LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ರೈತ ಸಮಿತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ದೇವನಹಳ್ಳಿ ಸುತ್ತಮುತ್ತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಗೆ ಭೂಮಿ ಕೊಡುವ ರೈತರಿಗೆ ನ್ಯಾಯಯುತ ಮಾರುಕಟ್ಟೆ ದರ ನೀಡುವಂತೆ ಒತ್ತಾಯ

ಬೆಂಗಳೂರು:  ದೇವನಹಳ್ಳಿ ಸುತ್ತಮುತ್ತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಕೊಡುವ ರೈತರಿಗೆ ನ್ಯಾಯಯುತ ಮಾರುಕಟ್ಟೆ ದರ ನಿಗದಿಮಾಡುವಂತೆ ದೇವನಹಳ್ಳಿ ಚನ್ನರಾಯಪಟ್ಟಣ ರೈತ ಸಮಿತಿಯಿಂದ ಬೆಂಗಳೂರಿ ಫೀಡಂ ಪಾರ್ಕ್ ನಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತು.



 ಕೆ.ಐ.ಎ.ಡಿ.ಬಿ.ಉದ್ದೇಶಿಸಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಬಳಿ ಕೈಗಾರಿಕಾ ಅಭಿವೃದ್ದಿಗಾಗಿ ಭೂಸ್ವಾಧೀನಪಡಿಸಿಕೊಂಡರೆ ರೈತರ ಭೂಮಿಗೆ ಹೆಚ್ಚು ಪರಿಹಾರ ಮತ್ತು ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿ ನೂರಾರು ರೈತರಿಂದ ಪ್ರತಿಭಟನೆ ನಡೆಸಿದರು.

ಸಮಿತಿ ಸಂಚಾಲಕರುಗಳಾದ ಶ್ರೀನಿವಾಸ್, ಪ್ರಕಾಶ್ ಡೊಡ್ಡೇಗೌಡ, ರಂಗಣ್ಣ, ಜಗದೀಶ್, ಭರತ್, ದೇವರಾಜ್ ರವರ ಜೊತೆಯಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಸಂಚಾಲಕರಾದ ಶ್ರೀನಿವಾಸ್ ಮಾತನಾಡಿ, ಅಭಿವೃದ್ದಿ ಹೆಸರಿನಲ್ಲಿ ಕೆಐಎಡಿಬಿ ರೈತನ ಜಮೀನು ವಶಕ್ಕೆ ಪಡೆಯುವ ಬಗ್ಗೆ ತಕರಾರಿಲ್ಲ.  ಆದರೆ ರೈತರಿಗೆ ಪರ್ಯಾಯ ಜಮೀನು ನೀಡುವುದು ಅಥವಾ ಉತ್ತಮ ಬೆಲೆ ನಿಗದಿ ಹಾಗೂ ಸರ್ಕಾರಿ ಉದ್ಯೋಗ ಅಥವಾ ರೈತನ ಜಮೀನಿನಲ್ಲಿ ನಿರ್ಮಾಣವಾದ ಕಾರ್ಖಾನೆ, ಸಂಸ್ಥೆಯಲ್ಲಿ ಜಮೀನು ಕಳೆದುಕೊಂಡವರಿಗೆ ಉದ್ಯೋಗ ನೀಡುವ ಕೆಲಸ ಮಾಡಿದರೆ ಮಾತ್ರ ಸಹಕಾರ ನೀಡುತ್ತೇವೆ. ಇಲ್ಲದೆ ಹೋದರೆ ಸರ್ಕಾರದ ವಿರುದ್ದ ನಿರಂತರ ಹೋರಾಟ ಮಾಡುತ್ತೇವೆ ಎಂದರು.



ನಮಗೆ ಸರ್ಕಾರಕ್ಕೆ ಭೂಮಿ ಕೊಡಲು ಯಾವುದೇ ಅಕ್ಷೇಪಣೆ ಇಲ್ಲ. ಆದರೆ ಹೆಚ್ಚಿನ ಪರಿಹಾರದ ಬೇಡಿಕೆ ಇದೆ. ಮಕ್ಕಳಗೆ ಉದ್ಯೋಗ ಅವಕಾಶ ಬೇಕಾಗಿದೆ.  ದೇವನಹಳ್ಳಿ ಭಾಗವನ್ನು ಹಸಿರು ವಲಯ ಎಂದು ಘೋಷಿಸಬಾರದು. ನಮಗೆ ವ್ಯವಸಾಯ ಮಾಡಲು ನೀರಿನ ಕೊರತೆ ಇದೆ. 1600 ಅಡಿ ಕೊರೆಸಿದರೂ ನೀರು ಸಿಗುವುದಿಲ್ಲ  ಎಂದು ಹೇಳಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ