ವಿವಿಧ ನಾಯಕರ ಭೇಟಿ ಮಾಡಿದ ಪಪಂ ಸದಸ್ಯರು
ನಾಯಕನಹಟ್ಟಿ : ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಂಜುಳ ಶ್ರೀಕಾಂತ್, ನೂತನ ಉಪಾಧ್ಯಕ್ಷೆ ಬೋಸಮ್ಮ ಮಂಜುನಾಥ, ಮಾಜಿ ಉಪಾಧ್ಯಕ್ಷರಾದ ಸರ್ವಮಂಗಳ ಉಮಾಪತಿ ಒಂಬತ್ತನೇ ವಾರ್ಡಿನ ಪಟ್ಟಣ ಪಂಚಾಯತಿ ಮತ್ತು ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ.ಆರ್. ರವಿಕುಮಾರ್, ಪೆದ್ದನ್ ಓಬಯ್ಯ , ಸೈಯದ್ ಅನ್ವರ್ ಜಾಗನೂರ ಹಟ್ಟಿ ಎಂ.ಟಿ. ಮಂಜುನಾಥ , ಈರಕ್ಕ , ಮಹೇಶ್ವರಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಉಮಾಪತಿ ಸೇರಿದಂತೆ ನಾಯಕನಹಟ್ಟಿ ಕಾಂಗ್ರೆಸ್ ಮುಖಂಡರುಗಳು ಬೆಂಗಳೂರಿನ ತಮ್ಮ ನಿವಾಸದಲ್ಲಿರುವ ಮಾಜಿ ಸಂಸದರಾದ ಎನ್ ,ವೈ, ಹನುಮಂತಪ್ಪನವರ ಆರೋಗ್ಯ ವಿಚಾರಿಸಿ ಸನ್ಮಾನಿಸಿದರು.
ನಂತರ ಮೊಳಕಾಲ್ಮೂರು ಶಾಸಕ ಎನ್. ವೈ ಗೋಪಾಲಕೃಷ್ಣ ರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿ ಸನ್ಮಾನಿಸಿದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.