LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ವಿಕಲಚೇತನ ಮಕ್ಕಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ಕೆಲಸವನ್ನು ರೋಟರಿ ಸಂಸ್ಥೆ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.



ಅವರು ಇಂದು ಹುಬ್ಬಳ್ಳಿಯ ವಿವೇಕಾನಂದ ನಗರದಲ್ಲಿರುವ ರೋಟರಿ ಸಂಸ್ಥೆಯ ಅಂಗವಿಕಲರ ಪುನರ್ ವಸತಿ ಸುವರ್ಣಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು. ಯಾರಿಗೆ ಯಾವುದು ಕೊರತೆ ಇರುತ್ತದೆ ಅದನ್ನು ರೋಟರಿ ಮಾಡುತ್ತದೆ. ನಮಗೆ ದೇವರು ಏನು ಕೊಟ್ಟಿದ್ದಾನೆ ಎಂದು ಒಂದು ಕ್ಷಣನೂ ಯೋಚನೆ ಮಾಡಿಲ್ಲ. ಆದರೆ, ಎಲ್ಲೋ ಒಂದು ಕೊರತೆ ಕಾಣಿಸುತ್ತಿದೆ. ಕುರುಡ ಮತ್ತು ಮೂಕ ಮಕ್ಕಳಿಗೆ ಒಂದು ಸಮಸ್ಯೆ ಏನೆಂದರೆ, ತಮ್ಮ ಕಲ್ಪನೆಯನ್ನು ಭಾವನೆಗಳ ಮೂಲಕ ವ್ಯಕ್ತಪಡಿಸಲು ಅವಕಾಶ ಆಗುವುದಿಲ್ಲ. ಆ ಕೊರಗು ಅವರಲ್ಲಿ ಇರುತ್ತದೆ. ಅವರು ದೇವರ ಮಕ್ಕಳು ಅವರ ಆಲೋಚನೆಯನ್ನು ವ್ಯಕ್ತಪಡಿಸಲು ಅವಕಾಶ ಕಲ್ಲಿಸುವ ಕೆಲಸವನ್ನು ರೋಟರಿ ಸಂಸ್ಥೆ ಮಾಡಿರುವುದು ಅತ್ಯಂತ ಮಹತ್ವದ ಕಾರ್ಯ ಎಂದು ಹೇಳಿದರು.

 

ಇಂತಹ ಮಕ್ಕಳ ಬಗ್ಗೆ ಯೋಚನೆ ಮಾಡುವುದೇ ನಮ್ಮ ಸಂಸ್ಕೃತಿ. ಬಹಳಷ್ಟು ಜನರಿಗೆ ಸಂಸ್ಕೃತಿ ಮತ್ತು ನಾಗರಿಕತೆ ವ್ಯತ್ಯಾಸ ಗೊತ್ತಿಲ್ಲ. ನಾವು ಯಾವುದನ್ನು ಹೊಂದಿದ್ದೇವೆ ಅದು ನಾಗರಿಕತೆ. ನಾವೇನಾಗಿದ್ದೇವೆ ಅದು ಸಂಸ್ಕೃತಿ. ಈ ಸಂಸ್ಥೆ ಮಾಡಿದವರು ಗ್ರೇಟ್ ಡಾಕ್ಟರ್ಸ್ , ಸಮಾಜದ ಈ ವರ್ಗದ ಮಕ್ಕಳ ಬಗ್ಗೆ ಯೋಚನೆ ಮಾಡಿರುವುದಕ್ಕೆ ಅವರಿಗೆ ಕೋಟಿ ವಂದನೆಗಳು, ಅವರಿಗೆ ಇಂಥ ಮಕ್ಕಳ ಬಗ್ಗೆ ಯೋಚನೆ ಬಂದಿರುವ ಕ್ಷಣವೇ ಗ್ರೇಟ್ ಎಂದರು.

 

ನಾನು ಬಹಳಷ್ಟು ವೈದ್ಯರ ಜೊತೆಗೆ ಒಡನಾಟ ಹೊಂದಿದ್ದೇನೆ. ನನ್ನ ಅನುಭವದ ಹಿನ್ನೆಲೆಯಲ್ಲಿ ನಾನು ನನ್ನ ಅಧಿಕಾರದ ಅವಧಿಯಲ್ಲಿ ಕಿವುಡರಿಗೆ ಕಾಂಕ್ಲಿಯನ್ ಇನ್‌ಫ್ಲಾಂಟ್ ಯೋಜನೆಯನ್ನು ಆರಂಭಿಸಿದೆ. ನಾನು ಬೆಂಗಳೂರಿನಿಂದ ಬರುವಾಗ ಒಂದು ಕುಟುಂಬದವರು ಬಂದು ನಿಮ್ಮ ಕಾಂಕ್ಲಿಯರ್ ಇನ್ ಪ್ಲಾಂಟ್ ಯೋಜನೆಯಿಂದ ನನ್ನ ಮಗನಿಗೆ ಅನುಕೂಲವಾಗಿದೆ. ಈಗ ಅವನು ಖುಷಿಯಿಂದ ಶಾಲೆಗೆ ಹೋಗುತ್ತಿದ್ದಾನೆ. ಎಂದು ಹೇಳಿದರು. ನಾವು ಕಿಮೋಥೆರಪಿ ಸೈಕಲ್ಸ್ ಹೆಚ್ಚು ಮಾಡಿದ್ದೇವು. ನಾವು ಡಯಾಲಿಸಿಸ್ ಕೇಂದ್ರಗಳನ್ನು ಹೆಚ್ಚಿಗೆ ಮಾಡಿದ್ದೇವು. ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಲ್ ಕೇಂದ್ರಗಳನ್ನು ಆರಂಭಿಸಿದ್ದೇವು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರ್ದುಡಿಸಿದ್ದೇವು. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಸಮಾಜಕ್ಕೆ ಅನುಕೊಲವಾಗಿದೆ ಎಂದರು.

ನಮ್ಮ ತಂದೆಯ ಆತ್ಮೀಯರಾದ ಡಾ. ಆರ್.ಬಿ. ಪಾಟೀಲರು ಕರ್ನಾಟಕ ಮೆಡಿಕಲ್ ಇನ್‌ಸಿಟ್ಯೂಟ್ ಆರಂಭಿಸಲು 10 ಕೋಟಿ ರೂ. ಕೇಳಿದರು. 24 ಗಂಟೆಯಲ್ಲಿ ಹತ್ತು ಕೋಟಿ ರೂ. ಆದೇಶ ಮಾಡಿದೆ. ಇದಷ್ಟೇ ಅಲ್ಲ ಕೋ ಆಪರೇಟಿವ್ ಆಸತ್ರೆಗೆ 250 ಕೋಟಿ ಕೊಟ್ಟಿದ್ದೇವೆ. ಜಯದೇವ ಆಸತ್ರೆ ಬೆಂಗಳೂರು, ಮೈಸೂರು, ಕಲಬುರ್ಗಿಯಲ್ಲಿತ್ತು. ಹುಬ್ಬಳ್ಳಿಗೆ ಜಯದೇವ ಹೃದ್ರೋಗ ಆಸತ್ರೆ ಆರಂಭ ಮಾಡಿಸಿದೆ. ಯಾವ ಊರಲ್ಲಿ ಹುಟ್ಟಿದ್ದೇವೆ. ಎಲ್ಲಿ ಬೆಳೆದಿದ್ದೇವೆ ಆ ಊರಿಗೆ ಪ್ರಾಮಾಣಿಕ ಸೇವೆ ಮಾಡುವ ಕೆಲಸ ಮಾಡಿದ್ದೇವೆ. ಇದೆಲ್ಲವೂ ಸದುಪಯೋಗವಾಗಬೇಕು. ಬೆಳಗಾವಿಗೆ ಕಿದ್ವಾಯಿ ಆಸತ್ರೆ ಆರಂಭಿಸಿ 50 ಕೋಟಿ ನೀಡಿದ್ದೇನೆ. ಖಾಸಗಿ ವಲಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಖಾಸಗಿ ವಲಯದಲ್ಲಿ ಅಭಿವೃದ್ಧಿಯಾದರೆ ಬಡವರಿಗೆ ಅನುಕೂಲವಾಗುವುದಿಲ್ಲ. ಕಿಮ್ಸ್‌ ಆಸ್ಪತ್ರೆ ಇನ್ನಷ್ಟು ಅಭಿವೃದ್ಧಿಯಾಗಬೇಕು. ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಾರೆ. ಹೊರಗಡೆಯಿಂದ ಔಷಧ ತರುವ ವ್ಯವಸ್ಥೆ ತಡೆಂದಬೇಕು. ಎಂದರು.

 

ರೋಟರಿ ಸಂಸ್ಥೆ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ನಾನು ಧನ್ಯವಾದ ಹೇಳುತ್ತೇನೆ. ಇಲ್ಲಿ ಸಾಕಷ್ಟು ದಾನಿಗಳು ಇದ್ದಾರೆ. ನನ್ನಿಂದಲೂ ಆಗತ್ಯ ಸಹಾಯ ಮಾಡುತ್ತೇನೆ ಎಂದು ಹೇಳಿದರು.

 

ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ  ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಡಾ. ಪಿ.ವಿ ದತ್ತಿ, ಉಪಾಧ್ಯಕ್ಷರಾದ ಪ್ರೋಪೆಸರ್ ಸಿ ಸಿ ದಿಕ್ಷೀತ್, ಎಸ್ ಎಸ್ ಹಿರೇಮಠ,  ಸುಹಾಸ ಜವಳಿ,  ಶೇಷಗಿರಿ ಕುಲಕರ್ಣಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ