LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

8ನೇ ದಿನದ ಅನಿರ್ದಿಷ್ಟಾವಧಿ ಧರಣಿಗೆ ಕುರಿಗಾಹಿಗಳ ಸಾಥ್

ಕೊಪ್ಪಳ : ನಗರಕ್ಕೆ ಹೊಂದಿಕೊಂಡ ಬಸಾಪುರ ಕೆರೆಯನ್ನು ಇಲ್ಲಿರುವ ಸಾವಿರಾರು ಹಸುಗಳಿಗೆ, ಕುರಿಗಳಿಗೆ ನೀರು ಕುಡಿಸಲು ಮುಕ್ತಗೊಳಿಸಬೇಕೆನ್ನುವ ಬೇಡಿಕೆಗಾಗಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಆರಂಭಿಸಿರುವ ಕೆರೆ ಕಬಳಿಸಿದ ಬಲ್ಡೋಟ ಕಾರ್ಖಾನೆ ವಿರೋಧಿ ಅನಿರ್ದಿಷ್ಟಾವಧಿ ಧರಣಿಯ 8ನೇ ದಿನದ ಹೋರಾಟವನ್ನು ಕೊಪ್ಪಳ ತಾಲೂಕ ಹಸು, ಕುರಿ ಸಾಕಾಣಿಕೆದಾರರು ನಡೆಸಿಕೊಟ್ಟರು.

ಇಂದು ವೇದಿಕೆಯಿಂದ ಗವಿಶ್ರೀಗಳಿಗೆ ಹಲವಾರು ಭಕ್ತರ ಕೋರಿಕೆಯಂತೆ ರಾಜಕಾರಣಿಗಳ ಮೇಲೆ ಮತ್ತಷ್ಟು ಒತ್ತಡ ಹಾಕಲು ಅವರನ್ನು ಕರೆದು ತಾಕೀತು ಮಾಡಿರಿ, ಅವರು ನಿರಾಕರಿಸಿದರೆ ತಾವು ಮಠದಿಂದಲೇ ನಿರಸನ ಆರಂಭ ಮಾಡಿದರೆ ಸರಕಾರ ಮಣಿಯಲು ಸಾಧ್ಯ ಎಂದು ಪತ್ರ ಬರೆಯಲಾಯಿತು. ಧರಣಿ ಉದ್ದೇಶಿಸಿ ನೂರಂದಪ್ಪ ಉಪ್ಪಿನ ಮಾತನಾಡಿ ಗವಿಸ್ವಾಮೀಜಿಗಳು ಒಮ್ಮೆ ಹೇಳಿದ್ದಕ್ಕೆ ಕೇಳಿ ತಡೆ ಆದೇಶ ತಂದಿದ್ದರೆ ಇಲ್ಲಿನ ರಾಜಕಾರಣಿಗಳು ಹಾಗೆ ಮಾಡದಿದ್ದರೆ ಅದನ್ನು ಪುನಃ ಪುನಃ ಸ್ವಾಮೀಜಿಯವರೇ ಕೇಳಬೇಕಿಂದಿಲ್ಲ. ಅದನ್ನು ಪ್ರಜ್ಞಾವಂತ ಜನರು ಬೀದಿಗಿಳಿದು ಆ ಮಾತಿಗೆ ಬೆಲೆ ತರಬೇಕೆಂದು ಹೇಳಿದರು.



ಸತ್ಯಾಗ್ರಹದಲ್ಲಿ ಬಸವರಾಜ ಹೂಗಾರ, ಯಮನೂರಪ್ಪ ಹಾಲಳ್ಳಿ, ದೇವಪ್ಪ ಕುಟಗನಹಳ್ಳಿ, ಹನುಮಂತಪ್ಪ ಚಿಂಚಲಿ, ಯಲ್ಲಪ್ಪ ಇಂದ್ರಾನಗರ, ಹನುಮಂತ ಬಸಾಪುರ, ಬಸವರಾಜ ಚಿಲವಾಡಗಿ, ಈಶಪ್ಪ ದೊಡ್ಡಮನಿ, ರಹಿಮಾನಸಾಬ ಕಿನ್ನಾಳ, ಮಾನವ ಬಂದುತ್ವ ವೇದಿಕೆಯ ಈಶಪ್ಪ ಶಿರೂರು ದೊಡ್ಡಮನಿ, ರಣದಪ್ಪ ಸಂಕಣ್ಣವರ, ದುರುಗಮ್ಮ ಕುರುಗೋಡು, ಗಂಗಮ್ಮ ದೊಡ್ಡಮನಿ, ದುರುಗೇಶ ಹಿರೇಮನಿ ಇದ್ದರು. ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಖಬೂಲ್ ರಾಯಚೂರು, ಎಸ್.ಬಿ ರಾಜೂರ ಬಸವರಾಜ ನರೇಗಲ್, ಮಹಾದೇವಪ್ಪ ಎಸ್. ಮಾವಿನಮಡು ನೇತೃತ್ವ ವಹಿಸಿದ್ದರು. ಧರಣಿಯಲ್ಲಿ ಶರಣುಗಡ್ಡಿ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಗವಿಸಿದ್ದಪ್ಪ ಹಲಿಗಿ, ಸುಂಕಪ್ಪ ಮೀಸಿ ಇದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST