ಮಂಡಲ ಅಧ್ಯಕ್ಷರು ಮಂಜುನಾಥ್ ಮುಸ್ಕಿ ಅವರು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕಿರುಪರಿಚಯ ಮಾಡಿದರು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು (ಜುಲೈ 6, 1901 - ಜೂನ್ 23, 1953) ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ. ಶ್ಯಾಮ ಪ್ರಸಾದ್ ಮುಖರ್ಜಿ (6 ಜುಲೈ 1901 - 23 ಜೂನ್ 1953) ಒಬ್ಬ ಭಾರತೀಯ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣ ತಜ್ಞರಾಗಿದ್ದರು, ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ "ಕೈಗಾರಿಕೋದ್ಯಮ ಮತ್ತು ಸರಬರಾಜು (ವಾಣಿಜ್ಯೋದ್ಯಮ) ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರ ಪ್ರತಿಭೆಯನ್ನು ಪರಿಗಣಿಸಿ, ಅವರನ್ನು ನೆಹರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರು. ನಂತರ ನೆಹರೂ ಅವರ ಮಂತ್ರಿಮಂಡಲದಿಂದ ಹೊರಬಂದು, ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಚೂಣಿಯ ಬಲಪಂಥೀಯ ರಾಷ್ಟ್ರೀಯ ರಾಜಕೀಯ ಪಕ್ಷವಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್.ಟಿ ಮೋರ್ಚಾ ಅಧ್ಯಕ್ಷ ದೇವರಾಜ್ ನಾಯಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ ಧಡೇಸುಗೂರು, ಮರಳಿ ಶಕ್ತಿ ಕೇಂದ್ರದ ಅಧ್ಯಕ್ಷ ಈಶಪ್ಪ ಅಂಗಡಿ, ತಿಪ್ಪಣ್ಣ ನಾಯಕ್ ಅಟಲ್ ಬಿಹಾರಿ ವಾಜಪೇಯಿ ಸಂಚಾಲಕರು, ಸತ್ಯನಾರಾಯಣ ದೇಸಾಯಿ ರೈತ ಮೋರ್ಚಾ ಖಜಾಂಚಿ, ಶರಣಬಸವ ದೇವರಮನಿ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ, ರಾಘವೇಂದ್ರ ಬೋವಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷರು, ಆನಂದ್ ಕುಲಕರ್ಣಿ ಬಿಜೆಪಿ ಮುಖಂಡರು, ವೆಂಕಟೇಶ್ ಬೂದಿ ಜಿಲ್ಲಾ ಎಸ್.ಟಿ ಮೋರ್ಚಾ ಕಾರ್ಯದರ್ಶಿ, ಬಸವರಾಜ್ ಅಂಗಡಿ, ವಸಂತ್ ಕುಮಾರ್ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು