LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಇಸ್ಲಾಂ ಧರ್ಮಕ್ಕೆ ಮತಾಂತರದ ವಿರುದ್ಧ ಪೋಷಕರಿಂದ ಸಿಎಂಗೆ ದೂರು

ಬೆಂಗಳೂರು: ಥಣಿಸಂದ್ರದಲ್ಲಿರುವ ಜಾಮಿಯಾ ಮೊಹಮ್ಮದೀಯ ಮನ್ಸೂರ ಎಂಬ ಸಂಸ್ಥೆ ನಡೆಸುತ್ತಿರುವ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಸಮಾಜ, ದೇಶದ ಏಕತೆ, ಭದ್ರತೆಗೆ ಧಕ್ಕೆ ತರುವಂತಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ತಂದೆಯೊಬ್ಬರು ಸರ್ಕಾರಕ್ಕೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

 

ವಿದ್ಯಾರ್ಥಿಯ ತಂದೆ, ಎಚ್.ಬಿ.ಆರ್. ಬಡಾವಣೆಯ ಅಬ್ದುಲ್ ರಹೀಮ್  ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪೊಲೀಸ್ ಆಯುಕ್ತರು, ಕೊತ್ತನೂರು ಪೊಲೀಸ್ ಠಾಣೆ, ಶಾಲಾ ಶಿಕ್ಷಣ ಆಯುಕ್ತರು ಮತ್ತಿತರರ ಬಳಿ ದೂರು ದಾಖಲಿಸಿದ್ದಾರೆ.

 

ನನ್ನ ಮಗ ಮೂರು ವರ್ಷಗಳಿಂದ ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ನನ್ನ ಮಗನಿಗೆ ನೀಡಿದ ಮೂರು ಅಂಕಪಟ್ಟಿಗಳು, ಶಾಲಾ ಶುಲ್ಕ ರಸೀದಿಗಳು ಕೂಡ ನಕಲಿ. ಇಲ್ಲಿ ದೇಶ ದ್ರೋಹ ಚಟುವಟಿಕೆ ಜೊತೆಗೆ ಮತಾಂತರವೂ ನಿರಂತರವಾಗಿ ನಡೆಯುತ್ತಿದೆ. ಈ ಶಿಕ್ಷಣ ಸಂಸ್ಥೆ ಅನಧಿಕೃತವಾಗಿದ್ದು, ಜೊತೆಗೆ ನೋಂದಣಿಯಾಗದ ಮದರಸ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಊಹಿಸಲೂ ಸಾಧ್ಯವಾಗದ ಹಾಗೂ ವಿವರಿಸುವುದಕ್ಕೂ ಆಗದ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದಿದ್ದಾರೆ.

 

2019 ರ ನವೆಂಬರ್ 24 ರಂದು ಇಲ್ಲಿನ ಮದರಸಾದಲ್ಲಿ ನಡೆದ ಸಮಾವೇಶದಲ್ಲಿ ಇಲ್ಲಿನ ಧರ್ಮಗುರುಗಳು, ಮುಸ್ಲಿಮರು ಒಂದು ಸಾವಿರ ವರ್ಷ ಭಾರತವನ್ನು ಆಳಿದ್ದು, ನಾವೀಗ ಮತ್ತೆ ಈ ದೇಶವನ್ನು ಆಳ್ವಿಕೆ ಮಾಡಬೇಕು ಎಂಬುದು ಸೇರಿದಂತೆ ದೇಶದ ಏಕತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತಾದ ಪ್ರಚೋದಿಸುವ ಹೇಳಿಕೆ ಯೂಟ್ಯೂಬ್ ನಲ್ಲಿ ಈಗಲೂ ಲಭ್ಯವಿದೆ.

 

ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ನಲ್ಲಿರುವ ಜಾಮಿಯಾ ಮಹಮ್ಮದೀಯ ಮನ್ಸೂರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ನಾಜಿಯ ಅನ್ಸಾರಿ ಎಂಬುವರು 2023 ರ ಫೆಬ್ರವರಿ 7 ರಂದು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಗೆ  ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬೇರೆ ಧರ್ಮದವರನ್ನು ವರಿಸಿದ್ದರು. ಆಗ ಈ ಸಮಾವೇಶದಲ್ಲಿ ಈಕೆಯ ಪತಿಯನ್ನು ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು. ಈ ಬಗ್ಗೆ ಮಹಾರಾಷ್ಟ್ರ ಶಿಕ್ಷಣ ಸಂಸ್ಥೆಗೆ ದೂರು ಸಲ್ಲಿಸಿದ ಕಾರಣದಿಂದ ಈಕೆಯನ್ನು ಕೆಲಸದಿಂದ ತೆಗೆಯಲಾಗಿತ್ತು ಎಂದು ಅಬ್ದುಲ್ ರಹೀಮ್ ಆಪಾದಿಸಿದ್ದಾರೆ.



ಧಾರ್ಮಿಕ ಬೋಧನೆ ಹೆಸರಿನಲ್ಲಿ ಮತಾಂತರ ಮಾಡುತ್ತಿದೆ. ಮಹಾರಾಷ್ಟ್ರದ ಅರ್ಷದ್ ಮೊಖ್ತಾರ್, ಅವರ ಪುತ್ರ ರಾಶಿದ್ ಅರ್ಷದ್ ಮೊಖ್ತಾರ್, ಬೆಂಗಳೂರಿನಲ್ಲಿ ಉಸ್ತುವಾರಿ ಖಾಲಿದ್ ಮುಷರ್ರಫ್ ಇದಕ್ಕೆಲ್ಲಾ ಕಾರಣವಾಗಿದ್ದು, ಇವರ ಮೇಲೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತನಿಖೆ ನಡೆದರೆ ಈ ಬಗ್ಗೆ ತನಿಖೆ ನಡೆದರೆ ಸೂಕ್ತ ಪುರಾವೆಗಳನ್ನು ಒದಗಿಸುವುದಾಗಿ ಅವರು ತಿಳಿಸಿದ್ದಾರೆ.

 

ಕಾಶ್ಮೀರದಿಂದ ಬಂದಿದ್ದ ವಿದ್ಯಾರ್ಥಿಯೊಬ್ಬ 2024 ರ ಏಪ್ರಿಲ್ 25 ರಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಇಲ್ಲಿ ವಿವಿಧ ರೀತಿಯ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಗಂಭೀರವಾಗಿ ಆಪಾದಿಸಿದ್ದ. ಇದು ಸಂಪೂರ್ಣವಾಗಿ ಅನಧಿಕೃತ ಸಂಸ್ಥೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ತಕ್ಷಣವೇ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ