LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದೂ ಸಮಾವೇಶದ ಶೋಭಯಾತ್ರೆ: ಮೆರಗು ತಂದ ವಿವಿಧ ಕಲಾತಂಡಗಳು

ಮರಿಯಮ್ಮನಹಳ್ಳಿ: ಹಿಂದೂ ಸಮಾವೇಶದ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಭಾರತ ಮಾತೆ ಭಾವಚಿತ್ರದೊಂದಿಗೆ ಬೃಹತ್‌ ಶೋಭಾ ಯಾತ್ರೆನ್ನು ಕೈಗೊಳ್ಳಲಾಗಿತ್ತು.

ಕೇಸರಿ ಶಾಲು, ಕೇಸರಿ ಪೇಟಾ ತೊಟ್ಟು, ಕೇಸರಿ ಬಾವುಟ ಹಿಡಿದು ಹಿಂದೂ ಯುವಕರು ಸಂತಸದಿಂದ ಹೆಜ್ಜೆ ಹಾಕಿದರು.  ಪಟ್ಟಣದ ಪಟ್ಟಣ ಪಂಚಾಯಿತಿಯಿಂದ ಆರಂಭವಾದ ಯಾತ್ರೆಯು ಮುಖ್ಯರಸ್ತೆ ಹಾಗೂ ನಾಣೀಕೆರಿ ವೃತ್ತದ ಮೂಲಕ ಬೃಹತ್‌ವೇದಿಕೆ ಬಳಿ ಕೊನೆಗೊಂಡಿತು. ಯಾತ್ರೆಯಲ್ಲಿ ಸೊಲ್ಲಾಪುರದ ಡ್ರಮ್‌ಸೆಟ್‌, ಲಂಬಾಣಿ ನೃತ್ಯ, ಜೋಗತಿ ನೃತ್ಯ, ಕೋಲಾಟ, ನಂದಿ ಕೋಲು, ಕಹಳೆ, ವಿವಿಧ ಗೊಂಬೆಗಳು ಸೇರಿದಂತೆ, ಹಲವಾರು ಕಲಾ ತಂಡಗಳು ಮೆರಗು ತಂದವು.



ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮಿ, ನಾಗಲಾಪುರ ಮಠದ ನಿರಂಜನ ಪ್ರಭು ಸ್ವಾಮಿಗಳು, ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ ನಾಯ್ಕ, ಸಮಾವೇಶದ ಅಧ್ಯಕ್ಷ ಡಾ. ಜಿ. ಎಂ ಸೋಮೇಶ್ವರ, ಬಾದಾಮಿ ಮೃತ್ಯುಂಜಯ, ಪದ್ಮಶ್ರೀ ಮಂಜುಮ್ಮ ಜೋಗತಿ,  ಚನ್ನ ಬಸವನಗೌಡ, ಶ್ಯಾಮ್‌ ರಾಜ್‌ ಸಿಂಗ್‌ , ಸಂದೀಪ ಸಿಂಗ್‌, ಕುರಿ ಶಿವಮೂರ್ತಿ, ಬಲ್ಲಾಹುಣಸಿ ರಾಮಣ್ಣ, ಎಸ್‌ ಕೃಷ್ಣನಾಯ್ಕ, ರಾಘವೇಂದ್ರ ಶೆಟ್ಟಿ, ಚಿದ್ರಿ ಸತೀಶ್‌, ಗೋವಿಂದರ ಪರಶುರಾಮ, ಬಿಎಂಎಸ್‌ ಪ್ರಕಾಶ್‌, ಬಿ ಎಸ್‌ ರಾಜಪ್ಪ, ಗರಗ ಪ್ರಕಾಶ, ಕಿಚಿಡಿ ಕೊಟ್ರೇಶ, ಮಜ್ಗಿ ನಾಗರಾಜ, ವಿರೇಶ್ವರ ಸ್ವಾಮಿ, ಎಲ್‌ ಮಂಜುನಾಥ, ಬದರಿನಾಥ ಶೆಟ್ಟಿ, ತಳವಾರ ಬಸವರಾಜ, ವಿಷ್ಣುನಾಯ್ಕ, ಹನುಮನಾಯ್ಕ, ಸಿ.ಡಿ ಯಲ್ಲಪ್ಪ, ಶೇಖರ್‌ ಪೋತಲಕಟ್ಟಿ, ಈ. ಶ್ರೀನಿವಾಸ ಬ್ಯಾಲಕುಂದಿ, ಗಂಡಿ ಬಸವರಾಜ, ರವಿ ಕಿರಣ ಇತರರು ಇದ್ದರು. ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.‌ ಜಾಹ್ನವಿ ನೇತೃತ್ವದಲ್ಲಿ ಸೂಕ್ತ ಬಂದೊಬಸ್ತ್‌ ಕೈಗೊಳ್ಳಲಾಗಿತ್ತು.



ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ನಡೆದ ಹಿಂದೂ ಸಮಾವೇಶ ಶೋಭಾಯಾತ್ರೆಯಲ್ಲಿ ಸಾಗಿದ ಹಿಂದೂ ಬಾಂಧವರಿಗೆ ಖರ್ಜೂರ, ಕಲ್ಲಂಗಡಿ, ತಂಪು ಪಾನೀಯಗಳನ್ನು ಮುಸ್ಲಿಂ ಬಾಂಧವರು ನೀಡಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST