ಅರಕೇರಾ ಪಟ್ಟಣದ ವಾರ್ಡ್ ನಂ.2ರ ಕೆಂಚಮ್ಮನ ಕಟ್ಟೆ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ,ಶುಗರ್ ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ ಇವು ಶ್ರೀಮಂತ ಕಾಯಿಲೆಗಳಾಗಿದ್ದು, ಬಡ ಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂಥ ಉಚಿತ ಆರೋಗ್ಯ ಶಿಬಿರಗಳ ಮೂಲಕವೇ ಚಿಕಿತ್ಸೆಗೆ ಒಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿಯಿಂದ ಬಂದಿದ್ದೇನೆ ಬಡತನದ ಪರಿಚಯವು ನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿ ಆರೋಗ್ಯ ಶಿಬಿರಗಳ ಮೂಲಕ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದರು.

ಐಸಿಟಿಸಿ ಆಪ್ತ ಸಮಾಲೋಚಕ ನಾಗಲಿಂಗಪ್ಪ ಅವರು ಮಾತನಾಡಿ.ಆರೋಗ್ಯವಂತರಾಗಿದ್ದಾಗ ಮಾತ್ರ ನಾವು ಕೆಲಸ ಮಾಡಲು ಸಾಧ್ಯ ಆರೋಗ್ಯವೇ ಭಾಗ್ಯ ಎಂಬಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಎಚ್ಐವಿ ಪರೀಕ್ಷೆ,ಕಣ್ಣಿನ ಪರೀಕ್ಷೆ, ಬಿಪಿ ಶುಗರ್ ಪರೀಕ್ಷೆ ಮತ್ತು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ ಬರುವುದು, ಕಪದಲ್ಲಿ ರಕ್ತ ಬರುವುದು, ತೂಕ ಇಳಿಕೆ ಈ ತರ ಲಕ್ಷಣಗಳಿದ್ದಲ್ಲಿ ಕಫದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೂ ನಿಮ್ಮ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬಂತೆ ನಾವು ಆರೋಗ್ಯವಂತರಾಗಿದ್ದಾಗ ಮಾತ್ರ ನಮ್ಮ ಕುಟುಂಬವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷಯ ರೋಗದ ಮೇಲ್ವಿಚಾರಕರು ಮಹೇಶ ನಾಯಕ, ನೇತ್ರಾಧಿಕಾರಿ ವಾದಿರಾಜ್, ಲ್ಯಾಬ್ ಟೆಕ್ನಿಶನ್ ಚಂದ್ರಕಲಾ, ಎನ್ ಸಿಡಿ ಆಪ್ತ ಸಮಾಲೋಚಕ ಉಮೇಶ, ಶರಣ ಬಸವ, ಮಲ್ಲಿಕಾರ್ಜುನ, ಪಿಹೆಚ್ ಸಿ ಒ ಸುನಿತಾ, ಸಿಎಚ್ ಓ ಸುನಿಲ್ ಕುಮಾರ್,ಹೊಸ ಬೆಳಕು ಎನ್ ಜಿಓ ಸಹಾಯಕ ಮುದುಕಪ್ಪ, ಪಂಡಿತ್, ಸಿದ್ದು,ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.