LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ನಾಯಕನಹಟ್ಟಿ : ರಾಜ್ಯ ಸರ್ಕಾರ ರಾಜಕೀಯ ಲಾಭ ಮತ್ತು ಸಚಿವ ಸಂಪುಟ ಮತ್ತು ಖಾತೆ ಹಂಚಿಕೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ . ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ವಾಗ್ದಾಳಿ ನಡೆಸಿದರು.

 

ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿರುವ ಚಿಕ್ಕಕೆರೆಗೆ ಆಗಮಿಸಿ ಬೇಟಿ ನೀಡಿ ಬರ ಅದ್ಯಾಯನ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಸರ್ಕಾರ ಇದುವರೆಗೂ ಬರಗಾಲ ಘೋಷಣೆ ಮಾಡದೇ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಬರಕ್ಕೆ ತುತ್ತಾದ ತಾಲೂಕುಗಳನ್ನು ಘೋಷಿಸಿ, ಗೋಶಾಲೆಗಳನ್ನು ಆರಂಭಿಸಬೇಕೆAದು ಒತ್ತಾಯಿಸಿದರು.

 

                ಇಡೀ ರಾಜ್ಯದಲ್ಲಿ ನಾಯಕನಹಟ್ಟಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಅಣೆಪಟ್ಟಿ ಹೊಂದಿದೆ ಕೆರೆಗಳಲ್ಲಿ ನೀರಿಲ್ಲದರುವುದರಿಂದ ಬರದ ಛಾಯೆ ಆವರಿಸಿದೆ ತಾಲೂಕು ಮತ್ತು ಜಿಲ್ಲೆಯಲ್ಲಿನ ಕೆರೆಗಳು ಒಣಗಿರುವುದರಿಂದ ತಕ್ಷಣ ಬರ ಘೋಷಣೆ ಮಾಡಬೇಕು ಮಳೆ ಇಲ್ಲದ ಜನ ಜಾನುವಾರುಗಳು ತೊಂದರೆ ಅನುಭವಿಸುವಂತಹಾಗಿದೆ ಮುಖ್ಯಮಂತ್ರಿಗಳು ಯಾರು ಬೆಳೆಯನ್ನು ಬೆಳೆಯಬೇಡಿ ಎಂದು ಹೇಳಿಕೆ ನೀಡಿದ್ದಾರೆ. ಬೆಳೆ ಬೆಳೆಯಬೇಡಿ ಎಂದು ಹೇಳಿರುವ ಸರ್ಕಾರ ಪರಿಯಾಯವಾಗಿ ರೈತರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ರೈತರು ಉದ್ಯೋಗ ನೀಡುವ ಕಾರ್ಯ ಆರಂಭಿಸಬೇಕು ಗೂಳೆ ತಪ್ಪಿಸಲು ಕೇಂದ್ರ ಸರ್ಕಾರದ ಯೋಜನೆಯನ್ನು ವಿ.ಬಿಜೆ ರಾಮ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಜನರು ಈಗಾಗಲೇ ಮಹಾರಾಷ್ಟ್ರ ಗೋವಾ ತಮಿಳುನಾಡು ಕಡೆಗೆ ಗೂಳೆ ಹೋಗುತ್ತಿದ್ದಾರೆ. ಕೇಂದ್ರ ನೀಡಿರುವ ಅನುದಾನವನ್ನು ಬಳಸಿಕೊಳ್ಳದೆ ಕೇಂದ್ರದ ಕಡೆಗೆ ಲೋಪ ತೋರಿಸುವ ಕಾರ್ಯ ಮಾಡುತ್ತಿದೆ. ಎಂದು ದೂರಿದರು ರಾಜ್ಯದಲ್ಲೇಡೆ ಬರಗಾಲ ಆವರಿಸಿದೆ ಆದರೆ ಸರ್ಕಾರ ಅಧಿಕೃತವಾಗಿ ಘೋಷಣೆಯನ್ನು ಮಾಡಿಲ್ಲ ಜಿಲ್ಲಾಧಿಕಾರಿಗಳು ಸಭೆ ಕರೆದು ತಕ್ಷಣ ಬರದ ಸ್ಥಿತಿಯನ್ನು ಅವಲೋಕಿಸಿ ಬರಪಿಡಿತ ತಾಲೂಕುಗಳನ್ನು ಘೋಷಿಸಬೇಕು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಮನವಿಯನ್ನೇ ಸಲ್ಲಿಸಿಲ್ಲ ಮೊದಲು ಬರ ಘೋಷಣೆ ಮಾಡದೆ ಯಾವುದೇ ಕಾರ್ಯ ಆರಂಭಿಸಲು ಸಾಧ್ಯವಿಲ್ಲ ಜಾನುವಾರುಗಳಿಗೆ ಗೋಶಾಲೆಗಳನ್ನು ಪ್ರಾರಂಭಿಸಬೇಕೆAದು ಆಗ್ರಹಿಸಿದರು ಮುಖ್ಯಮಂತ್ರಿ ಇಲ್ಲಿಯವರೆಗೂ ಬರ ಅಧ್ಯಾಯನ ಆರಂಭಿಸಿಲ್ಲ ಬರಪಿಡಿತ ತಾಲೂಕುಗಳ ಘೋಷಣೆಗೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದೇವೆ. ಅದಕ್ಕಾಗಿ ರಾಜ್ಯ ಸರ್ಕಾರ ಅನುದಾನ ಒದಗಿಸುತ್ತಿಲ್ಲ. ಆಗಸ್ಟ್ 13ರಂದು ವಿಧಾನ ಮಂಡಲ ಅಧಿವೇಶನ ನೀಡಲಿದ್ದು ಆಗ ಬರ ಅಧ್ಯಾಯನ ಎಲ್ಲಾ ವಿವರಗಳನ್ನು ಚರ್ಚೆ ಮಾಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಭದ್ರಾ ಮೇಲ್ದಂಡೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

 

ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಹಸಿರುಸೇನೆ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ಸಂದರ್ಭದಲ್ಲಿ ರಾಜ್ಯ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಬಂಗಾರ ಹನುಮಂತ ರವರು ಬೈರತಿ ಬಸವರಾಜ್ ಅವರು ಶಾಸಕರು ಹರಿಹರ ಕ್ಷೇತ್ರದ ಶಾಸಕರಾದ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್. ಮಾಜಿ ಶಾಸಕರಾದ ಎಸ್.ತಿಪ್ಪೇಸ್ವಾಮಿಯವರು, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರಾಮದಾಸ್, ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪಿ ಶಿವಣ್ಣ, ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಹಾಗೂ ಡಾಕ್ಟರ್ ಮಂಜುನಾಥ್, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಪರಶುರಾಮ್, ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿ ಬೋರಸ್ವಾಮಿ, ಮಂಡಲ ಅಧ್ಯಕ್ಷರಾದ ಎಂ ಮಲ್ಲೇಶ್  ಚೆನ್ನಿಗಾನಹಳ್ಳಿ, ನಿಕಟಪೂರ್ವ ಅಧ್ಯಕ್ಷರಾದ ಎಂ ವೈ ಟಿ ಸ್ವಾಮಿ ಹಾಗೂ ನಿಕಟಪೋರ್ವ ಅಧ್ಯಕ್ಷರಾದ ರಾಮರೆಡ್ಡಿ hಮಂಡಲ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ಗುಂತಕೊಲಮ್ಮನಹಳ್ಳಿ, ಓಬಣ್ಣ ಮಂಡಲ ಉಪಾಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಬಿಎಮ್ ಪರಮೇಶ್ವರಪ್ಪ ಹಾಗೂ ಸಣ್ಣಬಯ್ಯ ಜಿಲ್ಲಾ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬೋಸೆರಂಗಪ್ಪ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿಯಾದ ಅಪ್ಪು ವರವು, ಪ್ರಧಾನ ಕಾರ್ಯದರ್ಶಿಯಾದ ಗೋವಿಂದಪ್ಪ, ರೈತ ಮೋರ್ಚಾ ಅಧ್ಯಕ್ಷರಾದ ನಾರಾಯಣ ರೆಡ್ಡಿ, ಕೋಶಧ್ಯಕ್ಷರಾದ ಚಂದ್ರಣ್ಣ.ಏನ್ ದೇವರಹಳ್ಳಿ, ನಗರ ಘಟಕ ಅಧ್ಯಕ್ಷರಾದ ನಾಗರಾಜ್ ಜಾಗನೂರಹಟ್ಟಿ, ಎಸ್ಸಿ ಮೋರ್ಚಾ ಅಧ್ಯಕ್ಷರಾದ ಶಂಕರಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಪವಿತ್ರ ತಿಪ್ಪೇಸ್ವಾಮಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೂರಮ್ಮ, ರೋಜಾ, ರೈತನ ಪ್ರಧಾನ ಕಾರ್ಯದರ್ಶಿಯಾದ ಬೋರಯ್ಯ.ಬಿ ಗಿಡ್ಡಾಪುರ, ನಗರ ಘಟಕ ಪ್ರಧಾನ ಕಾರ್ಯದರ್ಶಿಗಳಾದ ರಾಜು, ಬೋರಯ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಕೆಂಗರುದ್ರಪ್ಪ  ಸಣ್ಣಮಲ್ಲಯ್ಯ, ಕೃಷ್ಣಪ್ಪ, ಪ್ರಹ್ಲಾದ ಚನ್ನಬಸಯ್ಯನಹಟ್ಟಿ ಹಾಗೂ ಜಿಲ್ಲಾ ಮತ್ತು ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರು ರೈತ ಮುಖಂಡರು, ಕರ್ನಾಟಕ ರೈತ ಹಸಿರುಸೇನೆ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ ಭಾಗವಹಿಸಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ