ಮರಿಯಮ್ಮನಹಳ್ಳಿ: ಕುಷ್ಠರೋಗ ಆರಂಭಿಕ ಹಂತದಲ್ಲಿ ಅದನ್ನು ಗುರುತಿಸಿದಲ್ಲಿ ಅದರ ನಿವಾರಣೆ ಸಾಧ್ಯ ಎಂದು ಪಟ್ಟಣದ ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಭಾರ ಆಡಳಿತಾಧಿಕಾರಿ ಡಾ.ಬಸವರಾಜ ಹೇಳಿದರು.
ಶುಕ್ರವಾರ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ರೋಗದ ಬಗ್ಗೆ ಸಮಾಜದಲ್ಲಿನ ತಪ್ಪು ತಿಳಿವಳಿಕೆಯಿಂದ ಜನರು ತಪಾಸಣೆಗೆ ಹಿಂದೇಟು ಹಾಕುತ್ತಾರೆ. ಅದನ್ನು ಬದಿಗೊತ್ತಿ ತಪಾಸಣೆಗೆ ಹಿಂಜರಿಯದೆ ಸಹಕರಿಸಬೇಕು.ಆಗ ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಜೊತೆಗೆ ರೋಗ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ವ್ಯದ್ಯರಾದ ರಾಧಕೃಷ್ಣ,ತಿರುಮಲೇಶ್,ಸಾಯಿಲತ,ಪ.ಪಂ.ಸದಸ್ಯ ಎಲ್.ವಸಂತ,ಸ್ಥಳಿಯ ಮುಖಂಡ ರೋಗಣ್ಣವರ ಮಂಜುನಾಥ,ಪ.ಪಂ.ಸಿಬ್ಬಂದಿಗಳಾದ ನಾಗವೇಣಿ,ಮಲ್ಲಮ್ಮ,ಆರೋಗ್ಯಕೇಂದ್ರದ ಲಾವಣ್ಯ,ಸದ್ದಾಂಹುಸೇನ್,ಆಶಾಕಾರ್ಯಕರ್ತರು ಹಾಜರಿದ್ದರು.