ಬೆಂಗಳೂರು : ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಂದು ಶಾಲೆ ಮತ್ತು ಸಂಘ, ಸಂಸ್ಥೆಗಳು ಶ್ರಮಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.
ನಗರದ ಸೆಂಟ್ ಜೋಸೆಫ್ ಪ್ರೌಡಶಾಲೆ ಅವರಣದಲ್ಲಿ ಬಾಸ್ಕೊ ಸಂಸ್ಥೆಯಿಂದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ರಕ್ಷಣೆ ಜಾಗೃತಿ ಅಭಯಾನಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಮಕ್ಕಳು ಆಸೆ ಪಡಬೇಕು. ಅದರೆ ದುರಾಸೆ ಒಳ್ಳೆಯದಲ್ಲ. ಮಕ್ಕಳ ಹಕ್ಕುಗಳ ಕಾನೂನು ಸಮರ್ಪಕವಾಗಿ ಜಾರಿಯಾಗಬೇಕು. ಕಾನೂನಿನಲ್ಲಿ ವಿಚಾರಣೆ ಮಾಡುವ ಸಂಸ್ಥೆಗಳು ಹುರಿಪಿನಿಂದ ಕೆಲಸ ಮಾಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದರು.
ಸಂಯೋಜಕ ರಾಮಸ್ವಾಮಿ, ನಟಿ ಮೋಕ್ಷಿತಾ ಪೈ, ಫಾಧರ್ ವರ್ಗೀಸ್ ಪಲ್ಲಿಪುರಂ, ಕಾರ್ಯಕಾರಿ ನಿರ್ದೇಶಕರು ಜಾನ್ಸನ್ ಕಾರ್ಯಕಮ ನಿರ್ದೇಶಕ, ರಂಗಭೂಮಿ ಕಲಾವಿದ ಯೋಗೇಶ್ ಮಾಸ್ಟರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಾದ ಆಶಾ.ಎಚ್.ಕೆ. ಬಿ.ಎರ್ ಸ್ವಾಮಿ, ಸಂಯೋಜಕ ರಾಮಸ್ವಾಮಿ, ಸಮಾಜ ಸೇವಕ ವಾಸುದೇವ ಶರ್ಮ ಮತ್ತಿತರರು ಉಪಸ್ಥಿತರಿದ್ದರು