LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಪದ್ಮನಾಭನಗರದ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಬನಶಂಕರಿಗೆ ಸ್ಥಳಾಂತರ

ಮಧ್ಯಾಹ್ನದ ಭೋಜನ ವಿರಾಮಕ್ಕೂ ವಿರಾಮವಿಲ್ಲದೇ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ

ಬೆಂಗಳೂರು :  ನಗರದ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ತನ್ನ ಅಭಿವೃದ್ಧಿ ಚಟುವಟಿಕೆ, ಸೇವಾ ಸೌಲಭ್ಯ ವಿಸ್ತರಣೆಯ ಭಾಗವಾಗಿ ಪದ್ಮನಾಭನಗರ ಶಾಖೆ ಇಂದಿನಿಂದ ಬನಶಂಕರಿಯ ಸುಸಜ್ಜಿತ ಕಟ್ಟಡದಲ್ಲಿ ಶುಭಾರಂಭ ಮಾಡಿದೆ.

ಬನಶಂಕರಿ 3 ನೇ ಹಂತದ, 5 ನೇ ಬ್ಲಾಕ್ ನಲ್ಲಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಿ.ಆರ್.ವಿಜಯಸಾರಥಿ,  ಉಪಾಧ್ಯಕ್ಷರಾಗಿ ಡಾ. ಎಂ. ರಂಗಧಾಮಶೆಟ್ಟಿ ಅವರು ಸಕಲ ಸೌಲಭ್ಯವುಳ್ಳ ಕಟ್ಟಡದಲ್ಲಿ ಶಾಖೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.



ಅಧ್ಯಕ್ಷ ಡಿ.ಆರ್.ವಿಜಯಸಾರಥಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಮೂಡಿಸಿರುವ ಬ್ಯಾಂಕ್ ಲಾಭದಾಯಕವಾಗಿ ನಡೆಯುತ್ತಿದೆ. ಎನ್.ಪಿ.ಎ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ ಆರ್.ಬಿ.ಐ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ  ಮಧ್ಯಾಹ್ನ ಭೋಜನ ವಿರಾಮಕ್ಕೂ ಸಹ ಅವಕಾಶ ನೀಡದೇ  ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಗೆ ಗ್ರಾಹಕರ ಹಿತ ರಕ್ಷಣೆಯೇ ಪರಮ ಗುರಿಯಾಗಿರಬೇಕು ಎಂಬ ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ. ಬ್ಯಾಂಕ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಅವಿರತವಾಗಿ ಶ್ರಮಿಸುತ್ತಿದೆ ಎಂದರು.

ನಿರ್ದೇಶಕರಾದ ವೆಂಕಟಾಚಲಪತಿ ಬಿ.ಎಲ್. ಪಿ. ರುದ್ರಮೂರ್ತಿ, ನಾಗಭೂಷಣ್, ಎಸ್. ಸತ್ಯಮೂರ್ತಿ, ಎಂ.ಸಿ. ಫಾಲನೇತ್ರ, ಲೋಹಿತ್ ಜಿ. ನಂಜೇಗೌಡ, ಪಿ.ಕೆ. ರವೀಂದ್ರ, ಎನ್. ಮಹಾಲಕ್ಷ್ಮಿ, ಎಚ್. ಮಾರುತಿ, ಅನ್ನಪೂರ್ಣಮ್ಮ, ರಚನಾ ಎಸ್, ಜಯಲಕ್ಷ್ಮಿ ಜಿ. ತೋಟಗೇರ. ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎನ್. ಕೃಷ್ಣಯ್ಯ ಶೆಟ್ಟಿ, ಪೂರ್ಣಾವಧಿ ಸಲಹೆಗಾರರಾಗಿ ಬಿ.ಆರ್. ನಾಗರಾಜ್ ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ