LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ನಾಯಕನಹಟ್ಟಿ ಕಂದಾಯ ನಿರೀಕ್ಷಕರ ಸೇವೆ ಬಗ್ಗೆ ಗಂಭೀರ ಆರೋಪ

ನಾಯಕನಹಟ್ಟಿ :  ನಾಯಕನಹಟ್ಟಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇಧಿಕೆ ಕನ್ನಡ ಸೇನೆಯವರು ಉಪತಹಸೀಲ್ದಾರ್‌ ಶಕುಂತಲಾರವರಿಗೆ ಕಂದಾಯ ನಿರೀಕ್ಷಕ ಸೇವೆ ಬಗ್ಗೆ ಗಂಭೀರ ಆರೋಪ ಮಾಡಿದರು.

ನಾಯಕನಹಟ್ಟಿ ಹೋಬಳಿ ಹಿಂದುಳಿದ ಪ್ರದೇಶವಾಗಿದ್ದು, ನಾಯಕನಹಟ್ಟಿ ಸುತ್ತ ಮುತ್ತ ತುಂಬಾ ಕಡುಬಡವರು ಇದ್ದು ಆರ್ಥಿಕ ಪರಿಸ್ಥಿತಿ ಇರುವುದರಿಂದ ಜೀವನ ಮಾಡಲು ಕಷ್ಷಪಡುವ ಸಮಯದಲ್ಲಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಮಾಹಿತಿ ತಿಳಿದುಕೊಳ್ಳಲು ಬಂದಾಗ ನಾಯಕನಹಟ್ಟಿ ನಾಡಕಛೇರಿಯಲ್ಲಿ ಕಂದಾಯ ನಿರೀಕ್ಷಕರು ಇರುವುದಿಲ್ಲ ನಾಡಕಛೇರಿಯಿಂದ 1200 ಮೀಟರ್‌ ಇರುವ ಬಾಡಿಗೆ ರೂಮ್‌ನಲ್ಲಿ ಇರುವುದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಗಮನಕ್ಕೆ ಬಂದಿದೆ,  ವೃದ್ದರು, ವಿಶೇಷ ಚೇತನರು, ವಿದ್ಯಾರ್ಥಿಗಳು, ಅವಿ ವಿದ್ಯಾವಂತರು, ರೈತರು ಪರದಾಡುವಂತಹ ಕೆಲಸವಾಗಿದೆ ಸರಿಯಾದ ಸಮಯಕ್ಕೆ ಸಿಗದೇ ವಾರಗಟ್ಟಲೇ ಕಛೇರಿಗೆ ಅಲಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಕಂದಾಯ ನಿರೀಕ್ಷಕರು ಸರ್ಕಾರಿ ನೌಕರರು ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು ಬಾಡಿಗೆ ರೂಮ್‌ಗಳಲ್ಲಿ ಕಾರ್ಯನಿರ್ವಹಿಸಿವಂತಿಲ್ಲ ಆದ್ದರಿಂದ ಈ ದಿನ  ತಮಗೆ ಮನವಿ ನೀಡುತ್ತೇವೆ ತಾವುಗಳು ಈ ಕ್ಷಣದಲ್ಲಿ ಕಂದಾಯ ನಿರೀಕ್ಷಕರನ್ನು ಕಛೇರಿಗೆ ಕರಿಸಿ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಬೇಕೆಂದು ಅಗ್ರಹಿಸಿದರು.



ಈ ಸಂಧರ್ಭದಲ್ಲಿ ಹೋಬಳಿ ಅಧ್ಯಕ್ಷ ಕೆ ಜಿ ಮಂಜಣ್ಣ, ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ ಮಾತಾನಾಡಿದರು.

 

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶ್ರೀನಿವಾಸ, ಮಹಿಳಾ ಘಟಕ ಅಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ, ಉಪಾಧ್ಯಕ್ಷ ಕೆ ಪಿ ನಾಗರಾಜ್‌, ರಾಘವೇಂದ್ರ, ಮಂಜುನಾಥ, ಪ್ರಕಾಶ, ರಾಜು, ಮಲ್ಲಿಕಾರ್ಜುನ ಉಪಸ್ಥಿತಿತರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ