LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಣ ಮಟ್ಟದ ಹಾಲು ಪೂರೈಕೆ ಮಾಡಲು ಮನವಿ

ನಾಯಕನಹಟ್ಟಿ : ಹಾಲು ಉತ್ಪಾದಕರ ಸಹಾಕರ ಸಂಘದ ಪ್ರತಿಯೊಬ್ಬ ಸದಸ್ಯನು ಕೂಡ ಗುಣ ಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ವೇತ ಜೆ.ಆರ್.ರವಿಕುಮಾರ್ ಮನವಿ ಮಾಡಿ ಕೊಂಡರು..

 

ಪಟ್ಟಣದಲ್ಲಿ ಹಾಲು ಉತ್ಪಾದಕರ ಸಂಘ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಶುಕ್ರವಾರ ನಡೆಯಿತು. ನಂತರ ಮಾತನಾಡಿದ ಅವರು ಹಸುಗಳಿಗೆ ಯಾವಗಲೂ ಒಳ್ಳೆಯ ನೀರನ್ನು ಒದಗಿಸಿ ಹಾಲು ಕರಿಯುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಲು ಮರೆಯಬಾರದು. ಕೆಚ್ಚಲನ್ನು ಒಳ್ಳೆಯ ನೀರಿನಿಂದ ತೊಳೆದು ಬಟ್ಟೆಯಿಂದ ಹೊರೆಸಿ ಹಾಲು ಕರಿಯಬೇಕು ಎಂದರು.

 

ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರಾದ ಸಂಜೀವಮೂರ್ತಿ ಮಾತನಾಡಿ ಖಾಸಗಿ ಸಂಸ್ಥೇಗಳು ಅಣಬೆ ತರ ಹುಟ್ಟುತ್ತವೆ, ಅಣಬೆ ತರ ಸಾಯುತ್ತವೆ. ಆದರೆ ನಮ್ಮ ಹಾಲು ಒಕ್ಕೂಟ ವರ್ಷದ 365 ದಿನಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಸಂಘದಲ್ಲಿ ಷೆರು ಹೊಂದಿ ಹಾಲು ಉತ್ಪಾದನೆ ಮಾಡಿ ಸಂಘಕ್ಕೆ ಹಾಲು ಹಾಕುವ ರೈತರು ಆಕಸ್ಮಿಕವಾಗಿ ಮರಣ ಹೊಂದಿದರೆ ಅವರ ವಯಸ್ಸು 18 ರಿಂದ 40 ವರ್ಷದೊಳಗಿದ್ದರೆ 1 ಲಕ್ಷ, 40 ರಿಂದ 60 ವರ್ಷದೊಳಗಿದ್ದರೆ 40 ಸಾವಿರ, ವಯಸ್ಸು 60 ವರ್ಷ ಮೇಲ್ಪಟ್ಟು ಆಗಿದ್ದಲ್ಲಿ ರೂ 20,000 ಪರಿಹಾರ ಧನವನ್ನು ನೀಡಲಾಗುವುದು ಅವರು ಸಂಘಕ್ಕೆ ಹಾಲು ಕೊಡುತ್ತಾ ಇರಬೇಕು ಮತ್ತು ವರ್ಷದಲ್ಲಿ ಕನಿಷ್ಠ ನೂರು ದಿನ ಹಾಲು ಹಾಕಿರಬೇಕು ಎಂದರು.



ಗುಣಮಟ್ಟದ ಹಾಲನ್ನು ಹಾಕಿದರೆ ಅವರಿಗೆ ಫ್ಯಾಟ್ ಮತ್ತು ಡಿಗ್ರಿಯ ಮೇಲೆ ಒಳ್ಳೆ ದರಕ್ಕೆ ಹಾಲನ್ನು ಖರೀದಿ ಮಾಡುತ್ತೇವೆ. ಹಾಲು ಹಾಕುವ ಉತ್ಪಾದಕರ ಹಸುಗಳಿಗೆ ಶೇಕಡ 75ರಷ್ಟು ಹಣ ದ ಪ್ರೀಮಿಯಂ ಅನ್ನ ಒಕ್ಕೂಟದಿಂದ ಬರುಸುತ್ತೇವೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಹುಲ್ಲು ಕಟ್ಟು ಮಾಡುವ ಜಾಬ್ ಕಟ್ಟರ್ ಮಿಷನ್ ಗೆ ರೂ 15,000 ಹಾಲು ಕರೆಯುವ ಮಿಷಿನ್ ಯಂತ್ರಕ್ಕೆ ರೂ 20,000 ಮತ್ತು ರಬ್ಬರ್ ಮ್ಯಾಟ್ ಖರೀದಿಗೆ ರೂ.ಶೇಕಡ 30ರಷ್ಟು  ಸಹಾಯಧನ ನೀಡುತ್ತೇವೆ. ಸಂಘದಲ್ಲಿ ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರುವ ಕಾರ್ಯದರ್ಶಿಗಳಿಗೆ ನಿವೃತ್ತಿ ವೇತನವಾಗಿ 3 ಲಕ್ಷ ಹಾಲು ಪರಿವೀಕ್ಷಕರಿಗೆ ರೂ 2.25 ಲಕ್ಷ ಹಾಗೂ ಸಹಾಯಕರಿಗೆ 1.5 ಲಕ್ಷ ಪರಿಹಾರ ಧನವನ್ನು ನೀಡುತ್ತೇವೆ. ಶಿವಮೊಗ್ಗ ಹಾಲು ಒಕ್ಕೂಟ 2024 25 ನೇ ಸಾಲಿನಲ್ಲಿ ಒಟ್ಟು ನಿವಳ ಲಾಭ ರೂ 11 ಕೋಟಿ 41 ಲಕ್ಷ ಲಾಭಗಳಿಸಿದ್ದು ಸಂಘಕ್ಕೆ ಹಾಲು ಹಾಕುವ ಸಂಘಗಳಿಗೆ ಬೋನಸ್ ಮತ್ತು ಶೇರ ಡ್ಯೂಡೆಂಟನ್ನು ನಿಯಮಾನುಸಾರ ಕೊಡಲಾಗುವುದು. ಸಂಘಗಳಿಗೆ ಹಾಲು ಹಾಕುವ ರೈತರಿಗೆ ವಿಮ ಸೌಲಭ್ಯವಿದ್ದು ಅವರಿಗೆ ಆರೋಗ್ಯ ಚಿಕಿತ್ಸೆ ಅಪಘಾತ ಮರಣ ಹೊಂದಿದಲಿ ಪರಿಹಾರ ನಿಧಿ ಒಕ್ಕೂಟದ ಕಲ್ಯಾಣ ಟ್ರಸ್ಟ್ ಮೂಲಕ ನೀಡಲಾಗುತ್ತಿದೆ. ರೈತರಿಗೆ ಉತ್ತಮ ಮಾಹಿತಿ ನೀಡಲು ಒಕ್ಕೂಟ ರೂ 20,000 ಸಹಾಯಧನವನ್ನು ನೀಡಿ ಹಾಲು ಒಕ್ಕೂಟ ಸಂಘಗಳ ಮೂಲಕ ಬರಡು ರಾಸು ಹಸುಗಳ ವೈದ್ಯಕೀಯ ಕೆಂಪುಗಳನ್ನು ಮಾಡಿಸು ಉದರ ಮೂಲಕ ರೈತರಿಗೆ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಮತ್ತು ಹಸುಗಳ ಆರೋಗ್ಯ ಹಿತ ದೃಷ್ಟಿಯಿಂದ ಸಹಕಾರಿಯಾಗುತ್ತದೆ. ಇಂತಹ ಅನೇಕ ಯೋಜನೆಗಳು ಇವೆ ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಹಾಲು ನೀಡುವ ರೈತರಿಗೆ ರಾಜ್ಯ ಸರ್ಕಾರ ಪ್ರತಿ ಲೀಟರ್ ಗೆ ರೂ 5.00 ಸಹಾಯಧನ ನೀಡುತ್ತಾ ಇದೆ ಎಂದರು.

 

ಶಿವಮೊಗ್ಗ ಹಾಲು ಒಕ್ಕೂಟ ಸಹಾಯ ವ್ಯವಸ್ಥಾಪಕರಾದ ಎಂ.ಪುಟ್ಟರಾಜು ಮಾತನಾಡಿ ಹಸುಗಳ ಆರೋಗ್ಯ ಕಾಪಾಡಲು ವೈದ್ಯಕೀಯ ಸವಲತ್ತು ಕೊಡುವುದರ  ಜೊತೆಗೆ  ಪ್ರತಿದಿನ ಪಶುವೈದ್ಯರನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಳಿಸಿಕೊಡುವ ವ್ಯವಸ್ಥೆಯನ್ನು ಹೊಂದಿದೆ. ಶಿವಮೊಗ್ಗ ಹಾಲು ಒಕ್ಕೂಟವು ಸದಸ್ಯ ಹಾಲು ಉತ್ಪಾದಕರಿಗೆ ಅನುದಾನದಲ್ಲಿ ಬೇವಿನ ಬೀಜಗಳನ್ನು ವಿತರಿಸುವುದಿಲ್ಲವೇ ಹಾಲು ಕರೆಯುವ ಯಂತ್ರ ಮೇವ ಕತ್ತರಿಸುವ ಯಂತ್ರ ಗಳನ್ನು 50% ಪರ್ಸೆಂಟ್ ಅನುದಾನದಲ್ಲಿ ನೀಡುತ್ತಿದೆ. ಸದಸ್ಯ ಹಾಲು ಉತ್ಪಾದಕರಿಗೆ ಮತ್ತು ಸದಸ್ಯರಲ್ಲದ ಉತ್ಪಾದಕರಿಗೆ ಹಣ ವಿತರಣೆಯಾಗುವುದರಲ್ಲಿ ಯಾವುದೇ ದುರುಪಯೋಗ ವಾಗಬಾರದೆಂದು ಎಂದು ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘದಿAದ ಬ್ಯಾಂಕ್ ಖಾತೆಗಳ ಮುಖಾಂತರ ಉತ್ಪಾದಕರಿಗೆ ಹಣವನ್ನು ವಿತರಣೆ ಮಾಡಲಾಗುತ್ತಿದೆ. ಶಿವಮೊಗ್ಗ ಹಾಲು ಒಕ್ಕೂಟವು ಪ್ರತಿಯೊಂದು ಸಹಕಾರ ಸಂಘಗಳ ಮುಖಾಂತರ ಹಾಲು ಉತ್ಪಾದಕರಿಗೆ ಪ್ರತಿ ತಿಂಗಳು ಅವರ ಬೇಡಿಕೆಯಂತೆ ಪಶು ಆಹಾರ. ಖನಿಜ ಮಿಶ್ರಣ. ಜಂತು ನಿವಾರಕ ಔಷಧಿ. ಬೇವಿನ ಬೀಜಗಳು. ಹಸುಗಳಿಗೆ ಮಲಗಲು ಮ್ಯಾಟ್ ವ್ಯವಸ್ಥೆ ಮಾಡಲಾಗುತ್ತಿದೆ. ಸದರಿ  ಸಂಘದಲ್ಲಿ ಚುನಾವಣೆ ಆಗಿರುವುದರಿಂದ ನಿರೀಕ್ಷಿತ ಲಾಭ ಬಂದಿರುವುದಿಲ್ಲ. ಖರ್ಚುಗಳು ಹೆಚ್ಚಾಗಿರುವುದರಿಂದ ಸಂಘವು ವಾರ್ಷಿಕ 21.028.79 ನಿವ್ವಳ ಲಾಭ ಇರುತ್ತದೆ ಎಂದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ.ಆರ್.ರವಿಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಡಾ.ಎನ್.ವಿಜಯ್‌ಕುಮಾರ್ ಪಶು ವೈದ್ಯರು ನಾಯಕನಹಟ್ಟಿ, ವಿಶ್ವನಾಥ ಉಪಾಧ್ಯಕ್ಷರು, ಡಿ.ತಿಪ್ಪೇಸ್ವಾಮಿ, ಯೋಗೇಶ್ ಡಿ.ಬಿ, ಗಂಗಮ್ಮ, ಅಭಿಷೇಕ್, ಇ.ರುದ್ರಮುನಿ, ಕೆ.ಟಿ.ತಿಪ್ಪೇಸ್ವಾಮಿ, ಬಿ.ಡಿ.ವೀರಭದ್ರಪ್ಪ, ರಾಜಣ್ಣ, ಸಿಬ್ಬಂದಿ ವರ್ಗದವರಾದ ಪ್ರೇಮರಾಜ್, ಕುಮಾರ ಎನ್.ಟಿ ನಾಗರಾಜ್, ಡಿ.ಟಿ.ಯೋಗೇಶ್ ಹಾಗೂ ಹಾಲು ಉತ್ಪಾದಕರ ಸಂಘದ ಸರ್ವ ಸದ್ಯಸರುಗಳು 25 ವರ್ಷ ತುಂಬಿದ ಹಿನ್ನಲೆಯಲ್ಲಿ ಕೆಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿಕೊಂಡರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST