ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವಿಜಯ ನಗರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 14 ಮತ್ತು 17ನೇ ವಯೋಮಿತಿಯ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ವಿನಾಯಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೊಸಪೇಟೆ, ಮರಿಯಮ್ಮನಹಳ್ಳಿ, ಹರಪನಹಳ್ಳಿ ತಾಲೂಕು ಹೊಂದಿರುವ ವಿಜಯನಗರ ಜಿಲ್ಲೆಯು ಕುಸ್ತಿಗೆ ಹೆಸರಾದ ಜಿಲ್ಲೆಯಗಿದೆ. ಮಹಿಳಾ ಕುಸ್ತಿಪಟುಗಳಿಗೆ ಈ ಪಂದ್ಯದಿಂದ ಸ್ಫೂರ್ತಿಯಾಗಿದೆ ಎಂದರು.
ಸಂಸದ ಈ ತುಕಾರಾಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಹೊರಾಂಗಣ ಮತ್ತು ಒಳಾಂಗಣ ಮಾದರಿ ಕ್ರೀಡಾಂಗಣವನ್ನು ಶೀಘ್ರದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿ ಇಲ್ಲಿ ನಡೆಯುವ ರಾಜ್ಯಮಟ್ಟದ ಕುಸ್ತಿಪಟುಗಳನ್ನು ಜಿಂದಾಲ್ ಕ್ರೀಡಾಂಗಣದಲ್ಲಿ ಅಂತರ್ ರಾಷ್ಟ್ರ ಮಟ್ಟದ ಕುಸ್ತಿ ತರಬೇತುದಾರರಿಂದ ತರಬೇತಿ ನೀಡಿ ರಾಷ್ಟ್ರ ಮತ್ತು ಅಂತರ್ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಕಳಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಬಹಳಷ್ಟು ಕಲಾವಿದರಿದ್ದಾರೆ. ಕಲೆಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆ ಇಲ್ಲಿ ಎಕೋ ಸಿಸ್ಟಮ್ ಹೊಂದಿರುವ ಕಲಾ ಭವನ ನಿರ್ಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೆರಿ ಅವರು ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಪಟುಗಳು ಸ್ಪರ್ಧೆ ಮನೋಭಾವ ಬಿಟ್ಟು, ಸೋಲು ಗೆಲವನ್ನು ಗಣನೆಗೆ ತೆಗೆದುಕೊಳ್ಳದೆ ಸಂತೋಷದಿಂದ ಕ್ರೀಡೆಯಲ್ಲಿ ಭಾಗಿಯಾಗಿ ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಉಪ ನಿರ್ದೇಶಕರಾದ ವೆಂಕಟೇಶ್ ರಾಮಚಂದ್ರಪ್ಪ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಪ್ರಾಸ್ತವಿಕಾವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ,ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಡಾ. ವಿನೋದ, ತಹಶಿಲ್ದಾರ ಶೃತಿ ಮಳ್ಳಪ್ಪ ಗೌಡರ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಕುರಿ ಶಿವ ಮೂರ್ತಿ, ಜಿ.ಪಂ ಮಾಜಿ ಸದಸ್ಯ ಪರಶುರಾಮ, ವಿನಾಯಕ ಶಾಲಾ ಮುಖ್ಯಸ್ಥ ಮಂಜುನಾಥ, ಮುಖಂಡರಾದ ಓಬಜ್ಜ, ರಾಜಪ್ಪ, ವೈ ಮಲ್ಲಿಕಾರ್ಜುನ, ಮೃತ್ಯುಂಜಯ, ಸೋಮಪ್ಪ ಉಪ್ಪಾರ, ಸರೆಗಾರ ನವೀನ್ ಪೈಲ್ವಾನ್ ಸಣ್ಣದುರುಗಪ್ಪ ಇದ್ದರು