LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ನಾಟಿ ಮಾಡಿ ರಸ್ತೆ ಸರಿಪಡಿಸುವಂತೆ ಪ್ರತಿಭಟನೆ

ಕವಿತಾಳ: ಪಟ್ಟಣದ ರಾಯಚೂರು -ಲಿಂಗಸೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೆಸರು ಗದ್ದೆಯಾಗಿದ್ದು ದುರಸ್ತಿ ಕಾಣದೆ ಹದಗೆಟ್ಟಿದೆ. ಇದರಿಂದ ಬೇಸತ್ತ ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಮತ್ತು ಮಹಿಳಾ ಸಂಘಟನೆಯ ಪದಾಧಿಕಾರಿಗಳು ರಸ್ತೆ ನಡುವೆ ಭತ್ತ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.

 

ಕಳೆದ ವರ್ಷ 21 ಕೋಟಿ ರೂಪಾಯಿ ವೆಚ್ಚದ ಚರಂಡಿ, ರಸ್ತೆ ದುರಸ್ತಿ , ಬೀದಿ ದೀಪ ಅಳವಡಿಕೆ ಕಾಮಗಾರಿಗೆ  ಸಚಿವರಾದ ಎನ್ ಎಸ್ ಬೋಸ್ ರಾಜ್ ಮತ್ತು ಶಾಸಕ ಜಿ ಹಂಪಯ್ಯ ನಾಯಕ್ ಶಂಕು ಸ್ಥಾಪನೆ ನೆರವೇರಿಸಿದರು ಆದರೆ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕಾಮಗಾರಿ ನಡೆಯುತ್ತಿದೆ ಎಂದು ಭೀಮ್ ಆರ್ಮಿ ಸಂಘಟನೆಯ  ಪದಾಧಿಕಾರಿಗಳು ಆರೋಪಿಸಿದರು.



ಭೀಮ್ ಆರ್ಮಿ ಹೋಬಳಿ ಘಟಕ ಅಧ್ಯಕ್ಷ ಅಜಪ್ಪ ಬುಳ್ಳಾಪುರ ಮಾತನಾಡಿ ಮಳೆಗಾಲವಾಗಿದ್ದರಿಂದ ತಗ್ಗು ದಿನ್ನೆಗಳು ಬಿದ್ದು ನೀರು ನಿಂತು ವಾಹನ ಸವಾರರು ಮತ್ತು ಅಕ್ಕ ಪಕ್ಕದಿಂದ ಬರುವ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕಾದ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ

 

ಗುಂಡಿಗಳು ನೀರಿನಲ್ಲಿ ಮುಚ್ಚಿಹೋಗಿರುವುದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡೇ ಸಂಚರಿಸಬೇಕಾಗಿದೆ. ಆದರೂ ಪ್ರತಿವರ್ಷ ಇದೆ ಪರಿಸ್ಥಿತಿ.  ಪ್ರತಿ ವರ್ಷ ಮಳೆಗಾಲದಲ್ಲಿ ಈ ಸ್ಥಿತಿ ನಿರ್ಮಾಣವಾಗುವುದರಿಂದ ಜನಪ್ರತಿನಿಧಿಗಳಿಗೆ ಹಾಗೂ  ಅಧಿಕಾರಗಳಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.



ಭೀಮ್ ಆರ್ಮಿ ಗೌರವಾಧ್ಯಕ್ಷ ಹುಚ್ಚಪ್ಪ ಬುಳ್ಳಾಪುರ ಮಾತನಾಡಿ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಬಗ್ಗೆ ಚಕಾರ ಎತ್ತಿಲ್ಲ. ಹಲವು ಅಧಿಕಾರಿಗಳು ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ಆದರೆ ರಸ್ತೆ ಮಾತ್ರ ಹದಗೆಟ್ಟಿದೆ. ಬಸ್‌ಗಳು ಸಂಚಾರ ಮಾಡುತ್ತಿದ್ದು, ಓಲಾಡುತ್ತವೆ. ರಸ್ತೆ ಕೆಸರು ಗದ್ದೆಯಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಮಹಿಳಾ ಘಟಕ ಅಧ್ಯಕ್ಷರು ಯಲ್ಲಮ್ಮ ತೆಲಗರು, ಗೌರಮ್ಮ ಕೆಳಗೇರಿ, ದುರ್ಗಮ್ಮ ಬುಳ್ಳಾಪುರ, ಚಿನ್ನಮ್ಮ ಮ್ಯಾಗಳಮನಿ, ಲಕ್ಷ್ಮಿ ಬುಳ್ಳಾಪುರ್ ,ಆಟೋ ಚಾಲಕರು ಶಂಕರ್ ನಾಗರಾಜ ಮಲ್ಲಿಕಾರ್ಜುನ ಬುಳ್ಳಾಪುರ್ ಮೌನೇಶ ಬಳ್ಳಾಪುರ ಅನಿಮೇಶ ಕೆಳಗೇರಿ ಇನ್ನು ಅನೇಕರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ