LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ನಾಳೆಯಿಂದ ರಾಜೇಶ್ವರಿನಗರದಲ್ಲಿ ಪಾಂಡುರಂಗಸ್ವಾಮಿ ಸಪ್ತಾಹ

ಬಳ್ಳಾರಿ: ಶ್ರಾವಣ ಮಾಸದ ಪ್ರಯುಕ್ತ ಜಗನ್ನಿಯಾಮಕ ಶ್ರೀಹರಿ ವಿಠ್ಠಲ ಪಾಂಡುರಂಗ ರುಕ್ಮಿಣಿ ಸಪ್ತಾಹ ಆಚರಣೆ ಇಲ್ಲಿನ ಎಂ.ರಾಜೇಶ್ವರಿ ನಗರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

 

ನಗರದ ಹಿರಿಯ ಸಂತರಾದ ಡಾ.ಎಸ್.ಎನ್.ಶಾಸ್ತ್ರಿ ವಿ.ಲಕ್ಷ್ಮಣರಾವ್, ಎಸ್.ವಿಶ್ವನಾಥ ಶಾಸ್ತ್ರಿ ವಿ.ನಲ್ಲಾರೆಡ್ಡಿ ಮತ್ತು ವಿ.ಪಾಂಡುರಂಗ ಹಾಗೂ ಇತರೆ ಎಲ್ಲ ಸಂತರ ಸಂಕಲ್ಪದಂತೆ ಕಳೆದ 8 ವರ್ಷಗಳಿಂದಲೂ ಅತ್ಯಂತ ಶ್ರದ್ಧಾಭಕ್ತಿಯಿಂದ ಶ್ರಾವಣ ಮಾಸದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಅಂಗವಾಗಿ ಜು.25ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೋತಿ ಸ್ಥಾಪನೆ, ಸಂಜೆ 4-30ರಿಂದ ಪ್ರವಚನ ಮತ್ತು ನಾಮ ಜಪ, ರಾತ್ರಿ 7 ರಿಂದ 9 ಗಂಟೆಯವರೆಗೆ ಕನ್ನಡದಲ್ಲಿ ಕೀರ್ತನೆ ನಡೆಯಲಿದೆ.



ಜು.26 ಶನಿವಾರದಂದು ಬೆಳಿಗ್ಗೆ 5 ರಿಂದ 6 ಗಂಟೆಯವರೆಗೆ ಕಾಕಡ ಆರತಿ, ಬೆಳಿಗ್ಗೆ 7-30ರಿಂದ ಶ್ರೀ ಜ್ಞಾನೇಶ್ವರಿಯ 9 ಮತ್ತು 12ನೇ ಅಧ್ಯಾಯದ ಸಾಮೂಹಿಕ ಪಾರಾಯಣ, ಬೆ.11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಭಜನೆ, ಸಂಜೆ 4-30ರಿಂದ 6 ಗಂಟೆಯವರೆಗೆ ಪ್ರವಚನ ಮತ್ತು ನಾಮ ಜಪ, ರಾತ್ರಿ 7 ರಿಂದ 8 ಗಂಟೆಯವರೆಗೆ ಕೀರ್ತನೆ, ಜು.27ರಂದು ಭಾನುವಾರ ಬೆಳಿಗ್ಗೆ 5 ರಿಂದ 6 ಗಂಟೆಯವರೆಗೆ ಕಾಕಡ ಆರತಿ, ಬೆಳಿಗ್ಗೆ 9 ಗಂಟೆಯಿಂದ ಶ್ರೀ ಪಾಂಡುರಂಗಸ್ವಾಮಿ ಮತ್ತು ರುಕ್ಮಿಣಿ ದೇವಿಯ ಮೂರ್ತಿಗಳ ಭವ್ಯ ಮೆರವಣಿಗೆಯೊಂದಿಗೆ ನಗರ ಪ್ರದಕ್ಷಿಣೆ, ದಿಂಡಿ ಮಹೋತ್ಸವ, ಬಳಿಕ ಮಹಾಮಂಗಳಾರತಿ ಜರುಗಲಿದೆ. ಮಧ್ಯಾಹ್ನ 12ಗಂಟೆಯಿಂದ ಸಂತರ ಸಮಾರಾಧನೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ