ಮರಿಯಮ್ಮನಹಳ್ಳಿ: ಪಟ್ಟಣದ ಅಧಿದೇವತೆ ರಾಂಪುರದುರ್ಗಾದೇವಿಯ ಜಾತ್ರೆಯ ನಿಮಿತ್ತ,ಮಂಗಳವಾರ ದೇವಿಗೆ ವಿಶೇಷ ಅಭಿಷೇಕ,ಅಲಂಕಾರ,ಪೂಜಾಕೈಂಕರ್ಯಗಳು ನೆರವೇರಿದವು.ದೇವಸ್ಥಾನದ ಒಳಾಂಗಣವನ್ನು ವಿವಿಧ ಹೂಗಳಿಂದ ಅಲಂಕರಿಸಿ,ಸಿಂಗರಿಸಲಾಗಿತ್ತು.ಬೆಳಿಗ್ಗೆಯಿಂದಲೇ ಪಟ್ಟಣ,ತಾಂಡ ಹಾಗು ಸುತ್ತಲಿನಗ್ರಾಮಗಳ ಸಾವಿರಾರು ಭಕ್ತರು ಸರದಿಸಾಲಿನಲ್ಲಿ ನಿಂತು ದರ್ಶನ ಪಡೆದರು.
ಸ್ಥಳಿಯರಾದ ಹ.ಬೊ.ಹಳ್ಳಿ ಶಾಸಕ ಕೆ.ನೇಮರಾಜನಾಯ್ಕ್ ಕುಟುಂಬದೊಂದಿಗೆ ಭೇಟಿ ನೀಡಿ ದೇವಿಯ ದರ್ಶನಪಡೆದರು.