LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬೆಂಗಳೂರು ವಿವಿಯ ಕೆಮಿಸ್ಟ್ರಿ ಸಂಶೋಧಕರಿಗೆ ಭಾರತೀಯ ಪೇಟೆಂಟ್ ಅನುದಾನಕ್ಕೆ ಅಯ್ಕೆ

ಬೆಂಗಳೂರು :  ಭಾರತ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪೇಟೆಂಟ್ಕಚೇರಿ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಕೊಡಮಾಡುವ ಉತೃಷ್ಟ ಸಂಶೋಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಜಿ. ಕೃಷ್ಣಮೂರ್ತಿ , ಅವರ ಸಂಶೋಧನಾ ತಂಡವು ಆಯ್ಕೆಯಾಗಿದ್ದಾರೆ.

 

ಸಂಶೋದನಾ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್  ಸಪೋರ್ಟೆಡ್  ಐರನ್- ಮಾಫ್ (Fe-MOF) : ಸೆಲ್ಫ್ - ಕ್ಲೀನಿಂಗ್ ಮೆಂಬ್ರೇನ್"  ಹೊಸ ಆವಿಷ್ಕಾರಕ್ಕಾಗಿ ಪ್ರೊ. ಜಿ. ಕೃಷ್ಣಮೂರ್ತಿ ಹಾಗೂ ಅವರ ಸಂಶೋಧನಾ ತಂಡ ಭಾರತೀಯ ಪೇಟೆಂಟ್ಅನುದಾನಕ್ಕೆ ಭಾಜನರಾಗಿದ್ದಾರೆ.

 

ಐರನ್- ಮಾಫ್ (Fe-MOF) : ಮೂವರು ವಿದೇಶಿ ರಸಾಯನಶಾಸ್ತ್ರಜ್ಞರು 2025 ರಸಾಯನಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡ ವರ್ಗದ ವಸ್ತುವಾಗಿದೆ. ಪ್ರೊ. ಜಿ. ಕೃಷ್ಣಮೂರ್ತಿ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್  ಸಪೋರ್ಟೆಡ್ ಐರನ್- ಮಾಫ್ (Fe-MOF) ವಿವಿಧ ಅನ್ವಯಿಕೆಗಳಿಗೆ ಆಕರ್ಷಕ ವಸ್ತುವಾಗಿದೆ.

 

ಐರನ್- ಮಾಫ್ (Fe-MOF) ಎಂಬುದು ಸ್ವಯಂ ಶುದ್ಧೀಕರಣ ಹಾಗೂ ಕಲುಷಿತ ನಿರೋಧಕ, ಜಲ ಶೋಧನೆಗೆ ಅತ್ಯಂತ ಭರವಸೆಯ ಉನ್ನತ ವಸ್ತುವಾಗಿವೆ. ವಿಶೇಷವಾಗಿ ಮಲಿನಜಲ ಶುದ್ಧೀಕರಣ ಮತ್ತು ಎಣ್ಣೆ-ನೀರು ವಿಭಜನೆ ಕ್ಷೇತ್ರಗಳಲ್ಲಿ, ಕೈಗಾರಿಕಾ ತ್ಯಾಜ್ಯ ನೀರಿನಲ್ಲಿರುವ ವಿಷಕಾರಿ ಬಣ್ಣಗಳನ್ನು ಪರಿಸರ ಸ್ನೇಹಿ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಉಪಯುಕ್ತವಾಗಿವೆ.

 

ಮಹತ್ವದ ಶೈಕ್ಷಣಿಕ ಸಾಧನೆಗೆ ಬೆಂಗಳೂರು ವಿವಿಯ ಕುಲಪತಿ ಪ್ರೊ. ಜಯಕರ್ ಎಸ್.ಎಂ, ಆಡಳಿತ ವರ್ಗ, ಪ್ರಾಧ್ಯಾಪಕರ ವರ್ಗದವರು ಸೇರಿದಂತೆ ಮತ್ತಿತರರು ಸಂಶೋಧನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ, ಪ್ರಶಂಸಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

 

ಐರನ್- ಮಾಫ್ (Fe-MOF) ಮೂವರು ವಿದೇಶಿ ರಸಾಯನಶಾಸ್ತ್ರಜ್ಞರು 2025 ರಸಾಯನಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡ ವರ್ಗದ ವಸ್ತುವಾಗಿದೆ. ಪ್ರೊ. ಜಿ. ಕೃಷ್ಣಮೂರ್ತಿ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್  ಸಪೋರ್ಟೆಡ್ ಐರನ್- ಮಾಫ್ (Fe-MOF) ವಿವಿಧ ಅನ್ವಯಿಕೆಗಳಿಗೆ ಆಕರ್ಷಕ ವಸ್ತುಗೆ ಸಾಕ್ಷಿಯಾಗಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ