ದುರ್ಗದ ಸಿರಿ’’ಪ್ರಶಸ್ತಿಗೆ ಸಚ್ಚಿದಾನಂದ ನಾಯಕ ಹೆಗ್ಗಡದಿನ್ನಿ ಆಯ್ಕೆ
ಅರಕೇರಾ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದೇವದುರ್ಗ ತಾಲೂಕು ಘಟಕ ದಿಂದ ಪತ್ರಿಕಾ ದಿನಾಚರಣೆ 2025-26 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ದೇವದುರ್ಗ ತಾಲ್ಲೂಕು ವರದಿಗಾರದ ಸಚ್ಚಿದಾನಂದ ನಾಯಕ ವರಿಗಾರರು ಇವರಿಗೆ ದಿ: ಎ.ವೆಂಕಟೇಶ ನಾಯಕ ಸ್ವರಣಾರ್ಥ ಕೊಡಮಾಡುವ “ದುರ್ಗದ ಸಿರಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇವದುರ್ಗ ತಾಲ್ಲೂಕು ವರದಿಗಾರ ಈಶಾನ್ಯ ವಾಹಿನಿ ಕನ್ನಡ ದಿನಪತ್ರಿಕೆ ವರಿಗಾರರಾಗಿ ಸುಮಾರು 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಜುಲೈ 21-7-2025 ರಂದು ದೇವದುರ್ಗದ ಖೇಣೇದ ಮುರಿಗೆಪ್ಪ ಕಲ್ಯಾಣ ಮಂಟಪದಲ್ಲಿ ಜರಗಲಿರುವ ತಾಲೂಕು ಮಟ್ಟದ ಪತ್ರಿಕ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚ್ಚಿದಾನಂದ ನಾಯಕ ಹೆಗ್ಗಡದಿನ್ನಿ ಇವರಿಗೆ ಪ್ರಶಸ್ತಿ ಪ್ರದಾನಮಾಡಲಾಗುತ್ತದೆ.
ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ದೇವದುರ್ಗ ಮತ್ತು ಅರಕೇರಾ ತಾಲೂಕಿನ ಜನಪ್ರತಿನಿಧಿಗಳು ಹಿತೈಷಿಗಳು ಸ್ನೇಹಿತರು ಓದುಗಾರರು ಸಂಘಸಂಸ್ಥೆಗಳು ಹೆಗ್ಗಡದಿನ್ನಿ ಗ್ರಾಮದ ಗುರು ಹಿರಿಯರು ಮುಖಂಡರು ಅಭಿನಂಧಿಸಿದ್ದಾರೆ
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.