LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

ನಾಯಕನಹಟ್ಟಿ : ಹೆಣ್ಣು ಮಕ್ಕಳಿಗೆ ಬಾಲ್ಯದಿಂದ ಉತ್ತಮವಾದ ಶಿಕ್ಷಣ ಕೊಡಿಸಿ ಬುದ್ಧಿವಂತರನ್ನಾಗಿ ಮಾಡಿದರೆ ಮುಂದೆ ಬಂದು ತಮ್ಮ ಬದುಕನ್ನು ತಾವೆ ರೂಪಿಸಿಕೊಳ್ಳುತ್ತಾರೆ ಎಂದು ನಾಯಕನಹಟ್ಟಿ ಪಿ.ಎಸ್.ಐ  ಪಾಂಡುರಂಗಪ್ಪ ತಿಳಿಸಿದರು.

 

ಸಮೀಪದ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಚಳ್ಳಕೆರೆ ಉಪವಿಭಾಗ ತಳಕು ವೃತ್ತ ನಾಯಕನಹಟ್ಟಿ ಪೊಲೀಸ್ ಠಾಣೆ ಅಪರಾದ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಿಕ್ಕವಯಸ್ಸಿನ ಗರ್ಭಿಣಿ ಹಾಗೂ ಬಾಲ್ಯವಿವಾಹ ತಡೆಗಟ್ಟು ನಿಟ್ಟಿನಲ್ಲಿ ಎಲ್ಲಾರು ಸಹಕರಿಸಬೇಕು ಬಾಲ್ಯವಿವಾಹ ಮಾಡುವುದು ನಿಲ್ಲಬೇಕು. ಯಾರೇ ಬಾಲ್ಯ ವಿವಾಹ ಮಾಡಿದರು ಮತ್ತು ಅದನ್ನು ಪ್ರೊತ್ಸಹಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

 

ಹೆಂಡತಿ ಮಕ್ಕಳು ಮತ್ತು ಪೋಷಕರ ಮುಖವನ್ನು ನೋಡಿ ತಪ್ಪದೇ ಹೆಲ್ಮೆಟ್‌ಗಳನ್ನು ಧರಿಸಬೇಕು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದರೆ ಪೊಲೀಸ್‌ರು ಹಿಡಿದುಕೊಂಡರೆ ನನಗೆ ಯಾರು ಸಹ ಬಿಡಿಸಬೇಕೆಂದು ಮೊಬೈಲ್ ಕರೆ ಮಾಡಬಾರದು. ನಾನು ಸಹ ಈ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂದರು. ನಿಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳ ಮೇಲೆ ಪ್ರೀತಿ ಇಟ್ಟರೆ ತಲೆಗೆ ಹೆಲ್ಮೆಟ್ ಧರಿಸದೆ ಹೊರಗೆ ಬರಬಾರದು. ಎಂದರಲ್ಲದೆ ಪೊಲೀಸರ ಭಯಕ್ಕೆ ಅಥವಾ ದಂಡಕ್ಕೆ ಎದರಿ ಹೆಲ್ಮೆಟ್ ಧರಿಸುವ ಬದಲು ನಿಮ್ಮ ಜೀವ ಕಾಪಾಡಲು ತಪ್ಪದೆ ಹೆಲ್ಮೆಟ್‌ಗಳನ್ನು ಧರಿಸಬೇಕೆಂದು ಮನವಿ ಮಾಡಿಕೊಂಡರು.



ಅಪರಿಚಿತರು ಅಥವಾ ಯಾರಾದರು ಕರೆ ಮಾಡಿ ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಸಂಖ್ಯೆ ಒಟಿಪಿ ಕೇಳಿದರೆ ಹೇಳಬೇಡಿ ಎಂದು ಸಲಹೆ ನೀಡಿದರು. ಗುರುತು ಪರಿಚಯ ಇಲ್ಲದೆ ಅಪರಿಚಿತ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಾಗ ಧೈರ್ಯದಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ವಾಹನ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ಮಧ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಸುರಕ್ಷಿತವಾಗಿ ಪ್ರಯಾಣಿಸಿ ಎಂದು ಮನವಿ ಮಾಡಿಕೊಂಡರು. ನಿಮ್ಮ ಮನೆ ಅಂಗಡಿ ಬಾಗಿಲುಗಳು ಭದ್ರವಾಗಿಡುವಂತೆ ಎಚ್ಚರವಹಿಸಿ ಇಂಟರ್ನಲ್ ಲಾಕ್ ಸಿಸ್ಟಮ್ ಅಳವಡಿಸಲು ಸಾಧ್ಯವಾದರೆ ಸೈರನ್ ಅಳವಡಿಸಿಕೊಳ್ಳಿ ನೀವು ಊರಿಗೆ ಹೋಗುವ ವಿಷಯವನ್ನು ಕೆಲಸದವರಿಗೆ ಹಾಗೂ ಇತರೆ ಜನರಿಗೆ ಅನವಶ್ಯಕವಾಗಿ ತಿಳಿಸಬೇಡಿ. ಮನೆಯಲ್ಲಿ ಸಂಜೆಯಿAದ ಲೈಟ್ ಹಾಕುವ ವ್ಯವಸ್ಥೆ ಮಾಡಿಕೊಳ್ಳಿ. ಅಪರಿತಿರನ್ನು ಮನೆಯ ಒಳಗೆ ಕರೆಯದಿರಿ. ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇಡಬೇಡಿ. ಮಹಿಳೆಯರು ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ವಾಯುವಿಹಾರ ಮಾಡಬಾರದು. ಮೈಮೇಲೆ ಧರಿಸಿದ ಚಿನ್ನಾಭರಣದ ಕಡೆ ಗಮನವಹಿಸಿ ಆದಷ್ಟು ಚಿನ್ನಾಭರಗಳು ಕಾಣದಂತೆ ಧರಿಸಿಕೊಳ್ಳಿ ಎಂದು ಮನವರಿಕೆ ಮಾಡಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಬ್ಯಾಂಕ್ ಸೂರನಾಯಕ, ಜಿ.ತಿಪ್ಪೇಸ್ವಾಮಿ, ವಕೀಲ ಮಲ್ಲೇಶ್, ಮುದಿಯಪ್ಪ, ಬೋರನಾಯಕ, ಭೀಮನಕೆರೆ ಪಾಲಯ್ಯ, ತಿಪ್ಪೇಶ್, ಕೆ.ಪಿ.ರುದ್ರಮುನಿ ನಿವೃತ್ತ ಗ್ರಾಮೀಣ ಬ್ಯಾಂಕ್ ಸಿನಿಯರ್ ಮ್ಯಾನೇಜರ್, ಕಾಮರಾಜ್, ರಾಮಸಾಗರ ಕಾಟಯ್ಯ, ಉಮಾಪತಿ, ರಂಗಪ್ಪ, ಕರಿಯಣ್ಣ, ಜಯಣ್ಣ, ಹಾಗೂ ಇನ್ನೂ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST