ನಾಯಕನಹಟ್ಟಿ: 'ರಸ್ತೆ ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ನೆರವು ನೀಡುತ್ತಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನಿಂದ ಪ್ರತಿ ವರ್ಷ ಜೀವ ರಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಸಚಿವ ಸಂತೋಷ್ ಲಾಡ್ ಕೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ನ ರಾಜ್ಯ ವಿದ್ಯಾರ್ಥಿ ಪ್ರಧಾನ ಅಧ್ಯಕ್ಷರಾದ ಪ್ರಸನ್ನ ಸಂಜೀವಿನಿರವರು ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದ ಮೇಲೆ ಪ್ರತಿಕೆಗೆ ತಿಳಿಸಿದರು.
2019ರಲ್ಲಿ ಸ್ಥಾಪನೆಗೊಂಡ ಟ್ರಸ್ಟ್ ರಾಜ್ಯದಾದ್ಯಂತ 40,000 ಸದಸ್ಯರನ್ನು ಹೊಂದಿದೆ. ರಸ್ತೆ ಅಪಘಾತದಲ್ಲಿ 2,500ಕ್ಕೂ ಹೆಚ್ಚು ಜನರ ಜೀವ ರಕ್ಷಣೆ ಮಾಡಿದೆ' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿ.23 ರಂದು ನಗರದ ವಾಲ್ಮೀಕಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭನಡೆಯಲಿದೆ. ಪಂಚ ಮಠಾಧೀಶರು, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಉಪಸ್ಥಿತರಿರಲಿದ್ದಾರೆ' ಎಂದರು.