LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಇ ಸ್ವತ್ತು ಮಾಡಿಕೊಡುವಂತೆ ಕರವೇ ಅಧ್ಯಕ್ಷ ಪ್ರಕಾಶ್ ಒತ್ತಾಯ

ನಾಯಕನಹಟ್ಟಿ : ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರಿದ ಜಾಗನೂರ ಹಟ್ಟಿ,  ಚನ್ನಬಸಯ್ಯನಟ್ಟಿ,    ಮಾದಯ್ಯನಹಟ್ಟಿ ,  ಬೋಸ  ದೇವರಹಟ್ಟಿ,  ಕಾವಲು ಬಸವೇಶ್ವರನಗರ, ಈ ಹಳ್ಳಿಗಳು ಪಟ್ಟಣದಿಂದ ಸರಿ 3, ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇರುತ್ತದೆ.  ಇವರಿಗೆ ಈ ಸ್ವತ್ತು ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ದಿಂದ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಪ್ರಕಾಶ್ ರವರು ಮನವಿ ಮಾಡಿಕೊಂಡರು.

ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ರವರಿಗೆ ಮನವಿ ಸಲ್ಲಿಸಿದರು.  ನಂತರ ಮಾತನಾಡಿದವರು,  ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಹಳ್ಳಿ ಹಳ್ಳಿಗೆ ಹೋಗಿ ಎ ಮತ್ತು ಬಿ ಖಾತೆಯನ್ನೂ ಮಾಡಿಕೊಡಬೇಕು.  ಆದರೆ ಈ ಹಳ್ಳಿಗಳಲ್ಲಿ ಬಡ ಜನರು ವಾಸ ಮಾಡುವುದರಿಂದ ಜೀವನ ಮಾಡುವುದೇ ಕಷ್ಟಕರವೆನಿಸಿದೆ.  ಆದ್ದರಿಂದ ಕಂದಾಯವನ್ನು ಕಟ್ಟಲಾಗದೆ ಈ ಖಾತೆಯನ್ನು ಮಾಡಿಸಲು ಹಿಂಜರಿಯುತ್ತಿದ್ದಾರೆ.  ಮತ್ತು 5 ಹಳ್ಳಿಗಳಲ್ಲಿ ಯಾವುದೇ ರೀತಿಯ ಮಂಡಲ ಪಂಚಾಯತಿ ಗ್ರಾಮ ಪಂಚಾಯತಿ ಅವಧಿಯಲ್ಲಿ ಹಕ್ಕುಪತ್ರಗಳನ್ನು ನೀಡಿರುವುದಿಲ್ಲ .  ಸುಮಾರು 45 ರಿಂದ 50 ವರ್ಷದೊಳಗಿನ ಈ ಹಳ್ಳಿಗಳಲ್ಲಿ ಮನೆ ನಿರ್ಮಿಸಿಕೊಂಡು ಜನಗಳು ವಾಸ ಮಾಡುತ್ತಿದ್ದಾರೆ.  ಆದ್ದರಿಂದ ಪ್ರತಿ ಮನೆಗೆ ಭೇಟಿ ನೀಡಿ ಈ ಸ್ವತ್ತು ಮಾಡಿಕೊಡಬೇಕು ಈ ಕೆಲಸವು ಮುಂದಿನ ದಿನಗಳಿಂದ ನಾಯಕನಹಟ್ಟಿ ಪಟ್ಟಣ ಪಂಚಾಯತ್ ನವರು ಆರಂಭಿಸಬೇಕು ಎಂದು ವಿನಂತಿಸಿಕೊಂಡರು.



 ಪ್ರತಿ ಹಳ್ಳಿಗಳಲ್ಲಿ ಖಾತೆ ನಂಬರನ್ನು ಹಾಕಿ ಇ ಸ್ವತ್ತನ್ನು ಮಾಡಿಕೊಡಬೇಕು. ಇವುಗಳನ್ನು ಮಾಡಿಕೊಡಬೇಕಾದ್ರೆ ಸರ್ಕಾರವು ನಿಗದಿಪಡಿಸಿರುವ ಕಂದಾಯ ಮೊತ್ತವನ್ನು ಜಮಾ ಮಾಡಿಕೊಂಡು ಮಾಡಿಕೊಡಬೇಕು . ಆದರೆ ಹಳ್ಳಿಯವರು ಪಂಚಾಯತಿ ಕಚೇರಿ ಅಲೆದಾಡುವ ಸ್ಥಿತಿ ಉಂಟಾಗಿದೆ.  ಹಾಗಾಗಿ ಜನಗಳಿಗೆ ಅನುಕೂಲ ಮಾಡಬೇಕೆಂದು ಕೇಳಿಕೊಂಡರು.

 ಪಟ್ಟಣ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಪ್ರತಿಯೊಂದು ಗ್ರಾಮಗಳ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ನಾಯಕನಹಟ್ಟಿ ಪಟ್ಟಣ ಹೊರತುಪಡಿಸಿ ಪ್ರತಿಯೊಂದು ಗ್ರಾಮಗಳಿಗೆ ಹೋಗಿ ಇ ಖಾತೆ ಮಾಡಿಕೊಡಲಾಗುತ್ತದೆ .ಪಟ್ಟಣ ಪಂಚಾಯತಿ ಸದಸ್ಯರುಗಳು ಸಹಕರಿಸಬೇಕು ಎಂದು ಮಾತನಾಡಿದರು

  ತಾಲೂಕು ಪಂಚಾಯತಿ ಅಧ್ಯಕ್ಷ ಮಂಜುನಾಥ ,ಗೌರವ ಅಧ್ಯಕ್ಷ ಬೋದರಾಜ, ಉಪಾಧ್ಯಕ್ಷರಾದ, ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಣ್ಣ ಹೋಬಳಿ ಅಧ್ಯಕ್ಷ ಪ್ರಕಾಶ್ ಉಪಾಧ್ಯಕ್ಷರು ಓಂಕಾರಪ್ಪ ಗೌರವ ಅಧ್ಯಕ್ಷರು ತಿಪ್ಪೇಸ್ವಾಮಿ ಪ್ರಧಾನ ಕಾರ್ಯದರ್ಶಿ ಓಬಯ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ಕಾರ್ಯದರ್ಶಿ ಉಮೇಶ್ ಸಹ ಕಾರ್ಯದರ್ಶಿ ಉಮೇಶ್ ಮಂಜು ಮನೋಜ್ ಬೋರಯ್ಯ ಹಾಗೂ ಇನ್ನು ಸೇರಿದಂತೆ  ಚಳ್ಳಕೆರೆ ಪದಾಧಿಕಾರಿಗಳು ಮತ್ತು ನಾಯಕನಹಟ್ಟಿ  ಪದಾಧಿಕಾರಿಗಳು ಇದ್ದರು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ