ಚಿತ್ರದುರ್ಗ: ಗೌಡಿಹಳ್ಳಿ ಮುಖ್ಯರಸ್ತೆಯಿಂದ ಕಡ್ಲಪ್ಪನಹಟ್ಟಿ ಯ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವರೆಗೆ ರಸ್ತೆಯು ಹದೆಗೆಟ್ಟಿದ್ದು ಶಾಲೆಗೆ ಹೋಗುವ ಮಕ್ಕಳಿಗೆ , ಸಾರ್ವಜನಿಕರಿಗೆ, ರೈತರಿಗೆ ತೊಂದರೆಯಾಗುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಈ ರಸ್ತೆಗೆ ಜಲ್ಲಿಯನ್ನು ಹಾಕಿ ಕಾಮಗಾರಿ ಪೂರ್ಣಗೊಳಿಸದೆ ಹಾಗೇ ಬಿಡಲಾಗಿದೆ. ಆರು ತಿಂಗಳ ಹಿಂದೆ ಜಲ್ಲಿಯನ್ನು ಹಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ರಸ್ತೆ ರಾಜ ಎಂಬ ಬಿರುದು ಪಡೆದುಕೊಂಡಿರುವ ಹೊಳಲ್ಕೆರೆ ಶಾಸಕರಿಗೆ ಗೌಡಿಹಳ್ಳಿ ರಸ್ತೆ ಹಾಗೂ ವಿದ್ಯಾರ್ಥಿಗಳ ಗೋಳು ಕಣ್ಣಿಗೆ ಕಾಣುತ್ತಿದೆಯೋ ಇಲ್ಲವೋ ತಿಳಿಯುತ್ತಿಲ್ಲ ಹೊಳಲ್ಕೆರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಹೆಚ್. ಬೋರನಹಳ್ಳಿ ಆರೋಪಿಸಿದ್ದಾರೆ.

ಕೇವಲ ಸ್ವಯಂ ಘೋಷಿತ ರಸ್ತೆ ರಾಜ ಎಂಬ ಪಟ್ಟ ಅಲಂಕರಿಸಿ ಅಡ್ಡಾಡಿದರೆ ಸಾಲದು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೆ ಕೂಡಲೇ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಲಿ. ಇಲ್ಲವಾದರೆ ರಸ್ತೆ ತಡೆ ಮೂಲಕ ಪ್ರತಿಭಟನೆ ಮಾಡಲಾಗುವುದು ಎಚ್ಚರಿಸಿದ್ದಾರೆ.