ಇದು ಮುಜರಾಯಿ ದೇವಸ್ಥಾನವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಇದೆ. ಆದರೂ ಕೂಡ ಯಾವುದೇ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡದೆ ಇರುವಂತದ್ದು ಅಕ್ಷಮ್ಯ ಅಪರಾಧವೇ ಸರಿ.
ವರ್ಶಂ ಪ್ರತಿ ಕೋಟ್ಯಂತರ ರೂಪಾಯಿ ಆದಾಯ ಬರುವ ದೇವಸ್ಥಾನ ಇದಾಗಿದ್ದು ಶಾಶ್ವತವಾಗಿ ಇರುವಂತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡದೆ ಕೇವಲ ತಾತ್ಕಾಲಿಕವಾಗಿ ನಿರ್ಮಾಣ ಮಾಡಿ ದೇವಸ್ಥಾನದ ಹಣವನ್ನು ವ್ರತಾಖರ್ಚು ಮಾಡಿದ್ದಾರೆ ಎಂದು ಪ್ರಭಾಕರ ಆರೋಪಿಸಿದ್ದಾರೆ.
ಹಂತ ಹಂತವಾಗಿ ಪ್ರತಿ ವರ್ಷ ಒಂದೊಂದು ಭಾಗವನ್ನು ಅಭಿವೃದ್ಧಿಪಡಿಸಿದ್ದರೆ ಇಷ್ಟು ಸಮಯಕ್ಕೆ ಸಂಪೂರ್ಣ ದೇವಸ್ಥಾನದ ಸುತ್ತಲೂ ಶಾಶ್ವತವಾಗಿರುವಂತ ರೀತಿಯಲ್ಲಿ ಸಿಮೆಂಟ್ ರಸ್ತೆ ಅಭಿವೃದ್ಧಿ ಮಾಡಿಸಬಹುದಾಗಿತ್ತು ಎಂದು ಪ್ರಭಾಕರ ಹೇಳಿದ್ದಾರೆ.
ಸ್ಥಳೀಯ ಶಾಸಕರಿಗೆ ಮತ್ತು ಜಿಲ್ಲಾಡಳಿತಕ್ಕೆ ದೂರ ದೃಷ್ಟಿ ಇಲ್ಲ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ.

ಲಕ್ಷಾಂತರ ಜನ ಭಕ್ತಾದಿಗಳು ಬರುವಂತ ದೇವಸ್ಥಾನದ ಸುತ್ತಮುತ್ತಲು ಪರಿಸರವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಒಂದು ಕಲ್ಪನೆಯ ಕೂಡ ಇಲ್ಲ. ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವಂಥ ರಸ್ತೆಯ ಪಕ್ಕದಲ್ಲಿ ಚರಂಡಿಯ ನೀರು ಸೇರಿದಂತೆ ಕೊಳಾಯಿ ನೀರು ರಸ್ತೆಗೆ ಬಂದು ಹರಿದು ಹೋಗುತ್ತಿದ್ದರು ಕೂಡ ಯಾರೊಬ್ಬರೂ ಈ ಬಗ್ಗೆ ಚಿಂತಿಸದೇ ಇರುವುದು ಬಹಳ ನೋವಿನ ಸಂಗತಿಯಾಗಿದೆ.
ಸರ್ಕಾರಕ್ಕೆ ಕಂದಾಯ ಹಣ ಬರಬೇಕು ಆದರೆ ಮೂಲಭೂತ ಸೌಕರ್ಯ ಮಾಡಲು ಎಕೆ ಇಷ್ಟು ನಿರಾಸಕ್ತಿ ಎಂದು ಪ್ರಭಾಕರ್ ಪ್ರಶ್ನಿಸಿದ್ದಾರೆ.
ತಮಿಳುನಾಡು ಆಂಧ್ರ ಪ್ರದೇಶ ಕರ್ನಾಟಕ ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವಲ್ಲಿ ಕೆಲಸ ಮಾಡಬೇಕೆಂದು ಪ್ರಭಾಕರ್ ಆಗ್ರಹಿಸಿದ್ದಾರೆ.
ರಥ ಬೀದಿಯ ರಸ್ತೆ ಅಭಿವೃದ್ಧಿಪಡಿಸುವಂತೆ ಕೋರಿ ಮನವಿ.
ಲಕ್ಷಾಂತರ ಭಕ್ತರು ಹಾದು ಹೋಗುವ ಮತ್ತು ದೇವಿಯ ಉತ್ಸವ ಮೂರ್ತಿ ಹಾದು ಹೋಗುವ ಮುಖ್ಯ ರಸ್ತೆಯ ಅಭಿವೃದ್ಧಿ ಆಗಬೇಕು ಹಾಗೆ ಮತ್ತೆ ರಸ್ತೆ ಒತ್ತುವರಿ ತೆರವು ಮಾಡುವಂತೆ ಕೂಡ ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.