LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಪ್ರತಿಭಟನೆ

ಬಳ್ಳಾರಿ : ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಮನವಿಯಲ್ಲಿ ಹಾಕ್ಕೋತ್ತಾಯಗಳನ್ನು ಮಂಡಿಸಿದ ಪ್ರತಿಭಟನಾಕಾರರು, ಎಲ್ಲಾ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರಿನ ಕುಟುಂಬಗಳನ್ನು ಯಾವುದೇ ಷರತ್ತಿಲ್ಲದೆ.ವಯೋಮಿತಿ ಗಮನಿಸದೆ ಸರ್ವೆ ಮಾಡಬೇಕು. 2007ರಲ್ಲಿ ಸರ್ಕಾರವೇ ಸರ್ವೇ ಮಾಡಿದ ದೇವದಾಸಿ ಮಹಿಳೆಯರನ್ನು ವಯೋಮಿತಿ ಹೇರಿ ಸರ್ವೆಯಿಂದ ಹೊರಗಡೆ ಹಿಟ್ಟಿರುವ ಅಧಿಕಾರಿಗಳ ಮೇಲೆ ಕ್ರಮ  ಕೈಗೊಳ್ಳಬೇಕು. ಸರ್ವೆಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು..ಎಲ್ಲಾ ದೇವದಾಸಿ ಮಹಿಳೆಯರಿಗೆ ಸಾಲ ಸೌಲಭ್ಯ ಸಹಾಯಧನ 2 ಲಕ್ಷ ರೂಪಾಯಿ ನೀಡಬೇಕು.  2026 ಬಜೆಟ್ ನಲ್ಲಿ ಎಲ್ಲಾ ದೇವದಾಸಿ ಮಹಿಳೆಯರಿಗೆ ಸಹಾಯ ಧನ ಅಥವಾ ಪಿಂಚಣಿಯನ್ನು 10.000ರೂಗಳ ಹೆಚ್ಚಿಸಬೇಕು. ಎಲ್ಲಾ ದೇವದಾಸಿ ಮಕ್ಕಳಿಗೆ ವಿದ್ಯಾಭ್ಯಾಸ  ಅನುಸಾರ ಉದ್ಯೋಗ ನೀಡಬೇಕು.ಇಲ್ಲದಿದ್ದರೆ ನಿರುದ್ಯೋಗ ಬತ್ತೆ 10,000 ನೀಡಬೇಕು. ಹೆಚ್ಚು ಜಮೀನು ಹೊಂದಿದ ಕುಟುಂಬಗಳಿಂದ ಕೈಗಾರಿಕೆಗಳಿಗೆ ಭೂ ಸ್ವಾಧೀನ ಮಾಡಿವ ಮಾದರಿಯಲ್ಲಿ.ಸ್ವಾಧೀನ ಮಾಡಿ ತಲ 05 ಎಕರೆ ಭೂಮಿ ನೀಡಬೇಕು. ಎಲ್ಲಾ ದೇವದಾಸಿ ಮಹಿಳೆಯರಿಗೆ ಕೆ.ಎಂ.ಇ.ಆರ್.ಸಿ.ಹಣದಿಂದ 80x80 ಜಾಗ ನೀಡಿ12 ಲಕ್ಷ ರೂಪಾಯಿ ಮನೆಗಳನ್ನು ಉಚಿತವಾಗಿ ಕಟ್ಟಿಸಿಕೊಡಬೇಕು.ಮತ್ತು ಉಳಿದ ಜಾಗದಲ್ಲಿ ಹೈನುಗಾರಿಕೆ ಮಾಡಿಕೊಳ್ಳುವುದಕ್ಕೆ 5 ಲಕ್ಷ ಸಹಾಯಧನ ನೀಡಬೇಕು ಮದುವೆ ಸಹಾಯ ಧನಕ್ಕೆ ಅರ್ಜಿ ಹಾಕಿದ ದೇವದಾಸಿ ಮಕ್ಕಳಿಗೆ ಒಂದು ವರ್ಷದಲ್ಲಿ ಹಣ ಬಿಡುಗಡೆ ಮಾಡಬೇಕು. .ನರೇಗಾ ಉಳಿ.ವಿಬಿ ಗ್ರಾಮ್ಮಿ ರದ್ದುಪಡಿಸಿ ಉದ್ಯೋಗ ಖಾತ್ರಿಯಲ್ಲಿ 200 ದಿನಗಳ ಕೆಲಸ ನೀಡಬೇಕು ಕೂಲಿ 1000 ಸಾವಿರ ರೂಪಾಯಿ ನೀಡಬೇಕು  2025ರ ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು  ಗಣಿ ಭಾದ್ಯತಾ ಜಿಲ್ಲೆಗಳ ದೇವದಾಸಿ ಮಹಿಳೆಯರ ವಸತಿ ಸೌಕರ್ಯಕ್ಕೆ ಅಗತ್ಯವಾದ ಹಣವನ್ನು ಸಂಬಂಧಿಸಿದ ನಿಧಿಯ ಮೂಲಕ ಒದಗಿಸಬೇಕು ಯಾವುದೇ ಕಾರಣಕ್ಕೂ ಆ ಸೌಕರ್ಯ ಒದಗಿಸಲು ಯಾವುದೇ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡದೇ ನೇರ ಸಂಬಂಧಿಸಿ ದ ಇಲಾಖೆಯ ಮೂಲಕ ಕ್ರಮ ವಹಿಸಬೇಕು ಎಂದಿದೆ.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಈರಮ್ಮ, ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ ಮಾರಮ್ಮ ಸಂಡೂರು ತಾಲೂಕು ಅಧ್ಯಕ್ಷರು ಹೆಚ್ಚು ದುರುಗಮ್ಮ ಸಂಡೂರು ತಾಲೂಕು ಕಾರ್ಯದರ್ಶಿ ಸಿ  ವೀರೇಶ ಕುರುಗೋಡು ತಾಲೂಕು  ಕಾರ್ಯದರ್ಶಿ ಹುಲಿಗೆಮ್ಮ ಸಂಡೂರು ತಾಲೂಕು ಉಪಾಧ್ಯಕ್ಷರು, ಮತ್ತಿತರರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ