ನಾಯಕನಹಟ್ಟಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಕರ್ನಾಟಕ ಪ್ರದೇಶ ಪರಿಶಿಷ್ಟ ಜಾತಿಗಳ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಧರ್ಮಸೇನಾರವರ ಆದೇಶ ಮತ್ತು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ತಾಜ್‌ಪೀರ್‌ರವರ ಆದೇಶದ ಮೇರೆಗೆ, ಚಿತ್ರದುರ್ಗ ಜಿಲ್ಲಾ ಪರಿಶಿಷ್ಟಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಎಸ್.ಜಯಣ್ಣ ಸೂಚನೆ ಮೇರೆಗೆ, ಪ್ರಸನ್ನ ಜೆ. ವಕೀಲರು ಚಿತ್ರದುರ್ಗ ಜಿಲ್ಲಾ ಪರಿಶಿಷ್ಟ ಜಾತಿಗಳ ಕಾಂಗ್ರೆಸ್ ವಿಭಾಗದ ಚಿತ್ರದುರ್ಗ ಜಿಲ್ಲಾ ಕಾನೂನು ಸಲಹೆಗಾರನಾಗಿ ಕಾಂಗ್ರೆಸ್ ಪಕ್ಷ ಪ್ರಕಟಣೆಯಲ್ಲಿ ಆದೇಶಿಸಿದೆ.
ನೂತನ ಜಿಲ್ಲಾ ಕಾನೂನು ಸಲಹೆಗಾರ ಪ್ರಸನ್ನ ಜೆ. ಮಾತನಾಡಿ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್‌ಪೀರ್, ಎಸ್.ಜಯಣ್ಣ, ಕಣ್ಮೇಶ್, ಕೋಟಿ ಬೊಮ್ಮನಹಳ್ಳಿ, ಕೋಟಪ್ಪ ಹಳಗವಾಡಿ, ರಂಗಸ್ವಾಮಿ, ಮೈಲಾರಪ್ಪ, ಕಲ್ಲೇಶ್ ಚಿತ್ರದುರ್ಗ ಉಪಸ್ಥಿತರಿದ್ದರು.