಿ ಹಲವು ಕೋರ್ಸ್ ಗಳು ಶುರುವಾಗಿವೆ.  ಜೊತೆಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆಯ ಶಿಖರಕ್ಕೆ ಏರಬೇಕು. ಐಎಎಸ್, ಐಪಿಎಸ್, ಬ್ಯಾಂಕಿಂಗ್, ಪೋಲೀಸ್, ಮತ್ತಿತರೆ ಉದ್ಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಕಾಲೇಜ್ಗಳಲ್ಲಿ ಸಿಗುವಂತಹ ಉಪನ್ಯಾಸಕರು ಉತ್ತಮ ಜ್ಞಾನ ಉಳ್ಳವರು ಎಂದರು. ಗ್ರಾಮೀಣ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದಿದ್ದು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿದ್ದಾಗ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು. ವಿದ್ಯಾರ್ಥಿಗಳ ಯಶಸ್ಸಿಗೆ ಉಪನ್ಯಾಸಕರ ಸಹಾಕರ ಅಗತ್ಯ ಎಂದು ಹೇಳಿದರು.



ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಚೆಲುವರಾಜ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬಡವರ ಮಕ್ಕಳಿಗೆ ಈ ಕಾಲೇಜು ಅತ್ಯಂತ ದೊಡ್ಡ ವೇದಿಕೆಯಾಗಿದ್ದು,  ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಪಡೆದು ಉನ್ನತ ಅಧಿಕಾರಿಯಾಗಿ ಬಂದ್ರೇ ಶಿಕ್ಷಣ ಸಂಸ್ಥೆಗೆ ಸಾರ್ಥಕ ಎನಿಸುತ್ತದೆ. ಶಿಕ್ಷಣವನ್ನು ಮೊಟಕುಗೊಳಿಸಬೇಡಿ. ಇವತ್ತನಿಂದ ಗುರಿಇಟ್ಟುಕೊಂಡು ಓದಿ ಸಾಧನೆ ಶಿಖರಕ್ಕೆ ಏರಲು ಬಹುದು. ಇವತ್ತಿನ‌ ಸಾಧಕರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದಂತವರು ಎಂದರು. ಇದು ಬೀಳ್ಕೊಡುಗೆ ಹೊರತು ಬಿಡುಗಡೆಯಲ್ಲ,  ಎಲ್ಲಾ ವೃತ್ತಿಯನ್ನು ಗೌರವಿಸಿ, ಪ್ರೀತಿಸಿ ಎಂದು ಕರೆಕೊಟ್ಟರು.

ಅಧ್ಯಕ್ಷತವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ನಾರಾಯಣ ಜಿ. ಹೆಬಸೂರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಒತ್ತಡಗಳನ್ನು ಮೀರಿ ಸಾಧನೆ ಮಾಡಬೇಕು. ಕಾಲೇಜು ಶಿಕ್ಷಣ ಇಲಾಖೆಯಿಂದ ಮಹತ್ವಕಾಂಶ ಯೋಜನೆಗಳನ್ನು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರಿಗೆ ಅಧಮ್ಯ ಶಕ್ತಿ ಇದ್ದು ಉಪಯೋಗಿಸಿಕೊಳ್ಳಿ ಎಂದರು.

 ಪಿಎಚ್ಡಿ ಪಡೆದ ಭೌತಶಾಸ್ತ್ರ ವಿಭಾಗದ ಟಿ.ಎಚ್. ದಾರುಕಸ್ವಾಮಿ ಅವರಿಗೆ ಸನ್ಮಾನ ಮಾಡಲಾಯಿತು.

ಐಚ್ಚಿಕ ಕನ್ನಡ  ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಶಿವಾನಂದ, ಡಾ.ಕರಿಬೀಮಣ್ಣನವರ್ ಅವರು, ಸಮಾಜಶಾಸ್ತ್ರ ವಿಭಾಗದಲ್ಲಿ ಅತಿಹೆಚ್ಚುಅಂಕಪಡೆದ  ವಿದ್ಯಾರ್ಥಿಗಳಿಗೆ ಡಾ.ಗದ್ದಿಗೇಶ್ ಅವರು ದತ್ತಿನಿಧಿ ಸ್ಥಾಪನೆ ಮಾಡಿದ್ದಾರೆ. ಅದನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ‌ವೇದಿಕೆಯ ಮೇಲೆ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರಭದ್ರಪ್ಪ. ಟಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕನಕಟ್ಟಿ ಜಯಣ್ಣ, ಪ್ರಥಮ ದರ್ಜೆ ಸಹಾಯಕ ಕೆ.ಚಂದ್ರಶೇಖರ್, ಅತಿಥಿ ಉಪನ್ಯಾಸಕರಾದ ಗುಜ್ಜಲ ಹುಲುಗಪ್ಪ, ಅಯ್ಯಾಳಿ ಯರಿಸ್ವಾಮಿ, ನಿವೃತ್ತ ಅಧ್ಯಾಪಕರಾದ ಗದ್ದಿಗೇಶ್ ಇದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ದೇವಣ್ಣ.ಸಿ ನಿರೂಪಿಸಿದರು.  ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವೀರಭದ್ರಪ್ಪ.ಟಿ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ವೀರೇಂದ್ರ ಪಾಟೀಲ್ ವಂದಿಸಿದರು.

ಬೋಧಕ ಮತ್ತು ಬೋಧಕೇತರರ ಸಿಬ್ಬಂದಿ ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST