LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಚಿಕ್ಕಮಗಳೂರು ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಚಿಕ್ಕಮಗಳೂರು : ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು  ಕರ್ನಾಟಕ ರಾಜ್ಯ ಬರಹಗಾರರ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ದಿನಾಂಕ 27.07.2025ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ರಾಜ್ಯ ಸಂಘವು ಪ್ರತಿ ಭಾನುವಾರ  ಆನ್ಲೈನ್ ನಲ್ಲಿ ಚಿತ್ರಗೀತೆ ಒಳಗೊಂಡು ಜಾನಪದ ಗೀತೆ, ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬಂದು ಭಾಗವಹಿಸಿದ ಎಲ್ಲಾ ಗಾಯಕ ಗಾಯಕಿಯರಿಗೆ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಿಕೊಂಡು ಬಂದಿದೆ. ಹೀಗೆ ಭಾಗವಹಿಸಿದ ಗಾಯಕ ಗಾಯಕಿಯರಲ್ಲಿ 34 ಮಂದಿ ಗಾಯಕ ಗಾಯಕಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ  ಅಧ್ಯಕ್ಷರು  ಡಾ. ವಿದ್ಯಾ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರು ಮಧುನಾಯಕ್ ಲಂಬಾಣಿ ಉದ್ಘಾಟಿಸುವರು



ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸೂರಿ ಶ್ರೀನಿವಾಸ್ ಆಶಯ ನುಡಿ ನುಡಿಯುವರು.  ಕರ್ನಾಟಕ ರಾಜ್ಯ ಬರಗಾರರ ಸಂಘದ ಗೌರವಾಧ್ಯಕ್ಷರು ಹಾಗೂ ಸಾಹಿತಿಗಳು ಗೊರೂರು ಅನಂತರಾಜು, ಹಾಸನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು   ಹಾಗೂ ಕುರುವಂಜಿ ಕೆ.ಪಿ.ವೆಂಕಟೇಶ್ ಮಾಜಿ ರಾಜ್ಯಾಧ್ಯಕ್ಷರು ಸಫಾಯಿ ಕರ್ಮಚಾರಿ ನಿಗಮ ಮಂಡಳಿ, ಬಿ. ಎಲ್. ಪ್ರವೀಣ್ ಬೆಟ್ಟಗೇರಿ ಗುತ್ತಿಗೆದಾರರು, ಚಿಕ್ಕಮಗಳೂರು, ಜಯಣ್ಣ ಉಗ್ರಾಣ ಪಾಲಕರು,  ಮೆಸ್ಕಾಂ, ಎಂ ಎಸ್ ನಾಗರಾಜ್ ಗೌರವಾಧ್ಯಕ್ಷರು, ಎಚ್ ಎಂ ಜಗದೀಶ್, ಉಪಾಧ್ಯಕ್ಷರು,  ಹಸ್ಯೆನಾರ್ ಬೆಳಗೊಳ, ಜಿಲ್ಲಾ ಕೋಶಾಧ್ಯಕ್ಷರು, ರಾಕೇಶ್ ಸಿಂಗ್ ನಿರ್ದೇಶಕರು, ಚಿಕ್ಕಮಗಳೂರು ತಾಲ್ಲೂಕು  ಘಟಕದ ಅಧ್ಯಕ್ಷರು ವಿಜಯ ಕುಮಾರ್ ಹೆಚ್ ಸಿ, ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷರು ಮಂಜುನಾಥ ಬೆಟ್ಟಗೆರೆ,. ಶೈಲಜಾಕುಮಾರ್, ಭರತನಾಟ್ಯ ಶಿಕ್ಷಕರು ಹಾಸನ,  ವಿನೋದ್,  ಗೌರವ ಸಲಹೆಗಾರರು, ಇಂಪಾ ನಾಗರಾಜ್ ಗೌರವ ಕಾಯ೯ದರ್ಶಿ,  ಶ್ರೀ ನವೀನ್, ಗೌರವ ಸಲಹೆಗಾರರು, ಬಿ.ಆರ್. ವಿಜಯ್ ಕುಮಾರ್ ಸಿ.ಆರ್. ಗೌರವ ಕಾರ್ಯದರ್ಶಿ, ರವಿ ಕುನ್ನಳ್ಳಿ ಗೌರವ ಸಲಹೆಗಾರರು ಭಾಗವಹಿಸುವರು. ಸಾಧಕರಿಗೆ ಸನ್ಮಾನವನ್ನು  ಮಧುಚಂದ್ರ, ಮಜಾ ಭಾರತ ಕಲಾವಿದರು ಹಾಗೂ ರಮೇಶ ಯಾದವ್ ಕಾಮಿಡಿ ಕಿಲಾಡಿಗಳು ಕಲಾವಿದರು ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ವಿತರಿಸುವರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ