LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಇಂದಿನಿಂದ ಜಿತೋದಿಂದ ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮತ್ತು ಮದುವೆ –ಲೈಫ್ ಸ್ಟೈಲ್ ಪ್ರದರ್ಶನ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ, ಸಚಿವ ದಿನೇಶ್ ಗುಂಡೂರಾವ್, ನಿರೂಪಕಿ ಅನುಶ್ರೀ ಭಾಗಿ

ಬಂಗಾರ, ವಜ್ರ, ಪೊಲ್ಕಿ, ಕುಂದನ್, ರತ್ನ, ಬೆಳ್ಳಿಯ ನೂತನ ವಿನ್ಯಾಸಗಳು, ಬ್ರೈಡಲ್ ಉಡುಪುಗಳು ಮೇಳದ ವೈಶಿಷ್ಟ್ಯ

 

ಬೆಂಗಳೂರು: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನಿಂದ ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮತ್ತು ಮದುವೆ –ಲೈಫ್ ಸ್ಟೈಲ್ ಕುರಿತು “ಜಿತೋ ಝೆವರ್ ಎಕ್ಸ್ ಪೋ ಅಂಡ್ ಬ್ರೈಂಡಲ್ ಸ್ಟೋರಿ” ಪ್ರದರ್ಶನ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಸೆ.5 ರಿಂದ 7 ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀತೋ ಬೆಂಗಳೂರು ನಾರ್ಥ್ ಅಧ್ಯಕ್ಷ ವಿಮಲ್ ಕಟಾರಿಯಾ, ಭವ್ಯಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿರೂಪಕಿ ಅನುಶ್ರೀ, ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಸಂಸದ ಪಿ.ಸಿ. ಮೋಹನ್, ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.



ಜಿತೋ ಅಪೆಕ್ಸ್ ಲೇಡಿಸ್ ವಿಂಗ್, ಜಿತೋ ಕೆಕೆಜಿ ಝೋನ್ ಸಹಯೋಗದಲ್ಲಿ ಮೇಳ ಆಯೋಜಿಸಿದ್ದು, ಒಂದು ಲಕ್ಷ ಚದರಡಿ ಪ್ರದೇಶದಲ್ಲಿ 100 ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದೆ. ದೇಶದ ಪ್ರಮುಖ ಆಭರಣ ಕಂಪೆನಿಗಳು, ಮದುವೆ ಪರಿಹಾರ ಪೂರೈಕೆದಾರರು ಒಂದೇ ವೇದಿಕೆಯಲ್ಲಿ ಮದುವೆಗಳಿಗೆ ಅಗತ್ಯವಾಗಿರುವ ಎಲ್ಲಾ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ. ಬಂಗಾರ, ವಜ್ರ, ಪೊಲ್ಕಿ, ಕುಂದನ್, ರತ್ನ, ಬೆಳ್ಳಿಯ ನೂತನ ವಿನ್ಯಾಸಗಳು, ಬ್ರೈಡಲ್ ಉಡುಪುಗಳು – ಲೆಹಂಗಾ, ಸೀರೆ, ಶೇರ್ವಾನಿ, ಅಲಂಕಾರಿಕ ಸಂಸ್ದೆಗಳು, ಫೋಟೋಗ್ರಫಿ ಮತ್ತಿತರೆ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ.

ಪ್ರತಿದಿನ ಲಕ್ಕಿ ಡ್ರಾ ಮಾಡುತ್ತಿದ್ದು, ಅದೃಷ್ಟಶಾಲಿಗಳು  ಚಿನ್ನದ ಸರ, ವಜ್ರದ ಉಂಗುರಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಕಾರನ್ನು ಬಂಪರ್ ಬಹುಮಾನವಾಗಿ ನೀಡಲಾಗುವುದು ಎಂದರು.

ಜೀತೋ ಮುಖ್ಯ ಕಾರ್ಯದರ್ಶಿ ವಿಜಯ ಸಿಂಘ್ವಿ ಮಾತನಾಡಿ, ಇದು ಐಶ್ವರ್ಯ, ಸಂಸ್ಕೃತಿ ಮತ್ತು ಕೌಶಲ್ಯದ ಮಹೋತ್ಸವವಾಗಿದೆ. ಪರಂಪರೆ ಮತ್ತು ಆಧುನಿಕತೆಯ ಸಂಗಮವಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ರ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಹೇಳಿದರು.

ಮುಖ್ಯ ಕಾರ್ಯದರ್ಶಿ ವಿಜಯ್ ಸಿಂಘ್ವಿ, ಯೋಜನಾ ಸಂಚಾಲಕರಾದ ಸುರೇಶ್ ಕುಮಾರ್ ಗನ್ನಾರವರು ಪದಾಧಿಕಾರಿಗಳು  ಉಪಸ್ಥಿತರಿದ್ದರು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ