ಬಳ್ಳಾರಿ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಬಳ್ಳಾರಿಯ ಪ್ರತಿಷ್ಠಿತ ಶಾಲೆಯಾದ ಶ್ರೀ ನಂದ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸತ್ಯಸಾಯಿವರ್ಮ 7ನೇ ತರಗತಿ 400 ಮತ್ತು 600 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮಸ್ಥಾನ, ಕಾವ್ಯಶ್ರೀ ಕೆ 7ನೇ ತರಗತಿ 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ. ಪ್ರೌಢ ವಿಭಾಗದಲ್ಲಿ ಬಿ. ಎಸ್. ಪ್ರದೀಪ್ 9ನೇ ತರಗತಿ 1500 ಮತ್ತು 800 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ ಮತ್ತು ಉದ್ದಜಿಗಿತದಲ್ಲಿ ದ್ವಿತೀಯಸ್ಥಾನ, ಕಾವ್ಯಶ್ರೀ ಕೆ 9ನೇ ತರಗತಿ 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯ ಸ್ಥಾನ ಮತ್ತು ಎತ್ತರ ಜಿಗಿತದಲ್ಲಿ ಪ್ರಥಮಸ್ಥಾನ, ಸುಶಾಂತ 9ನೇ ತರಗತಿ ಎತ್ತರ ಜಿಗಿತದಲ್ಲಿ ಪ್ರಥಮಸ್ಥಾನ, ಕಾವ್ಯಶ್ರೀ ಕೆ, ಶ್ರೀನಿಧಿ, ತನುಶ್ರೀ, ದಿವ್ಯಾ 9ನೇ ತರಗತಿ ರಿಲೇ ಆಟದಲ್ಲಿ ದ್ವಿತೀಯಸ್ಥಾನ ಪಡೆದುಕೊಂಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಸತ್ಯಸಾಯಿವರ್ಮ 7ನೇ ತರಗತಿ 600 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮಸ್ಥಾನ, ಬಿ. ಎಸ್. ಪ್ರದೀಪ್ 9ನೇ ತರಗತಿ ಉದ್ದ ಜಿಗಿತದಲ್ಲಿ ಪ್ರಥಮಸ್ಥಾನ, ಕಾವ್ಯಶ್ರೀ ಕೆ 9ನೇ ತರಗತಿ 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ, ರಾಮೋಜಿ 9ನೇ ತರಗತಿ ಚೆಸ್ ಆಟದಲ್ಲಿ ಪ್ರಥಮಸ್ಥಾನ ಪಡೆದಿದ್ದು ಈ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀ ನಂದ ವಸತಿ ಶಾಲೆ ಹಾಗು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ವಿ ಗಾಂಧಿ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಆಟ ಆಡುವದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯ ಸದೃಢನಾಗುತ್ತಾನೆ. ಆರೋಗ್ಯದ ಜೊತೆಗೆ ಜೀವನದಲ್ಲಿ ಯಾವಾಗಲು ಸ್ಪೂರ್ತಿದಾಯಕ ವ್ಯಕ್ತಿಗಳಾಗಿ ಬೆಳೆಯಲು ಕಾರಣವಾಗುತ್ತಾರೆ. ಅದ್ದರಿಂದ ಓದುವುದರ ಜೊತೆಗೆ ಆಟವಾಡುವುದನ್ನು ಅಭ್ಯಾಸಮಾಡಿಕೊಳ್ಳಿ ಎಂದರು.
ದೈಹಿಕ ಶಿಕ್ಷಕ ಎಂ. ಖಾದರಭಾಷ ರನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವಿ ರಮಣ್ ಕುಮಾರ್, ವಿ ಮುರಳಿಕೃಷ್ಣ, ಕಿಶೋರ್ ಕುಮಾರ ಅಂಗಡಿ, ಹೆಚ್.ಜೆ ಸರಿತ, ಕೆ.ಲಕ್ಷ್ಮಿಕಾಂತ್ ವಿನಯ್ ಕುಮಾರ್ ಚೌದರಿ, ರಾಜೇಶ್ವರಿ ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಶಾಲಾ ಮಕ್ಕಳು ಕ್ರೀಡಾ ವಿದ್ಯಾರ್ಥಿಗಳಿಗೆ ಶುಭಕೋರಿದರು.