LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈರುಳ್ಳಿ ದರ ಕುಸಿತ : ಕಂಗಾಲಾದ ರೈತ

ಟಿ.ಟಿ.ಹರೀಶ್ ತಿಮ್ಮಪ್ಪಯ್ಯನಹಳ್ಳಿ.

ನಾಯಕನಹಟ್ಟಿ : ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಬೆಳೆದ ರೈತ ದರ ಕುಸಿತಗೊಂಡಿರುವ ಹಿನ್ನಲೆಯಲ್ಲಿ ಈರುಳ್ಳಿ ಬೆಳೆಗಾರರು ಕಣ್ಣೀರಿನಿನಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದಿದೆ. ವ್ಯಾಪಾರಸ್ಥರು ಬರದೆ ಇರುವುದರಿಂದ ಚೀಲದಲ್ಲಿಯೇ ಕೊಳೆತು ಹೋಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಹೊಲದಿಂದ ಕಿತ್ತ ಈರುಳ್ಳಿಗಳನ್ನು ಚೀಲಗಳಿಗೆ ತುಂಬಿಸಿ ಇವತ್ತು ಅಥವಾ ನಾಳೆ ಬೆಲೆ ಸಿಗಬಹುದು ಎಂದು ರೈತರು ಕಾದು ಕುಳಿತುಗೊಂಡಿದ್ದಾರೆ. ಹಾಯ್ಕಲ್ ಗ್ರಾಮದಲ್ಲಿ ಅತೀ ಹೆಚ್ಚು ರೈತರು ಈರುಳ್ಳಿ ಬೆಳೆಯನ್ನು ಬೆಳೆಯುತ್ತಾರೆ. ಈರುಳ್ಳಿ ಬೆಳೆದು ಅಧಿಕ ಲಾಭ ಕೂಡ ಗಳಿಸುತ್ತಿದ್ದರು. ಆದರೆ ಈ ವರ್ಷ ಈರುಳ್ಳಿ ದರ ಕುಸಿತಗೊಂಡಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.

ಕ್ವಿಂಟಲ್‌ಗೆ 200-250 ಮಾರಾಟವಾಗುತ್ತಿದೆ. ಇದರಿಂದ ಬಿತ್ತನೆ ಕಟಾವು ಮಾಡಿದ ಖರ್ಚು ಕೂಡ ಬಾರದಂತಾಗಿದ್ದು ಬೆಳೆ ಕುಸಿತದಿಂದ ರೈತ ನಷ್ಟ ಅನುಭವಿಸುತ್ತಿದ್ದಾರೆ. ಖರ್ಚು ಮಾಡಿದ ಹಣ ಸಹ ಬರದೆ ರೈತ ಆಕಾಶದತ್ತ ಮುಖ ಮಾಡಿದ್ದಾನೆ. ಈ ವರ್ಷ ಈರುಳ್ಳಿ ಬೆಲೆ ಬಾರಿ ಪ್ರಮಾಣದಲ್ಲಿ ಕುಸಿತಗೊಂಡಿದ್ದು ರೈತರನ್ನು ಕಂಗಾಲು ಮಾಡಿದೆ. ರೈತರು ಯಾವಾಗ ಬೆಲೆ ಜಾಸ್ತಿಯಾಗುತ್ತೋ ಎಂದು ತಾವು ಸಾಲ ಮಾಡಿ ಬೆಳೆದ ಈರುಳ್ಳಿಯನ್ನು ಇಟ್ಟುಕೊಂಡಿದ್ಧಾರೆ. ಮಾರ್ಕೆಟ್‌ನಲ್ಲಿ ಕಡಿಮೆ ಬೆಲೆ ಕೇಳುತ್ತಿರುವುದಕ್ಕೆ ಇತ್ತೀಚಿನ ರೈತರುಗಳು ಬೆಂಗಳೂರು ಯಶವಂತಪುರ ನಗರ ಮಾರ್ಕೆಟ್‌ಗೆ ತೆಗೆದುಕೊಂಡು ಹೋಗದೆ ಆತಂಕ ಪಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಸಿಕ್ಕಾಪಟ್ಟೆ ಡಿಮ್ಯಾಂಡ್ ಆಗಿದ್ದಾರೆ. ಈರುಳ್ಳಿ ಕೀಳುವುದಕ್ಕೆ ಇನ್ನೀತರ ಕೆಲಸಗಳಿಗೆ ಬರಬೇಕು ಎಂದರೆ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೂ 1 ದಿನಕ್ಕೆ 600 ಹಣ ಕೇಳುತ್ತಾರೆ. ಇತ್ತ ಈರುಳ್ಳಿ ಬೆಲೆ ನೋಡಿದರೆ ಲಕ್ಷಾಂತರ ಖರ್ಚು ಮಾಡಿ ಬೆಳೆದಿರುವ ಬೆಳೆಯ ಅರ್ಧಷ್ಟು ಬೆಲೆ ಕೈಗೆ ಸಿಗುತ್ತಿಲ್ಲ. ಎಷ್ಟೋ ರೈತರು ಬೆಸರದಿಂದ ವ್ಯಕ್ತಪಡಿಸಿದರು.



ಹಾಯ್ಕಲ್ ಗ್ರಾಮದ ನಾಗರಾಜ್‌ರಡ್ಡಿ ಮಾತನಾಡಿ ನಮ್ಮ ಹಾಯ್ಕಲ್ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿಯನ್ನು ಬೆಳೆಯುತ್ತೇವೆ. ಒಮ್ಮೊಮ್ಮೆ ಈರುಳ್ಳ ಬೆಲೆ ಗಗನಕ್ಕೆರುತ್ತದೆ ಆದರೆ ಬೆಲೆ ಕುಸಿದರೆ ಮಾತ್ರ ಪಾತಳಕ್ಕೆ ಇಳಿದು ಹೋಗುತ್ತದೆ. ರೈತರು ಇಂತ ಸಮಯದಲ್ಲಿ ಏನು ಮಾಡಬೇಕು ಎಂಬುವುದೆ ತಿಳಿಯದಂತಾಗಿದ್ದು ಈರುಳ್ಳಿ ಬೆಳೆ ಕುಸಿತದಿಂದ ಕಂಗಾಲಾಗಿರುವ ರೈತರು ಈರುಳ್ಳಿ ಬೆಂಬಲ ಬೆಲೆಯನ್ನು ಖರಿದಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಈರುಳ್ಳಿ ಬೆಳೆಯುವುದಕ್ಕೆ 2 ಲಕ್ಷ ರೂ ಬಂಡವಾಳ ಹಾಕಿದ್ದೇವೆ, ಆದರೆ ಈಗ ಮಾರಿದರೆ ಸುಮಾರು 15 ರಿಂದ 20 ಸಾವಿರ ಸಿಗಬಹುದಷ್ಟೆ. ವ್ಯಾಪಾರಸ್ಥರು ಇತ್ತಕಡೆ ಬರುತ್ತಿಲ್ಲ. ಕಳೆದ ವರ್ಷ 2 ಸಾವಿರ ರೂ ಇದ್ದ 1 ಮೂಟೆ ಈಗ 200 ರೂ ಆಗಿದೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದೆ ಆದರೆ ಈರುಳ್ಳಿಯ ದರ ಸಿಗದೆ ಸಾಲಗಾರರಿಗೆ ಯಾವ ರೀತಿ ಮುಖ ತೋರಿಸಬೇಕಾಗಿದೆ. ಹಾಯ್ಕಲ್ ಗ್ರಾಮದಲ್ಲಿ ದಾದಾಪೀರ್, ಬೋರಣ್ಣ, ನಾಗರಾಜ್‌ನಾಯ್ಕ ಇನ್ನೂ ಹಲವಾರು ರೈತರುಗಳು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಈರುಳ್ಳಿ ಶೇಖರಣೆ ಮಾಡಿದರೆ ಕೊಳೆತು ಹೋಗುವ ಭಯ ರೈತರಲ್ಲಿ ತೊಡಗಿದೆ. ತಲಾ ಎಕರೆಗೆ 50 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದರೆ ಸರ್ಕಾರ ಮಾತ್ರ ರೈತರ ಕಷ್ಟಗಳನ್ನು ಆಲಿಸಲು ಮುಂದಾಗುತ್ತಿಲ್ಲ ಎಂದು ಅನ್ನದಾತರು ಆಕ್ರೋಷ ಹೊರ ಹಾಕುತ್ತಿದ್ದಾರೆ. ರೈತರ ಬೆವರು ಸುರಿಸಿ ದುಡಿದ ಈರುಳ್ಳಿ ಬೆಲೆ ಸಂಪೂರ್ಣ ಹಾಳಾಗಿದೆ. ಈರುಳ್ಳಿ ಬೆಲೆ ಬೆಳೆಯಲು ಎಕರೆಗೆ 80 ಸಾವಿರದಿಂದ 1 ಲಕ್ಷ ರೂ ಖರ್ಚಾಗುತ್ತದೆ. ಸಾಲ ಸೂಲ ಮಾಡಿ ಈರುಳ್ಳಿ ಬೆಳೆದು ಈಗ ಲಕ್ಷಲಕ್ಷ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಹಾಯ್ಕಲ್ ಗ್ರಾಮದ ಬೋರಣ್ಣ ಅಳಲು ತೋಡಿಕೊಂಡರು.



ನಮ್ಮ ಹಾಯ್ಕಲ್ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿಯನ್ನು ಬೆಳೆಯುತ್ತೇವೆ. ಒಮ್ಮೊಮ್ಮೆ ಈರುಳ್ಳ ಬೆಲೆ ಗಗನಕ್ಕೆರುತ್ತದೆ ಆದರೆ ಬೆಲೆ ಕುಸಿದರೆ ಮಾತ್ರ ಪಾತಳಕ್ಕೆ ಇಳಿದು ಹೋಗುತ್ತದೆ. ರೈತರು ಇಂತ ಸಮಯದಲ್ಲಿ ಏನು ಮಾಡಬೇಕು ಎಂಬುವುದೆ ತಿಳಿಯದಂತಾಗಿದ್ದು ಈರುಳ್ಳಿ ಬೆಳೆ ಕುಸಿತದಿಂದ ಕಂಗಾಲಾಗಿರುವ ರೈತರು ಈರುಳ್ಳಿ ಬೆಂಬಲ ಬೆಲೆಯನ್ನು ಖರಿದಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ನಾಗರಾಜ್ರಡ್ಡಿ, ಪ್ರಗತಿ ಪರ ರೈತ, ಹಾಯ್ಕಲ್


ರೈತರ ಬೆವರು ಸುರಿಸಿ ದುಡಿದ ಈರುಳ್ಳಿ ಬೆಲೆ ಸಂಪೂರ್ಣ ಹಾಳಾಗಿದೆ. ಈರುಳ್ಳಿ ಬೆಲೆ ಬೆಳೆಯಲು ಎಕರೆಗೆ 80 ಸಾವಿರದಿಂದ 1 ಲಕ್ಷ ರೂ ಖರ್ಚಾಗುತ್ತದೆ. ಸಾಲ ಸೂಲ ಮಾಡಿ ಈರುಳ್ಳಿ ಬೆಳೆದು ಈಗ ಲಕ್ಷಲಕ್ಷ ನಷ್ಟ ಅನುಭವಿಸುವಂತಾಗಿದೆ.


ಹಾಯ್ಕಲ್ ಗ್ರಾಮದ ಬೋರಣ್ಣ, ರೈತ


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST