LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಲಕುಂದಿ ಸಕಿಪ್ರಾ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಬಳ್ಳಾರಿ : ತಾಲೂಕಿನ ಹಲಕುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 77 ನೇ ಗಣರಾಜ್ಯೋತ್ಸವವನ್ನು

ನಿಮಗಾಗಿ ನಾವು ಸಂಸ್ಥೆಯ ಸಹಯೋಗದಲ್ಲಿ ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು.

ಮಾಜಿ ಸೈನಿಕ, ಸಂಸ್ಥೆಯ ಹಿರಿಯ ಸದಸ್ಯ   ಪ್ರಹ್ಲಾದ ರೆಡ್ಡಿ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ ಅವರು, ಭಾರತದ ಸಂವಿಧಾನ ಜಗತ್ತಿನಲ್ಲಿಯೇ ದೊಡ್ಡ ಲಿಖಿತ, ಶ್ರೇಷ್ಠ ಸಂವಿಧಾನವಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಅರಿತು ದೇಶದ ಪ್ರಗತಿಗೆ ಶ್ರಮಿಸಬೇಕು . ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ದೇಶ ಭಕ್ತಿ, ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು‌ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಸಿ.ಮಂಜುನಾಥ ಮಾತನಾಡಿ,  ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ ಎಂದು ಹೇಳಿದರು.

ದೇಶದ ಮಹಿಳೆಯರು, ಹಿಂದುಳಿದವರು, ದನಿ ಇಲ್ಲದ ದಮನಿತರು, ಮುಖ್ಯ ವಾಹಿನಿಗೆ ಬರಲು ಭಾರತದ ಸಂವಿಧಾನವೇ ಕಾರಣ ಎಂದು ತಿಳಿಸಿದರು. ನಿಮಗಾಗಿ ನಾವು ಸಂಸ್ಥೆ ಕಳೆದ 10 ವರ್ಷಗಳಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ  ಸಮಾಜಮುಖಿ  ಕಾರ್ಯಗಳ‌ ಮೂಲಕ ಗಮನ ಸೆಳೆದಿದೆ. ಪರಿಸರ, ಶೈಕ್ಷಣಿಕ, ಸಾಂಸ್ಕೃತಿಕ, ರಕ್ತದಾನ, ಕನ್ನಡಪರ ಚಟುವಟಿಕೆಗಳು ಇತರರಿಗೆ ಮಾದರಿಯಾಗಿವೆ ಎಂದು ಪ್ರಶಂಸಿಸಿದರು.

ಸಿ ಆರ್ ಪಿ ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ,‌ ತಮ್ಮ ಕ್ಲಸ್ಟರ್ ವ್ಯಾಪ್ತಿಯ ಇತರೆ ಶಾಲೆಗಳಲ್ಲಿ‌ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದರೆ ಈ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಪರಿಸರ ಇರುವದರಿಂದ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಲಕುಂದಿ ಗ್ರಾಪಂ ಸದಸ್ಯ ಕೆ. ಕೇಶವ ಅವರು ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರೆಲ್ಲರೂ ಶ್ರಮಿಸುತ್ತಿದ್ದೇವೆ.  ಗ್ರಾಮದ ಮಕ್ಕಳ ಶೈಕ್ಷಣಿಕ ಮತ್ತು  ಆರೋಗ್ಯದ ಬಗ್ಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರು ಕೆ. ಕೆಂಚಪ್ಪ ಅವರು ಶಾಲೆಯ ಮಕ್ಕಳ ಜ್ಞಾನಾರ್ಜನೆಗೆ ಕಂಪ್ಯೂಟರ್, ದೊಡ್ಡ ಟಿವಿಯ ಅಗತ್ಯವಿದ್ದು ಗ್ರಾಪಂ ಒದಗಿಸಬೇಕು ಎಂದು ಮನವಿ ಮಾಡಿದರು.



ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್ ಎಂ ಎಸ್, ಹಿರಿಯ ಶಿಕ್ಷಕಿ ಮೀನಾಕ್ಷಿ ಕಾಳೆ, ಸಹ ಶಿಕ್ಷಕಿ ಎಸ್. ಕೆ ಎಸ್ ವಿಶಾಲಾಕ್ಷಿ ಮಾತನಾಡಿದರು.

ಗಣರಾಜ್ಯೋತ್ಸವದ  ಅಂಗವಾಗಿ ಸಂಸ್ಥೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ

ಗ್ರಾಪಂ ಅಧ್ಯಕ್ಷೆ ಶ್ರೀಮತಿ ಹೊನ್ನೂರಮ್ಮ, ಗ್ರಾಪಂ‌ ಸದಸ್ಯರಾದ   ಬುಡೇನಸಾಬ್, ಡಿ ಎಚ್ ನಾಗರಾಜ್,  ಶಿಕ್ಷಣ ಪ್ರೇಮಿಗಳಾದ ಹೆಚ್ ಕೆ. ಅಂಜಿನಪ್ಪ, ಶಿವು ಮಡಿವಾಳ ಅವರು ಬಹುಮಾನ ವಿತರಿಸಿದರು.

ಎಸ್ ಡಿ‌ ಎಮ್‌ಸಿ ಸದಸ್ಯ ಹೊನ್ನೂರು ಸ್ವಾಮಿ,  ಪ್ರಶಿಕ್ಷಣಾರ್ಥಿಗಳಾದ ಕು.ವಿಶಾಲಾಕ್ಷಿ,  ಕುಮಾರಿ ಶಮೀನಾ ಹಾಗು ಸಂಸ್ಥೆಯ ಕಾರ್ಯನಿರ್ವಾಹಕರಾದ ಅನಿವಾಶ್, ವಸಂತ್, ವೆಂಕಟೇಶ್, ಹಸೇನ್, ಭರತ್, ರಾಜು ಕೆ ಹೆಚ್, ಉದಯ್, ರಾಜ, ದಕ್ಷಿಣ ಮೂರ್ತಿ, ವೀರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಲಹೆಗಾರ  ಪ್ರಶಾಂತ್ ಕುಮಾರ್ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ಬಿ ಎಸ್ ಜಯಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಆಕರ್ಷಿಸಿದವು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST