LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಂದಾಯ ನಿರೀಕ್ಷಕರಾದ ಚೇತನ್ ಕುಮಾರ್ ವಜಾ ಮಾಡಲು ಆಗ್ರಹ

ನಾಯಕನಹಟ್ಟಿ:  ಕಂದಾಯ ನಿರೀಕ್ಷಕರಾದ ಚೇತನ್ ಕುಮಾರ್ ಅವರನ್ನು ವಜಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಾಸಿದೇವಿ ಮೇಟಿ ಬಾಣದ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ ಆಗ್ರಹಿಸಿದ್ದಾರೆ.

ಪಟ್ಟಣದ ನಾಡಕಚೇರಿಯ ಅಧಿಕಾರಿಯದಂತಹ ಕಂದಾಯ ನಿರೀಕ್ಷಕ ಚೇತನ್ ಕುಮಾರ್, ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವ ಕಾರಣ  ಉಪ ತಹಸಿಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ. ವಾಸುದೇವ ಮೇಟಿ ಬಣದ ) ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಆಗ್ರಹಿಸಿದರು.



ನಾಯಕನಹಟ್ಟಿ ಪಟ್ಟಣದ ನಾಡಕಚೇರಿ ಅಧಿಕಾರಿ ಕಂದಯ ನಿರೀಕ್ಷಕರು ಬೇಕಾಬಿಟ್ಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಯಕನಹಟ್ಟಿ ಸುತ್ತಮತ್ತಲಿನ ರೈತರಿಗೆ ನಾಗರಿಕರಿಗೆ ಸಾರ್ವಜನಿಕರಿಗೆ ಹಾಗೂ ವಿಶೇಷ ವಿಕಲಚೇತನರಿಗೆ ತುಂಬಾ ಅನಾನುಕೂಲವಾಗುತ್ತಿದ್ದು, ಇವರು ಕಚೇರಿಯಲ್ಲಿ ಇರುವುದೇ ಇಲ್ಲ.  

ಒಂದು ಖಾಸಗಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲೇ ಲಂಚಾವತಾರ ಭ್ರಷ್ಟಾಚಾರಕ್ಕೆ ಅಡಿ ಮಾಡಿಕೊಟ್ಟಿದ್ದಾರೆ ಎಂಬ ಅನುಮಾನ ಸಾರ್ವಜನಿಕರಿಗೆ ಕಾಡುತ್ತದೆ. ನಾಗರಿಕರು ಸಾರ್ವಜನಿಕರು ನಾಡಕಚೇರಿಗೆ ಬಂದು ಕಂದಾಯ ನಿರೀಕ್ಷಕರನ್ನು ಕೇಳಿದರೆ,  ಇವರು ಖಾಸಗಿ ಕೊಠಡಿಯಲ್ಲಿ ಇದ್ದಾರೆ ಅಲ್ಲಿಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ ಎಂಬ ಉತ್ತರ ಕೇಳಿ ಬರುತ್ತದೆ.  ಇದರಿಂದಾಗಿ ರೈತರಿಗೆ ನಾಗರಿಕ ಸಾರ್ವಜನಿಕರಿಗೆ ತುಂಬಾ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದ್ದು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿ ಎಂದು ಅಥವಾ ಅನುಕೂಲವಾಗಲಿ ಎಂದು ಉದ್ದೇಶದಿಂದ ಸರ್ಕಾರ ನೇಮಿಸಿದರೆ , ಇವರಿಗೆ ಇಷ್ಟ ಬಂದಂತ ಕಡೆ ಬಾಡಿಗೆಯ ಕೊಠಡಿಯನ್ನು ಮಾಡಿ ಅಲ್ಲೇ ಕೆಲವು ಡೀಲ್ ಗಳು ಆಗ್ತವೆ, ಇವರಿಗೆ ಸಮಸ್ಯೆಯನ್ನು ಕುರಿತು ಸಾರ್ವಜನಿಕರು ಹಲವು ಬಾರಿ ದೂರವಾಣಿ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸದೆ ಸಬೂಬುಗಳನ್ನು ಹೇಳುತ್ತಾರೇ, ಇವರನ್ನು ಕೆಲಸದಿಂದ ವಜಾ ಮಾಡದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಕೂರಲಾಗುವುದು ಎಂದು ಎಚ್ಚರಿಸಿದರು.

ಇಂತಹ ಭ್ರಷ್ಟಾಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ ವಾಸುದೇವ ಮೇಟಿ ) ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ ಅನೇಕ ಹಳ್ಳಿಗಳ ಸುತ್ತಮುತ್ತಲಿನ ಜನರು ಸಾರ್ವಜನಿಕರು ಭಾಗವಹಿಸಿ ಕಂದಾಯ ನಿರೀಕ್ಷಕರ ವಿರುದ್ಧ ಕೆಂಡಕಾರಿದರು.

ಈ ಸಂದರ್ಭದಲ್ಲಿ ಭಾಗವಹಿಸಿದಂತ ಜಿಲ್ಲಾ ಕಾರ್ಯದರ್ಶಿ ನವೀನಮದಕರಿ ,  ಹೋಬಳಿ ಕಾರ್ಯದರ್ಶಿ ಕೆಎಂ ಮಂಜುನಾಥ್ ,  ಗೌರವಾಧ್ಯಕ್ಷ ಮಂಜುನಾಥ್ ಗೌಡಗೆರೆ ,  ಸಿಎಸ್ ರಾಘವೇಂದ್ರ,  ಆಟೋ ಘಟಕದ ಅಧ್ಯಕ್ಷ ತಿಪ್ಪೆಸ್ವಾಮಿ,  ಹಾಗೂ ಸುತ್ತಮುತ್ತಲಿನ ನಾಗರಿಕರು ತಿಪ್ಪೇಸ್ವಾಮಿ ಬೋರಯ್ಯ ಓಬಯ್ಯ ಕಾಟಯ್ಯ ನಿಂಗಪ್ಪ ಭಾಗವಹಿಸಿದ್ದರು.

 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST