ಬಳ್ಳಾರಿ: ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ ಸ್ಲಂ ಬೋರ್ಡ್ ನಿಂದ ಮನೆಗಳನ್ನು ಕಟ್ಟಿಕೊಡಲು ವಿಳಂಬವಾಗುತ್ತಿದ್ದು, ಜನ ಡಿಡಿಗಳನ್ನು ಕಟ್ಟಿ ನಾಲ್ಕೈದು ವರ್ಷಗಳು ಕಳೆದರೂ ಮನೆಗಳು ಪೂರ್ಣವಾಗಿಲ್ಲ ಎಂದು ಆರೋಪಿ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿಯವರ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಘಟಕವು ಇಂದು ಸ್ಲಂ ಬೋರ್ಡ್ ಕಛೇರಿ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು 1200 ಮನೆಗಳು ಮಂಜೂರಾಗಿದ್ದು ಅವುಗಳಲ್ಲಿ 800 ಮನೆಗಳನ್ನು ಮಾತ್ರ ನಿರ್ಮಾಣ ಮಾಡಿದ್ದಾರೆ ಉಳಿದ ಜನ ಇಲಾಖೆಗೆ ಡಿಡಿಗಳನ್ನು ಕಟ್ಟಿ ನಾಲ್ಕೈದು ವರ್ಷಗಳಾದರೂ ಈವರೆಗೂ ಮನೆಗಳ ಕೆಲಸ ಪೂರ್ಣ ಮುಗಿದಿಲ್ಲ. ಹಾಗಾಗಿ ಅರ್ಧದಲ್ಲೆ ನಿಂತ ಮನೆಗಳಲ್ಲಿ ಜನ ವಾಸು ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.
ವಸತಿ ಸಚಿವರೇ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದರೂ ಈವರೆಗೂ ಒಂದು ಸಭೆಯು ನಡೆಸಿಲ್ಲ ಅವರು ಸಚಿವರದಾಗಿನಿಂದಲೂ ಬಳ್ಳಾರಿಗೆ ಬಂದಿಲ್ಲ ಇಂತಹ ನಿಷ್ಕ್ರೀಯ ಸಚಿವರನ್ನು ನಮ್ಮ ಜಿಲ್ಲೆಗೆ ನೇಮಿಸಿರುವುದು ನಮ್ಮ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಬಡವರಿಂದ ಡಿಡಿ ಹಣ ಕಟ್ಟಿಸಿಕೊಂಡು ಈಗ ಮನೆಗಳನ್ನು ಕಟ್ಟಿಕೊಡದೆ ವಿಳಂಬ ಮಾಡುತ್ತಿರುವ ಕ್ರಮ ಸರಿಯಲ್ಲ ಡಿಡಿ ಕಟ್ಟಿ ನಾಲ್ಕೈದು ವರ್ಷಗಳು ಕಳೆದರು ಮನೆ ಪೂರ್ಣಗೊಂಡಿಲ್ಲ ಎಂದರೆ ಇದು ಕಾಂಗ್ರೆಸ್ ಸರಕಾರದ ಪರಿಸ್ಥಿತಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು, ಪಾಲಿಕೆಯ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಸುರೇಖ ಮಲ್ಲನಗೌಡ, ಗುಡಿಗಂಟಿ ಹನುಮಂತ, ಕೆ.ಹನುಮಂತಪ್ಪ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ, ರಾಮಾಂಜನೇಯ, ಸುಮಾರೆಡ್ಡಿ, ಸುಗುಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.