LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಂಗಚೌಕಿ ನಾಟಕೋತ್ಸವ ಸಮಾರೋಪ ಸಮಾರಂಭ

ಮರಿಯಮ್ಮನಹಳ್ಳಿ: ರಂಗಭೂಮಿ ಉಳಿಸುವಲ್ಲಿ  ಗ್ರಾಮೀಣ ವೃತ್ತಿ ಕಲಾವಿದರು ಅಗ್ರಗಣ್ಯ ಎಂದು ನಾಟಕಕಾರ ಹಾಗೂ ಪತ್ರಕರ್ತ ಮೈಸೂರಿನ ಗಣೇಶ ಅಮೀನ ಗಡ ರವರು ಹೇಳಿದರು.

ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ರಂಗಚೌಕಿ ನಾಟಕೋತ್ಸವದ ಸಮಾರೋಪ ಉದ್ದೇಶಿಸಿ ಮಾತನಾಡಿದರು. ‌ಮರಿಯಮ್ಮನಹಳ್ಳಿಯ  ಆಗಿನ ಹಿರಿಯ ಕಲಾವಿದರಾದ  ಎಲಿವಾಳ ಸಿದ್ದಯ್ಯ, ದುರ್ಗಾದಾಸ, ಪ್ರಸ್ತುತ ಕೆ.ನಾಗರತ್ನಮ್ಮ ಇವರ ಜಮಾನದ ಅನೇಕ ಕಲಾವಿದರಿಂದ  ಈಗಿನ ತಲೆಮಾರಿನ ಕಲಾವಿದರ ವರೆಗೂ ಕಲೆಗಾಗಿ ಜೀವನ ಮುಡಿಪಾಗಿಟ್ಟವರು ಸಾಲು ಸಾಲು. ಇವರಿಂದಲೇ ಇಲ್ಲಿ ರಂಗ ಚಟುವಟಿಕೆ ನಿರಂತರವಾಗಿದ್ದು ಕಲೆಯ ತವರೂರಾಗಿದೆ ಎಂದರು.

ಹಿರಿಯ ಕಲಾವಿದೆ ಡಾ.ಕೆ.ನಾಗರತ್ನಮ್ಮ, ನಿವೃತ್ತ ಮುಖ್ಯಗುರು ಬಿಎಂಎಸ್ ಮೃತ್ಯುಂಜಯಪ್ಪ ಮಾತನಾಡಿದರು.ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಪಟ್ಟಣದ ಗ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಬಿ ವಿಜಯ ಕುಮಾರ, ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ‌ ಮಂಜುನಾಥ, ಆರೋಗ್ಯ ಇಲಾಖೆ ಜಿ ಸೋಮಶೇಖರ, ಬಿ. ರಾಮಾಂಜಿನಿ, ಸಂಗೀತ ಶಿಕ್ಷಕಿ ಪಲ್ಲವಿ ಇದ್ದರು. ಪುಷ್ಪಾ ಪಿ. ಮತ್ತು ಸರದಾರ ಬಾರಿಗಿಡ ನಿರ್ವಹಿಸಿದರು.



ಕೌದಿ ನಾಟಕ:

ರಾಜ್ಯದ 50ಕ್ಕೂ ಹೆಚ್ಚು ಪ್ರದರ್ಶನ ಕಂಡ ಕವಿತಾ ರಂಗ ತಂಡ ಮೈಸೂರು ಇವರ ಏಕಪಾತ್ರ ಅಭಿನಯದ  ಕೌದಿ ನಾಟಕವನ್ನು ಪ್ರದರ್ಶಿಸಲಾಯಿತು. ಗಣೇಶ ಅಮಿನಗಡ ರಚನೆಯಲ್ಲಿ, ಜಗದೀಶ ಆರ್ ಜಾಣಿ ನಿರ್ದೇಶನದಲ್ಲಿ  ಕಲಾವಿದೆ ಭಾಗ್ಯಶ್ರೀ ಪಾಳ ಮನೋಜ್ಞವಾಗಿ ಅಭಿನಯಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST